HomePage_Banner
HomePage_Banner
HomePage_Banner

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ನವರಾತ್ರಿ ಉತ್ಸವ ಅಯುಧ ಪೂಜೆ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ರೆಂಜಿಲಾಡಿ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.೨೪ರಂದು ಅಯುಧ ಪೂಜೆ ಕಾರ್ಯಕ್ರಮ ನಡೆಯಿತು. ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಹೆಬ್ಬಾರ್ ರವರ ನೇತೃತ್ವದಲ್ಲಿ ಆರ್ಚಕರಾದ ರವಿ ಭಟ್ ಹಾಗೂ ಚಂದ್ರಭಟ್ ವಾಹನಗಳಿಗೆ ಅಯುಧಪೂಜೆ ಕಾರ್ಯ ನೆರವೇರಿಸಿದರು. ಮಧ್ಯಾಹ್ನ ದೈವಸ್ಥಾನದಲ್ಲಿ ಮಹಾ ಪೂಜೆ ನಡೆಯಿತು. ಕೋವಿಡ್ – ೧೯ ಕೋರೊನಾ ಬಾಧೆಯಿಂದ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಿಗ್ಗೆಯಿಂದ ಸಂಜೆ ತನಕ ಸರಳ ರೀತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ವಾಹನ ಚಾಲಕ ಮಾಲಕರು ತಮ್ಮ ತಮ್ಮ

ವಾಹನಗಳಿಗೆ ಪೂಜೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ದೈವಸ್ಥಾನದ ಅನುವಂಶಿಯ ಮೂಕ್ತೇಸರರಾದ ಅಶೋಕ್ ಜೈನ್ ಗುತ್ತುಮನೆ, ಆಡಳಿತ ಮಂಡಳಿ ಅಧ್ಯಕ್ಷ ಮೃತ್ಯುಂಜಯ ಬಿಢೆ ಕೆರೆತೋಟ ಕಾರ್‍ಯದರ್ಶಿ ಶ್ರೀಧರ ಗೌಡ ಗೋಳ್ತಿಮಾರ್, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ಕಾರ್ಯದರ್ಶಿ ಉಮೇಶ್ ಸಾಕೋಟೆಜಾಲು, ಕೋಶಾಧಿಕಾರಿ ಪದ್ಮನಾಭ ಗೌಡ ಕೇಪುಂಜ, ಆಡಳಿತ ಮಂಡಳಿ ಸದಸ್ಯರಾದ ಸೋಮಶೇಖರ ನಡುಗುಡ್ಡೆ, ಉಮೇಶ ಅರ್ತಿತಡಿ, ದಯಾನಂದ ಕಲ್ನಾರು, ನೇಮಣ್ಣ ಗೌಡ ಕಲ್ನಾರು, ಪರಿಚಾರಕರಾದ ವಿಜಯಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ಡೀಕಯ್ಯ ಗೌಡ ಪಾಲೆತ್ತಡಿ, ಲಿಂಗಪ್ಪ ಗೌಡ ಬಾಂತಾಜೆ, ಸೀತಾರಾಮ ಗೌಡ ಅಲೆಕ್ಕಿ, ಡೀಕಯ್ಯ ಗೌಡ ಪಾಡ್ಲ, ಮಾಜಿ ಅಧ್ಯಕ್ಷ ರಾಮಚಂದ್ರ ಗೌಡ ಎಲುವಾಳೆ, ಮಾಜಿ ಕಾರ್‍ಯದರ್ಶಿ ಬಾಲಕೃಷ್ಣ ಉಳಿಪ್ಪು, ಪ್ರಮುಖರಾದ ಬಾಲಪ್ಪ ಗೌಡ ಮಾರಪ್ಪೆ, ಸೇರಿದಂತೆ ಊರ ಪರವೂರ ಭಕ್ತಾಧಿಗಳು ಆಗಮಿಸಿ ಅಮ್ಮನವರ ಪ್ರಸಾದ ಸ್ವೀಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.