HomePage_Banner
HomePage_Banner
HomePage_Banner

ಭಕ್ತಕೋಡಿಯಲ್ಲಿ ಪ್ರದ್ವಿತ್ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿ ಹಾಗೂ ಸೇವೆಗಳನ್ನೊಳಗೊಂಡ ಪ್ರದ್ವಿತ್ ಡಿಜಿಟಲ್ ಸೇವಾ ಕೇಂದ್ರ ಅ.26ರಂದು ಭಕ್ತಕೋಡಿ ಅಂಚೆ ಕಛೇರಿ ಬಳಿಯಲ್ಲಿ ಶುಭಾರಂಭಗೊಂಡಿತ್ತು. ನೂತನ ಸಂಸ್ಥೆಯನ್ನು ಜಯಂತ್ ನಡುಬೈಲ್ ರವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಜನತೆಗೆ ಈ ಡಿಜಿಟಲ್ ಸೇವಾ ಕೇಂದ್ರದಿಂದ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಹಾಗೂ ಸೇವೆಗಳ ಕ್ಲಪ್ತ ಸಮಯದಲ್ಲಿ ದೊರಕುವಂತಾಗಲಿ. ಈ ಸೇವಾ ಕೇಂದ್ರವು ಇಲ್ಲಿನ ಜನತೆಗೆ ಉಪಯುಕ್ತ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಅವರು ಹೇಳಿದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ರವರು ದೀಪ ಪ್ರಜ್ವಲಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಡಿಜಿಟಲ್ ಯುಗದಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಮತ್ತು ರೈತರಿಗೆ ಪಹಣಿ ಪತ್ರಿಕೆ ಇತರ ಸೇವೆಗಳು ಈ ಸೇವಾ ಕೇಂದ್ರದ ಮೂಲಕ ದೊರಕುವಂತಾಗಲಿ ಈ ಭಾಗದ ಜನತೆಗೆ ಈ ಸೇವಾ ಕೇಂದ್ರ ಅನುಕೂಲವಾಗಲಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ ವಸಂತ, ಶ್ರೀನಿವಾಸ ಎಚ್.ಬಿ., ಶಿವನಾಥ ರಯ ಮೇಗಿನಗುತ್ತು, ಸದಾಶಿವ ಭಂಡಾರಿ, ಸುಬ್ರಹ್ಮಣ್ಯ ಕರಂಬಾರು, ಕಮಲೇಶ್ ಎಸ್.ವಿ., ಶ್ರೀಮತಿ ಈತಾ ಬಿ.ಎಸ್., ಶ್ರೀಮತಿ ತುಳಸಿ ಜನಾರ್ಧನ, ಬಿ.ಕೆ ಸೋಮಶೇಖರ ಅಳಕೆಮಜಲು, ಅನಂದ ಪೂಜಾರಿ ಸರ್ವೆದೋಳಗುತ್ತು ಮತ್ತಿತತರು ಆಗಮಿಸಿ ಶುಭ ಹಾರೈಸಿದರು.

ಸಂಸ್ಥೆಯ ಮ್ಹಾಲಕಿ ಸ್ವಾತಿ ಪ್ರಮೋದ್ ಅಲೇಕಿ ಮಾತನಾಡಿ ನೂತನವಾಗಿ ಉದ್ಘಾಟನೆಗೊಂಡ ಈ ಸೇವಾ ಕೇಂದ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಆನ್‌ಲೈನ್ ಸೇವೆಗಳ ಸೌಲಭ್ಯ ದೊರೆಯುತ್ತದೆ. ಸರಕಾರದ ವಿವಿಧ ಯೋಜನೆಗಳಿಗೆ ನಮ್ಮ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿ ಸಹಕರ ಕೋರಿದರು. ಜಯರಾಮ ಸುವರ್ಣ ರವರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.