HomePage_Banner
HomePage_Banner
HomePage_Banner

ಧರ್ಮಸ್ಥಳ-ನಿಡ್ಲೆ: ಹೊಟೇಲ್ ‘ಆದಿತ್ಯ ವ್ಯೂ’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ಪ್ರಾಮಾಣಿಕ,ಗುಣಮಟ್ಟದ ಸೇವೆಯಿಂದ ಉದ್ಯಮದಲ್ಲಿ ಯಶಸ್ಸು: ಸುಬ್ರಹ್ಮಣ್ಯ ಶ್ರೀ

ನೆಲ್ಯಾಡಿ: ಉಪ್ಪಿನಂಗಡಿಯಲ್ಲಿರುವ ಹೋಟೆಲ್ ಆದಿತ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಹೋಟೆಲ್ ಆದಿತ್ಯ ನೆಸ್ಟ್ ಇದರ ಸಹ ಸಂಸ್ಥೆ ಹೋಟೆಲ್ ‘ಆದಿತ್ಯ ವ್ಯೂ’ ಹೆಸರಾಂತ ತೀರ್ಥಕ್ಷೇತ್ರ ಧರ್ಮಸ್ಥಳ ಸಮೀಪದ ನಿಡ್ಲೆಯಲ್ಲಿ ಅ.25ರಂದು ಶುಭಾರಂಭಗೊಂಡಿತು.


ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಹೋಟೆಲ್ ಆದಿತ್ಯ ವ್ಯೂ ಇದರ ಉದ್ಘಾಟನೆ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಯಾವುದೇ ಉದ್ಯಮ ಯಶಸ್ವಿಯಾಗಬೇಕಿದ್ದರೆ ಪ್ರಾಮಾಣಿಕ ಹಾಗೂ ಗುಣಮಟ್ಟದ ಸೇವೆ ಬಹುಮುಖ್ಯವಾಗಿದೆ. ಗ್ರಾಹಕರನ್ನು ಸಂತುಷ್ಟಗೊಳಿಸುವ ಮೂಲಕ ಉದ್ದಿಮೆಯನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಬಹುದು ಎಂದು ನುಡಿದರು.

ಸಂಸ್ಥೆಯ ಪ್ರವರ್ತಕರಾದ ರಮೇಶ ಉಪಾಧ್ಯಾಯ ಹಾಗೂ ಅವರ ಪುತ್ರರು ಹೊಟೇಲ್ ಉದ್ಯಮದಲ್ಲಿ ಒಳ್ಳೆಯ ಅನುಭವವನ್ನು ಹೊಂದಿದವರು. ಹೊಟೇಲ್ ಉದ್ಯಮದಲ್ಲಿ ಈಗಾಗಲೇ ಯಶಸ್ಸು ಪಡೆದಿರುವ ಅವರು ತೀರ್ಥ ಕ್ಷೇತ್ರವಾಗಿರುವ ಧರ್ಮಸ್ಥಳ ಸಮೀಪದ ನಿಡ್ಲೆಯಲ್ಲಿ ಹೊಸದಾಗಿ ಆರಂಭಿಸಿರುವ ಹೊಟೇಲ್ ಆದಿತ್ಯ ವ್ಯೂ ಪ್ರಕೃತಿ ರಮಣೀಯ ಸ್ಥಳದಲ್ಲಿ ಸುಂದರವಾಗಿ ನಿರ್ಮಾಣಗೊಂಡಿದ್ದು ಗ್ರಾಹಕರನ್ನು ಕೈಬೀಸಿ ಕರೆಯುವಂತಿದೆ. ಈ ಸಂಸ್ಥೆಯ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಸಿಗುವಂತಾಗಲಿ. ಈ ಮೂಲಕ ಸಂಸ್ಥೆಯು ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹೇಳಿದರು.

ಸಂಸ್ಥೆಯ ಸಹ ಪ್ರವರ್ತಕ ಇ. ಕೃಷ್ಣಮೂರ್ತಿ ಕಲ್ಲೇರಿ ಅವರು ಮಾತನಾಡಿ, ಬೆಂಗಳೂರು-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ಕೇವಲ 3 ಕಿ.ಮೀ. ದೂರದಲ್ಲಿ ನದಿ ಕಿನಾರೆಯ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಹೊಟೇಲ್ ಆದಿತ್ಯ ವ್ಯೂನಲ್ಲಿ 65 ಸುಸಜ್ಜಿತ ಕೊಠಡಿಗಳು, ಸಭಾಂಗಣ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಮಕ್ಕಳಿಗೆ ಖುಷಿ ನೀಡುವ ಆಟೋಪಕರಣಗಳನ್ನು ಒಳಗೊಂಡಿದೆ. ಶುಚಿ ಹಾಗೂ ರುಚಿಯಾದ ನಾರ್ತ್ ಇಂಡಿಯನ್ ಮತ್ತು ಸೌತ್ ಇಂಡಿಯನ್ ಖಾದ್ಯಗಳು ದೊರೆಯುವ ರೆಸ್ಟೋರೆಂಟ್ ವ್ಯವಸ್ಥೆಯೂ ಇದೆ ಎಂದು ಹೇಳಿದರು.

ಸಂಸ್ಥೆಯ ಪ್ರವರ್ತಕರಾದ ರಮೇಶ ಉಪಾಧ್ಯಾಯ, ಸಹ ಪ್ರವರ್ತಕರಾದ ವಿದ್ಯಾರಣ್ಯ ಇ., ಮನೋಹರ ಇ., ವಿಕ್ರಮ ಇ., ಸುದರ್ಶನ ಇ., ಪ್ರಮುಖರಾದ ಪಿ.ಆರ್.ಉಡುಪ, ಗೋಪಾಲಕೃಷ್ಣ ಹೇರಳೆ, ನಾರಾಯಣ ಹೇರಳೆ, ಕೆ.ಸೇಸಪ್ಪ ರೈ ರಾಮಕುಂಜ, ಸತೀಶ್ ಕುವೆಚ್ಚಾರು, ಮಹೇಂದ್ರ ವರ್ಮ ಮತ್ತಿತರರು ಉಪಸ್ಥಿತರಿದ್ದರು. ಪುರೋಹಿತ ಶ್ರೀಕಾಂತ ಕಲ್ಲೂರಾಯರವರು ವೈದಿಕ ವಿಧಿಗಳನ್ನು ನೆರವೇರಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜರವರು ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.