HomePage_Banner
HomePage_Banner
HomePage_Banner

ಪುತ್ತೂರು ಬಂಟರ ಸಂಘದಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ವಿದ್ಯಾನಿಧಿಗೆ ಸಮಾಜ ಭಾಂದವರು ಪೂರ್ಣ ಸಹಕಾರ ಬೇಕು- ಜಗನ್ನಾಥ ರೈಮಾದೋಡಿ

ಪುತ್ತೂರು: ಬಂಟ ಸಮಾಜದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಬೇಕು ಎಂಬ ನೆಲೆಯಲ್ಲಿ ಬಂಟರ ಸಂಘದಿಂದ ಸ್ಥಾಪಿಸಲಾದ ವಿದ್ಯಾನಿಧಿಯು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ತುಂಬಾ ಸಂತೋಷ ತಂದಿದೆ, ವಿದ್ಯಾನಿಧಿಯು ಮತ್ತಷ್ಟು ಗಟ್ಟಿಯಾಗಬೇಕು ಈ ನೆಲೆಯಲ್ಲಿ ಬಂಟ ಸಮಾಜ ಭಾಂದವರು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು ಎಂದು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಹೇಳಿದರು.

ಅವರು ಅ. ೨೪ ರಂದು ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ತಾಲೂಕು ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದಲ್ಲಿ ಪುತ್ತೂರು ಎಂ.ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ ವಿದ್ಯಾರ್ಥಿ ವೇತನವನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉದ್ಯೋಗ ಪಡೆದ ಬಳಿಕ ಬಂಟರ ಸಂಘದ ವಿದ್ಯಾನಿಧಿಗೆ ಅರ್ಥಿಕ ಸಹಕಾರವನ್ನು ನೀಡಬೇಕು ಎಂದು ವಿನಂತಿಸಿದರು.

ಒಂದು ಕೋಟಿ ಠೇವಣಿ ಆಗಬೇಕು-ಬೂಡಿಯಾರ್ ರಾಧಾಕೃಷ್ಣ ರೈ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಸ್ವಾಗತಿಸಿ, ಮಾತನಾಡಿ ವಿದ್ಯಾನಿಧಿಯಲ್ಲಿ ಈಗಾಗಲೇ ೧೪ ಲಕ್ಷ ಠೇವಣಿ ಇದ್ದು, ಮುಂದಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿ ಠೇವಣಿ ಆಗಬೇಕು, ಇದಕ್ಕೆ ಸಮಾಜ ಭಾಂದವರ ಸಹಕಾರ ಅಗತ್ಯ ಎಂದರು, ಪುತ್ತೂರಿನ ಅಗರಿ ನವೀನ್ ಭಂಡಾರಿರವರು ವಿದ್ಯಾನಿಧಿ ಯೋಜನೆಗೆ ೨೫ ಸಾವಿರ ರೂಪಾಯಿ ಚೆಕ್‌ನ್ನು ನೀಡಿದ್ದಾರೆ ಎಂದು ತಿಳಿಸಿದರು.

ಬಹುದೊಡ್ಡ ಕೊಡುಗೆ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಬಂಟ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಸಾಧನೆ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ವಿದ್ಯಾನಿಧಿಗೆ ಪೂರ್ಣ ಸಹಕಾರ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಬಂಟರ ಸಂಘದ ಅಧ್ಯಕ್ಷನಾಗಿದ್ದ ವೇಳೆ ನಾನು ವಿದ್ಯಾನಿಧಿಗೆ ಪೂರ್ಣ ರೀತಿಯ ಸಹಕಾರವನ್ನು ನೀಡಿದ್ದೇನೆ, ಮಾತೃ ಸಂಘದಿಂದಲೂ ಮುಂದೆಯೂ ವಿದ್ಯಾನಿಧಿಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದರು. ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನು ೯೮ ವಿದ್ಯಾರ್ಥಿಗಳು ಸ್ವೀಕರಿಸಿದರು.

ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಸವಣೂರು ಕೆ.ಸೀತಾರಾಮ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕೆರೆ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಣಾಮ್ ಶೆಟ್ಟಿರವರುಗಳು ಉಪಸ್ಥಿತರಿದ್ದರು.

ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್‍ಯಕ್ರಮ ನಿರೂಪಿಸಿ, ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು, ಬಂಟರ ಸಂಘದ ಉಪಾಧ್ಯಕ್ಷ ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಜೋತೆ ಕಾರ್‍ಯದರ್ಶಿ ಸಬಿತಾ ಭಂಡಾರಿ, ವಿಶೇಷ ಅಹ್ವಾನಿತರಾದ ಹರಿಣಾಕ್ಷಿ ಜೆ ಶೆಟ್ಟಿ, ಬಂಟರ ಸಂಘದ ಕಚೇರಿ ಸಹಾಯಕಿ aರಂಜಿನಿ ಶೆಟ್ಟಿರವರುಗಳು ವಿವಿಧ ಕಾರ್‍ಯಕ್ರಮಗಳನ್ನು ನಿರ್ವಹಿಸಿದರು. ಬಂಟರ ಮಾತೃ ಸಂಘದ ನಿರ್ದೇಶಕ ಚಂದ್ರಹಾಸ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ರೋಶನ್ ರೈ ಬನ್ನೂರು, ನಿರ್ದೇಶಕರುಗಳಾದ ಕರುಣಾಕರ್ ರೈ ದೇರ್ಲ, ಮನೋಹರ್ ರೈ ಎ.ಬಿ, ಅಶೋಕ್ ಕುಮಾರ್ ರೈರವರುಗಳು ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ಮಾತೃ ಸಂಘ, ಬಂಟರ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ವಿಶೇಷ ಆಹ್ವಾನಿತರುಗಳು ಉಪಸ್ಥಿತರಿದ್ದರು.

ಕಲಿಕೆಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ
ಬಂಟ ಸಮಾಜದ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಮುಂದುವರಿಸಲು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ೪ ಲಕ್ಷ ರೂ, ತನಕ ಸಾಲ ಸೌಲಭ್ಯವನ್ನು ಮಾಡಿಕೊಡಲಾಗುವುದು, ಈ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳ ಪೋಷಕರು ನಮ್ಮನ್ನು ಸಂಪರ್ಕ ಮಾಡಬಹುದು. ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ರೈ ಮಾದೋಡಿರವರು ಸ್ಥಾಪಿಸಿದ ವಿದ್ಯಾನಿಧಿ ಯೋಜನೆ ಬಹುದೊಡ್ಡ ಕೊಡುಗೆಯಾಗಿ ಸಮಾಜಕ್ಕೆ ಲಭಿಸಿದೆ – ಬೂಡಿಯಾರ್ ರಾಧಾಕೃಷ್ಣ ರೈ  ಅಧ್ಯಕ್ಷರು- ಬಂಟರ ಸಂಘ,ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.