HomePage_Banner
HomePage_Banner
HomePage_Banner
Breaking News

ಪುತ್ತೂರಿನಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಗಮ್ ಹೋಟೆಲ್‌ನ ಸಹ ಸಂಸ್ಥೆ ಕಬಕದಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೆಜ್-ನಾನ್‌ವೆಜ್ ಖಾದ್ಯಗಳ ಹೋಟೆಲ್ ಸಂಗಮ್ ಫ್ಯಾಮಿಲಿ ರೆಸ್ಟೋರೆಂಟ್ ಅ.26ರಂದು ಕಬಕದಲ್ಲಿ ಶುಭಾರಂಭಗೊಂಡಿತು. ಉಡುಪಿ, ಚಿಕ್ಕಮಗಳೂರು ಹಾಸನ ಜಿಲ್ಲಾ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ನೆರವೇರಿಸಿದರು. ಸಯ್ಯದ್ ಯಹ್ಯ ತಂಙಳ್ ಕೊಕ್ಕಡ ಹೋಟೆಲ್‌ನ್ನು ಉದ್ಘಾಟಿಸಿದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಿ.ಕೆ.ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಮರ್ಕಝುಲ್ ಹುದಾ ಕುಂಬ್ರ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಯು.ಕೆ.ಮುಹಮ್ಮದ್ ಸಹದಿ, ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಕಬಕ, ಕಬಕ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಅಶಾ ಇ, ಪುತ್ತೂರು ಕೊ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಸದಾಶಿವ ಪೈ ದರ್ಬೆ, ಕಮ್ಮಾಡಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಅಶ್ರಫ್ ಕಮ್ಮಾಡಿ, ಕರ್ನಾಟಕ ರಕ್ಷಣಾ ವೇದಿಕೆ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ನಿವೃತ ಜಿಲ್ಲಾ ಅರೋಗ್ಯ ಮೇಲ್ಚಿಚಾರಕರಾದ ಕೆ.ಅಬುಬಕ್ಕರ್ ಹಾಜಿ ಬಗ್ಗುಮೂಲೆ, ನಿವೃತ್ತ ಉಪ ತಹಶಿಲ್ದಾರ್ ಡಿ.ಬಿ. ಅಬೂ ಬಕ್ಕರ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಕಬಕ, ಲೋಕೋಪಯೋಗಿ ಗುತ್ತಿಗೆದಾರ ಅಬ್ದುಲ್ಲ ಕುಂಞಿ ನಿಂತಿಕಲ್ಲು, ಅಝೀಝ್ ಸನ ವಿಟ್ಲ, ಅಬ್ಬಾಸ್ ಕೆ.ಎಸ್. ಗ್ರೂಪ್ ಕಬಕ, ಹಾಜಿ ಅಬ್ದುಲ್ ಅಝೀಝ್ ದರ್ಬೆ, ಕಬಕ ಮುಹ್ಯುಧ್ಧೀನ್ ಜುಮಾ ಮಸೀದಿ ಅಧ್ಯಕ್ಷ ಸಿತಾರ್ ಇಬ್ರಾಹಿಂ ಹಾಜಿ ಕಬಕ, ಕಬಕ ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷ ವಿ.ಚಂದ್ರಶೇಖರ್ ನಾಯ್ಕ್, ಸಿಝ್ಲರ್ ಕಂಪನಿ ಮಾಲಕ ಪ್ರಸನ್ನ ಶೆಟ್ಟಿ ಸಾಮೆತಡ್ಕ, ಎಚ್.ಕೆ.ಅಬ್ದುಲ್ಲಾ ಗಡಿಯಾರ, ಮಾಜಿ ಗ್ರಾ.ಪಂ ಅಧ್ಯಕ್ಷ ಶಾಬ ಕಬಕ, ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಈಶ್ವರ ಮಂಗಲ, ತಾಜ್ ಅಸೋಸಿಯೇಷನ್‌ನ ಸಿದ್ದೀಕ್ ಪುತ್ತೂರು, ಅಶ್ರಫ್ ಕಲ್ಲೇಗ, ಮುನೀರ್ ಸತ್ತಿಕಲ್ಲು, ಅರ್ಷದ್ ಕೆ.ಎಸ್ ಕಬಕ, ಮುಹಮ್ಮದ್ ಶರೀಫ್ ಕಸ್ತೂರಿ, ಉತ್ಸವ ಸಮಿತಿ ಅಧ್ಯಕ್ಷ ಜಯರಾಮ್ ನೆಕ್ಕರೆ, ಪಿ.ಬಿ ಉಮ್ಮರ್ ಕುಂಞಿ ಬೈತಡ್ಕ, ಮುಹಮ್ಮದ್ ಇಕ್ಬಾಲ್ ಬೈತಡ್ಕ ಹಾಗೂ ಇನ್ನಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದ ಹೋಟೆಲ್‌ನ ವ್ಯವಸ್ಥಾಪಕರಾದ ಅಬ್ದುಲ್ ಹಮೀದ್ ಬರ್ಕ, ಆಸೀಫ್ ಕೆ.ಎಸ್ ಕಬಕ, ಪಿ.ಬಿ.ಅಬ್ದುಲ್ ರಹೀಂ ಮಾತನಾಡಿ ನಮ್ಮಲ್ಲಿ ಶುಚಿ ರುಚಿಯಾದ ಅಲ್ಫಾಮ್, ಗ್ರಿಲ್ ಚಿಕನ್, ಪ್ರೈಡ್ ಚಿಕನ್, ಚಿಕನ್ ಬರ್ಗರ್, ಶವರ್ಮ ಹಾಗೂ ಎಲ್ಲಾ ತರದ ಸೌತ್ ಇಂಡಿಯನ್ ಮತ್ತು ನಾರ್ತ್ ಇಂಡಿಯನ್ ಚೈನೀಸ್ ಫುಡ್‌ಗಳು, ಮಾಂಸಹಾರಿ ಮತ್ತು ಸಸ್ಯಹಾರ ಪುಡ್ ಐಟಂಗಳು ಮಿತ ದರದಲ್ಲಿ ಲಭ್ಯವಿದೆ. ಗ್ರಾಹಕರಿಗೆ ಅನುಕೂಲಕರ ಪಾರ್ಕಿಂಗ್ ವ್ಯವಸ್ಥೆಯಿದ್ದು ಹವಾ ನಿಯಂತ್ರಿತ ಫ್ಯಾಮಿಲಿ ರೂಮ್ ಹಾಗೂ ಶುಭ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಇದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

ಗ್ರಾಹಕರ ಮೆಚ್ಚುಗೆ ಗಳಿಸಿದ ಹೋಟೆಲ್:
ಸಂಗಮ್ ಹೋಟೆಲ್ ಪುತ್ತೂರಿನ ದರ್ಬೆಯಲ್ಲಿ ಕಾರ್ಯಾಚರಿಸುತ್ತಿದ್ದು ನಾನ್‌ವೆಜ್ ಹೋಟೆಲ್‌ಗಳ ಸಾಲಿನಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡಿದೆ. ಇದೀಗ ತಾಲೂಕಿನಲ್ಲಿ ಎರಡನೇ ಸಂಸ್ಥೆ ಕಬಕದಲ್ಲಿ ಶುಭಾರಂಭಗೊಂಡಿದ್ದು ಗ್ರಾಹಕರಿಗೆ ವಿವಿಧ ಬಗೆಯ ನಾನ್‌ವೆಜ್-ವೆಜ್ ಐಟಂಗಳನ್ನು ನೀಡಲು ಸಿದ್ದಗೊಂಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.