HomePage_Banner
HomePage_Banner
HomePage_Banner

ಭಾರತದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ದೊಡ್ಡ ಸವಾಲು: ಕೃಷ್ಣಮೂರ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭೌಗೋಳಿಕ ವ್ಯವಸ್ಥೆ ಸೇರಿದಂತೆ ಹಲವು ವೈವಿಧ್ಯತೆಗಳನ್ನು ಹೊಂದಿರುವ ಭಾರತಕ್ಕೆ ಏಕರೂಪ ಶಿಕ್ಷಣ ವ್ಯವಸ್ಥೆ ಕನಸಿನ ಮಾತು, ಹವಾಮಾನ, ಮಾತೃಭಾಷೆ ಸಹಿತ ಸ್ಥಳೀಯ ವಿಚಾರಧಾರೆಗಳನ್ನು ಹೊಂದಿದ ಪಠ್ಯಕ್ರಮ ಕ್ಕೆ ಆದ್ಯತೆ ದೊರೆತಾಗ ಶಿಕ್ಷಣ ಕ್ಷೇತ್ರದ ಸುಧಾರಣೆ ಸಾಧ್ಯ ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.

ರೋಟರಿ ಪುತ್ತೂರು ಎಲೈಟ್ ಹಾಗೂ ಸುದಾನ ವಸತಿಯುತ ಶಾಲೆಯ ಸಹಯೋಗದಲ್ಲಿ ಶುಕ್ರವಾರ ಸುದಾನ ಎಡ್ವರ್ಡ್‌ ಸಭಾಂಗಣ ದಲ್ಲಿ ನಡೆದ “ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳು ಮತ್ತು ಶಿಕ್ಷಣ” ಎಂಬ ಮಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವಾಮಾನ ವೈಪರೀತ್ಯದ ಕಾರಣಕ್ಕೆ ದೇಶದ ಕೆಲವು ರಾಜ್ಯಗಳಲ್ಲಿ ವಾರ್ಷಿಕ ನಿರ್ದಿಷ್ಟ ದಿನಗಳ ಕಾಲ ಶಾಲಾ ಶಿಕ್ಷಣ ನೀಡುವುದು ಅಸಾಧ್ಯ ಎಂದ ಅವರು, ಸ್ಥಳೀಯ ಇತಿಹಾಸಗಳನ್ನು ಅರಿತುಕೊಂಡೇ ಶಾಲಾನೀತಿಗಳು ತಯಾರಾಗಬೇಕು ಎಂದರು. ಪೆಂಡಮಿಕ್ ಸ್ಥಿತಿಯನ್ನು ಮೀರಿ ನಿಲ್ಲುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದು ಎಂದ ಅವರು, ಐಎಫ್ಎ ವಿವಿಧೆಡೆಗಳಲ್ಲಿ ನಡೆಸಿದ ಪ್ರಯೋಗಗಳನ್ನು ಉಲ್ಲೇಖಿಸಿದರು.

ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಲು, ಅದು ಪ್ರಕಟವಾಗುವಂತೆ ಮಾಡಲು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅದಕ್ಕೆ ಇದು ಸಕಾಲ ಎಂದ ಅವರು, ಮಕ್ಕಳ ನಡೆನುಡಿಗಳ ಹಿಂದೆ ಆಯಾ ಪ್ರದೇಶದ,ಸಮುದಾಯದ ಪ್ರಭಾವ ಇರುತ್ತದೆ. ಹೀಗಾಗಿ ಅವರನ್ನು ಅರಿತು ಸಮರ್ಥನನ್ನಾಗಿಸುವುದು ಒಂದು ಕಲೆ. ಕಲಾಮಾಧ್ಯಮಕ್ಕೆ ಅನಂತ ಸಾಧ್ಯತೆಗಳಿವೆ ಎಂದವರು ವ್ಯಾಖ್ಯಾನಿಸಿದರು. ಐಎಫ್ ಎ ಗ್ರ್ಯಾಂಟಿ ಸುನಿಲ್‌ ಸುಳ್ಯ ತಮ್ಮ ಕಾರ್ಯಯೋಜನೆಯ ಕುರಿತು ವಿಚಾರ ಮಂಡಿಸಿದರು. ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ (ಪ್ರಾಜೆಕ್ಟ್‌) ರೊ.ಆಸ್ಕರ್ ಆನಂದ್, ಶಿಕ್ಷಕಿ ಶ್ರೀಮತಿ ವಿನುತಾ , ರೊ.ಈಶ್ವರ್ ಬೆಡೆಕರ್,
ರೊ.ರಂಜಿತ್ ಮಥಾಯಸ್, ರೊ.ಲವೀನಾ ಹನ್ಸ್ ಉಪಸ್ಥಿತರಿದ್ದರು. ಐಎಫ್ಎ ಗ್ರ್ಯಾಂಟಿ ರೊ.ಮೌನೇಶ ವಿಶ್ವಕರ್ಮ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ಅಮೃತವಾಣಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.