HomePage_Banner
HomePage_Banner
HomePage_Banner

ದರ್ಬೆ: ಆರಾಧ್ಯ ಆರ್ಕೇಡ್‌ನಲ್ಲಿ ಇಕೋ ವುಡ್ ಬ್ರ್ಯಾಂಡ್‌ನ ಒಲೇನಾ ಎಂಪ್ರೈಸ್ ಪ್ರೈ.ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬಳಿಯ ಆರಾಧ್ಯ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಇಕೋ ಈ೩ ವುಡ್ ಬ್ರ್ಯಾಂಡ್‌ನ ಶಾಖೆಯಾಗಿರುವ ಒಲೇನಾ ಎಂಪ್ರೈಸ್ ಪ್ರೈ.ಲಿಮಿಟೆಡ್ ಸಂಸ್ಥೆಯು ಅ.25 ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಪಾಲುದಾರರೋರ್ವರಾದ ಸುದರ್ಶನ್ ಶೆಟ್ಟಿಯವರ ಹೆತ್ತವರಾದ ಎಂ.ರವೀಂದ್ರ ಶೆಟ್ಟಿ ಹಾಗೂ ದಯಾವತಿ ಆರ್.ಶೆಟ್ಟಿ ದಂಪತಿ ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿ, ಶ್ಯಾಮ್ ಜ್ಯುವೆಲ್ಸ್ ಪ್ರೈ.ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯರವರು ಇಕೋ ವುಡ್‌ನಿಂದ ಮಾಡಲಾದ ದಾರಂದವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಜಾಗತೀಕರಣದ ಕಾಲಘಟ್ಟದಲ್ಲಿ ಪರಿಸರ ಉಳಿಯಬೇಕಾದರೆ ಮರಗಿಡಗಳ ಸಂರಕ್ಷಣೆ ಅಗತ್ಯವಾಗಿ ಮಾಡಬೇಕಾಗಿದೆ. ಆದರೆ ಒಂದು ಕಡೆ ಸಸಿಗಳನ್ನು ನೆಡುವುದು, ಮತ್ತೊಂದು ಕಡೆ ಮರಗಳನ್ನು ಕಡಿಯುವುದು ವಿಪರ್ಯಾಸವೆನಿಸಿದೆ. ಮನುಷ್ಯ ಬೆಳವಣಿಗೆ ಹೊಂದಿದಂತೆ ಹೊಸ ಹೊಸ ವಿಷಯಗಳ ಆವಿಷ್ಕಾರವಾಗುತ್ತಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಮರಗಳನ್ನು ಬಳಸದೆ ಮರದಂತೆ ಕಾಣುವ ನೂತನ ಉದ್ಯಮವನ್ನು ಆರಂಭಿಸುವುದರ ಮೂಲಕ ಹೊಸ ಆವಿಷ್ಕಾರಕ್ಕೆ ಭಾಷ್ಯವನ್ನು ಬರೆದಿದ್ದಾರೆ. ಪಾಂಗ್ಲಾಯಿಯಲ್ಲಿರುವ ನನ್ನ ನೂತನ ಮನೆಗೆ ಇಕೋ ವುಡ್‌ನಿಂದ ಮನೆಯ ಅಂದವನ್ನು ಹೆಚ್ಚಿಸಲು ನೂತನ ಸಂಸ್ಥೆಗೆ ವಹಿಸಿಕೊಡುತ್ತೇನೆ ಎಂದು ಹೇಳಿ ಶುಭಹಾರೈಸಿದರು.

ದರ್ಬೆ ಅಶ್ವಿನಿ ಹೊಟೇಲ್ ಹಾಗೂ ಆರಾಧ್ಯ ಆರ್ಕೇಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ್ ರೈಯವರು ಸಂಸ್ಥೆಯಲ್ಲಿ ಸಿಗುವ ಸಲಕರಣೆಗಳ ಹಾಗೂ ಪೀಠೋಪಕರಣಗಳ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಉದ್ಯಮಗಳು ಜನರಿಗೆ ಪರಿಚಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಜೊತೆಗೆ ಇಕೋ ವುಡ್ ನಂತಹ ಉದ್ಯಮವು ಪುತ್ತೂರಿಗೆ ಪ್ರಥಮವಾಗಿದೆ. ಮನೆಗೆ, ಕಮರ್ಷಿಯಲ್‌ಗೆ ಪರಿಸರಸ್ನೇಹಿ ಇಕೋ ವುಡ್‌ನ್ನು ಉಪಯೋಗಿಸಿ ನೂತನ ಸಂಸ್ಥೆಗೆ ಪ್ರೋತ್ಸಾಹಿಸಿ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಜೇಸಿಐ ಅಧ್ಯಕ್ಷ ಹಾಗೂ ನವನೀತ ನರ್ಸರಿಯ ಪಾಲುದಾರರಾದ ವೇಣುಗೋಪಾಲ್ ಎಸ್.ಜೆರವರು ಮಾತನಾಡಿ, ಪ್ಲಾಸ್ಟಿಕ್ ಹಾಗೂ ಮರಗಳ ತ್ಯಾಜ್ಯವನ್ನು ಮರುಬಳಕೆ ಮಾಡುವುದರಿಂದ ಪರಿಸರ ಸಂರಕ್ಷಣೆಗೆ ಒತ್ತು ನೀಡಿದಂತಾಗುತ್ತದೆ. ವಿನೂತನ ಇನ್ನೋವೆಟಿವ್ ಪ್ರಾಡಕ್ಟ್‌ನ್ನು ಈ ಸಂಸ್ಥೆ ಪುತ್ತೂರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ವೃತ್ತಿಯಲ್ಲಿ ತಾನು ಕೃಷಿಕನಾಗಿದ್ದು ಹಾಗೂ ನರ್ಸರಿ ಮೂಲಕ ಗಿಡಗಳ ಉದ್ಯಮವನ್ನು ಮಾಡುವುದರಿಂದ ನಾನು ಇಕೋ ವುಡ್ ಬಗ್ಗೆ ಬಲ್ಲವನಾಗಿದ್ದೇನೆ ಜೊತೆಗೆ ಈ ಉದ್ಯಮವು ವರ್ತಮಾನ ಹಾಗೂ ಭವಿಷ್ಯತ್ ಕಾಲಕ್ಕೆ ಬಹಳ ಉಪಯೋಗಿ ಎನಿಸಿದೆ ಕೂಡ. ಸಂರಕ್ಷಣೆ ಹಾಗೂ ವ್ಯವಹಾರ ಇವೆರಡನ್ನು ಜೊತೆಯಾಗಿ ಮುನ್ನೆಡೆಸುತ್ತಿರುವ ನೂತನ ಸಂಸ್ಥೆಯ ಬಿಸಿನೆಸ್ ಡ್ರೀಮ್ ಯಶಸ್ವಿಯಾಗಲಿ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಕೃಷ್ಣಮೋಹನ್, ಸಂಪನ್ಮೂಲ ವ್ಯಕ್ತಿ ಡಾ.ರಾಜೇಶ್ ಬೆಜ್ಜಂಗಳ, ಜೇಸಿಐನ ಮುರಳೀಶ್ಯಾಂ, ಜಗನ್ನಾಥ ರೈ, ಸ್ವಾತಿ ಜೆ.ರೈ, ರಮೇಶ್ ಕೆ.ವಿ, ಸೀತಾರಾಮ ಶೆಟ್ಟಿ ಕಂಬಳದಡ್ಡ, ಉದ್ಯಾನ ವಿನ್ಯಾಸಕಾರ ರಾಮಕೃಷ್ಣ ಭಟ್, ಪ್ರಭಾತ್ ರೈ, ಪ್ರವೀಣ್ ರೈ, ಉಷಾ ರೈ, ಚಂದಾಡಿ ಜಗತ್ಪಾಲ್ ಶೆಟ್ಟಿ, ಶಶಿಕಿರಣ್ ರೈ ನೂಜಿ, ಸಂಸ್ಥೆಯ ಸಿಬ್ಬಂದಿ ಕಾವ್ಯಶ್ರೀ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಜೆಸಿಐ ಮಾಜಿ ಅಧ್ಯಕ್ಷ ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. 

ಪರಿಸರಸ್ನೇಹಿ, ಮರುಬಳಕೆಯಾಗುವ ಉತ್ಪನ್ನ…
ಮರದ ಪ್ಲಾಸ್ಟಿಕ್ ಸಂಯೋಜನೆಗಳ ಸಂಪೂರ್ಣ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ನಮ್ಮ ಉದ್ಧೇಶ. ನವೀನ ಮತ್ತು ಅಭಿವೃದ್ಧಿಯ ಮೂಲಕ ತ್ಯಾಜ್ಯ ಪಾಲಿಮಾರ್-ಮರ, ನೈಸರ್ಗಿಕ ತ್ಯಾಜ್ಯ ಸಂಯೋಜಿತ ಗುಣಲಕ್ಷಣಗಳನ್ನು ವಿಸ್ತರಿಸುವ ಮತ್ತು ಸಮೃದ್ಧಗೊಳಿಸುವ ಮೂಲಕ ಹೊರತೆಗೆಯುವ ಉತ್ಪನ್ನಗಳು, ಜಾಗತಿಕ ತಾಪಮಾನ ಏರುವಿಕೆ, ಅರಣ್ಯ ನಾಶ ಇದಕ್ಕೆ ಪರ್‍ಯಾಯವಾಗಿ ಯಾವುದೇ ಮರ ಕಡಿಯದೆ, ಆದರೆ ಶೇ.೭೦ ನೋಡಲು ಮರದ ಹಾಗೆಯೇ ಶೋಭಿಸುತ್ತಿರುವ ಗ್ಯಾರಂಟಿಯೊಂದಿಗಿನ ವ್ಯವಸ್ಥೆಯವಾಗಿರುವ ವುಡ್ ಪ್ರಾಡಕ್ಟ್, ನೂರು ಪ್ರತಿಶತ ಮರುಬಳಕೆ ಮಾಡಬಹುದಾದ ಪರಿಸರಸ್ನೇಹಿ, ಕಡಿಮೆ ಖರ್ಚು ಒಳಗೊಂಡ ವುಡ್ ಪ್ಲಾಸ್ಟಿಕ್ ಕೊಂಪೊಸೈಟ್ಸ್(ಡಬ್ಲ್ಯೂಪಿಸಿ) ಪ್ರೊಡಕ್ಟ್ಸ್‌ನ್ನು ಬಳಸಬಹುದಾಗಿದೆ. ಭಾರತದಲ್ಲಿ ಕೇವಲ ಮೂರು ಈ೩ ವುಡ್‌ನ ಉತ್ಪಾದನಾ ಘಟಕಗಳಿದ್ದು, ಇದರಲ್ಲಿ ಕರ್ನಾಟಕವೂ ಸೇರಿದೆ. ಈ೩ ವುಡ್ ಶಾಖೆಯು ಮೈಸೂರು, ಹಾಸನ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಗ್ರಾಹಕರ ಪ್ರೋತ್ಸಾಹ, ಆಶೀರ್ವಾದ ಸದಾ ನಮಗೆ ಬೇಕಾಗಿದೆ -ಸುದರ್ಶನ್ ಶೆಟ್ಟಿ, ಪ್ರಜ್ವಲ್ ರೈ, ಪಾಲುದಾರರು, ಇಕೋ ವುಡ್ ಪ್ರಾಡಕ್ಟ್

ಮೊದಲ ಪ್ರಾಜೆಕ್ಟ್..
ಮುಳಿಯ ಜ್ಯುವೆಲ್ಸ್‌ನ ಕೃಷ್ಣನಾರಾಯಣ ಮುಳಿಯರವರ ಪಾಂಗ್ಲಾಯಿಯಲ್ಲಿರುವ ಮನೆಗೆ ಇಕೋ ಈ೩ ವುಡ್ ಪ್ರಾಡಕ್ಟ್ ಅಳವಡಿಕೆ ಮೂಲಕ ಚಾಲನೆ

ಯಾವುದಕ್ಕೆ ಬಳಸಬಹುದು…
ಇಂಟೀರಿಯರ್, ಎಕ್ಸ್ಟೀರಿಯರ್, ಫೆನ್ಸ್, ರೇಲಿಂಗ್ಸ್, ಫಾಲ್ಸ್ ಸೀಲಿಂಗ್, ಫ್ಲೋರಿಂಗ್, ಆಫೀಸ್ ಪಾರ್ಟಿಶನ್ಸ್, ಕಿಟಕಿ ಮತ್ತು ಬಾಗಿಲು ಫ್ರೇಮ್ಸ್, ಪೋಡಿಯಂ, ಥೆರ್‍ಮಲ್ ಇನ್ಸುಲೇಶನ್ ಪ್ಯಾನೆಲ್ಸ್, ವೇದಿಕೆ, ಆಡಿಟೋರಿಯಂ ಪ್ಯಾನೆಲ್ಸ್, ವಾಲ್ ಪ್ಯಾನೆಲ್ಸ್, ರೈಲ್ವೇ ಸ್ಲೀಪರ್‍ಸ್, ಪ್ಲೇಗ್ರೌಂಡ್ ಇಕ್ವಿಪ್‌ಮೆಂಟ್, ಫರ್ನಿಚರ್, ಸ್ವಿಮ್ಮಿಂಗ್ ಪೂಲ್ ಡೆಕ್, ಪರ್‍ಟಬೆಲ್ ಟಾಲೆಟ್ಸ್, ಇನ್‌ಡೋರ್ ಪ್ಯಾನೆಲ್ಸ್, ಗಾರ್ಡನ್ ಬೆಂಚ್ ಇತ್ಯಾದಿ…

ವೈಶಿಷ್ಟ್ಯತೆಗಳು…
ತೇವಾಂಶ ನಿರೋಧಕ, ಗೆದ್ದಲು ನಿರೋಧಕ, ತುಕ್ಕು ನಿರೋಧಕ, ಬಿಸಿಲಲ್ಲೂ-ಮಳೆಯಲ್ಲೂ ಇಡಬಹುದು, ಹವಾಮಾನ ನಿರೋಧಕ, ಆಮ್ಲ ನಿರೋಧಕ, ಯಾವುದೇ ಬಿರುಕು/ವಿಭಜನೆಯಿಲ್ಲ, ಉಷ್ಣ ನಿರೋಧಕ, ಅಧಿಕ ಬಾಳ್ವಿಕೆ/ಕಡಿಮೆ ನಿರ್ವಹಣೆ, ಹೊರಾಂಗಣ ಹೊಂದಾಣಿಕೆ, ದೀರ್ಘಾಯುಷ್ಯ ಬಾಳ್ವಿಕೆ, ಪರಿಸರಸ್ನೇಹಿ, ೭೦% ವುಡ್ ಕಂಟೆಂಟ್, ೧೦೦% ಮರುಬಳಕೆ, ಗ್ಯಾರಂಟಿ ಖಚಿತ, ಕಡಿಮೆ ಖರ್ಚು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.