HomePage_Banner
HomePage_Banner
HomePage_Banner

ಮಾಯಿದೆ ದೇವುಸ್ ಚರ್ಚ್‌ನಲ್ಲಿ ಆಯುಧಪೂಜೆಯ ಪ್ರಯುಕ್ತ ವಾಹನಗಳ ಮೇಲೆ ಆಶೀರ್ವಚನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರದ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಅ.24ರಂದು ಸಂಜೆ ಮತ್ತು 25ರಂದು ಬೆಳಿಗ್ಗೆ ಆಯುಧಪೂಜೆಯ ಪ್ರಯುಕ್ತ ವಾಹನಗಳ ಮೇಲೆ ಆಶೀರ್ವಚನ ಕಾರ್ಯಕ್ರಮ ಜರಗಿತು.

ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಧರ್ಮಗುರುಗಳಾದ ವಂ|ವಿಜಯ್ ಲೋಬೋ, ವಂ|ಸುನಿಲ್ ಡಿ’ಸೋಜ, ವಂ|ಆಂಟನಿ ಪ್ರಕಾಶ್ ಮೊಂತೇರೋ, ವಂ|ರಾಯನ್ ಕ್ರಾಸ್ತಾರವರು ವಾಹನಗಳ ಮೇಲೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈದರು. ಈ ಸಂದರ್ಭದಲ್ಲಿ ಸಂದೇಶ ನೀಡಿದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು, ಮನುಷ್ಯನ ದೈನಂದಿನ ಜೀವನದಲ್ಲಿ ವಾಹನಗಳು ಮಹತ್ತರ ಪಾತ್ರ ವಹಿಸುತ್ತವೆ. ಜನಸಾಮಾನ್ಯರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲು ವಾಹನಗಳು ಸಹಕಾರಿಯಾಗಿದೆ ಮಾತ್ರವಲ್ಲದೆ ಕೆಲವು ವಾಹನಗಳು ಮಾನವನ ಬದುಕು ಸಾಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಬಳಸುವ ವಾಹನಗಳ ಮೇಲೆ ಪ್ರೀತಿಯಿರಲಿ ಎಂದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.