HomePage_Banner
HomePage_Banner
HomePage_Banner

ಭಾರತ ಸರಕಾರದ ಕೃಷಿ ಸಚಿವಾಲಯದಿಂದ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಮೆನೇಜ್ಮೆಂಟ್ ಕಮಿಟಿಗೆ ಕಡಮಜಲು ಸುಭಾಸ್ ರೈ ನಾಮ ನಿರ್ದೇಶನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ ಸರಕಾರದ ಕೃಷಿ ಸಚಿವಾಲಯದಿಂದ Council Agricultural Research (ICAR)-ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ(DCR) ಮೆನೇಜ್ಮೆಂಟ್ ಕಮಿಟಿಗೆ ಕಡಮಜಲು ಸುಭಾಸ್ ರೈ ನಾಮ ನಿರ್ದೇಶನಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಗೇರು ಸಂಶೋಧನಾ ನಿರ್ದೇಶನಾಲಯ ಶಿಫಾರಸ್ಸಿನ ಮೇರೆಗೆ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ನಾಮ ನಿರ್ದೇಶನ ನಡೆದಿರುತ್ತದೆ. ರಾಷ್ಟ್ರ ಮಟ್ಟದ ರೈತ ಪ್ರತಿನಿಧಿಯಾಗಿ ಇಬ್ಬರು ನಾಮನಿರ್ದೇಶನಗೊಂಡಿದ್ದು ಅದರಲ್ಲಿ ಕಡಮಜಲು ಸುಭಾಸ್ ರೈ ಒಬ್ಬರಾಗಿದ್ದಾರೆ.

ಕಡಮಜಲು ಸುಭಾಸ್ ರೈ ಅವರು ಈಗಾಗಲೇ ಗೇರು ಅಭಿವೃದ್ಧಿ ನಿರ್ದೇಶನಾಲಯದ ಭಾಗೀದಾರಿಕೆಯಲ್ಲಿ ಸುಮಾರು ೧೪ ಎಕ್ರೆ ವಿವಿಧ ತಳಿಯ ಗೇರುತೋಟ ನಿರ್ಮಿಸಿ ರಾಷ್ಟ್ರೀಯ ಕೃಷಿ ಪ್ರಶಸ್ತಿ `ಅತ್ಯುತ್ತಮ ಕೃಷಿಕ’ ಪ್ರಶಸ್ತಿ ಗಳಿಸಿರುತ್ತಾರೆ. ಕರ್ನಾಟಕ ಸರಕಾರದಿಂದ `ಅರಣ್ಯ ಮಿತ್ರ’ ಪ್ರಶಸ್ತಿ, ತೋಟಗಾರಿಕಾ ಕ್ಷೇತ್ರದಲ್ಲಿನ ಸಾಧನೆಗಾಗಿ ಉತ್ತಮ ತೋಟಗಾರಿಕಾ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪುತ್ತೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ದ.ಕ ಜಿಲ್ಲಾ ಸಾಹಿತ್ಯ ಪರಿಷತ್ನಿಂದ ಕೃಷಿ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ದೊರೆತಿದೆ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಪ್ರಶಂಸಾ ಪತ್ರ ಕೂಡಾ ಇವರು ಪಡೆದುಕೊಂಡಿದ್ದಾರೆ. ಕೃಷಿ, ಸಮಾಜಸೇವೆ, ಧಾರ್ಮಿಕ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇವರು ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದು ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.

ಕುಂಬ್ರ ಮಂಡಲ ಪಂಚಾಯತ್ ಸದಸ್ಯನಾಗಿ, ಕೆದಂಬಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವೈಜ್ಞಾನಿಕ ಗೇರು ಕೃಷಿಕನಾಗಿ, ಗೇರು ರಾಯಭಾರಿಯಾಗಿ ವಿವಿಧ ಕೃಷಿ ವಿದ್ಯಾಲಯಗಳಲ್ಲಿ ವಿಚಾರ ಮತ್ತು ಪ್ರಬಂಧ ಮಂಡನೆ ಮಾಡಿ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಕಡಮಜಲು ಕೃಷಿ ಕ್ಷೇತ್ರವನ್ನು ರೈತರ ಪ್ರಯೋಗ ಶಾಲೆಯನ್ನಾಗಿಸಿ ಹಲವಾರು ಕೃಷಿ ಅಧ್ಯಯನ ಕಾರ್ಯಾಗಾರ, ಮಾಹಿತಿ ಶಿಬಿರಗಳನ್ನು ಏರ್ಪಡಿಸಿ ಯಶಸ್ವಿಯಾಗಿದ್ದಾರೆ. ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಪ್ರಸ್ತುತ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಡಮಜಲು ಸುಭಾಸ್ ರೈ ಅವರು ಕೃಷಿ ಬದುಕಿನ ಸುವರ್ಣ ಮಹೋತ್ಸವವನ್ನು ಆಚರಿಸಿ `ಗೇರು ಎತ್ತರಕ್ಕೆ ಏರು’ ಕೃಷಿ ಕೃತಿಯನ್ನು ಸಮಾಜಕ್ಕೆ ನೀಡಿರುತ್ತಾರೆ. ಅಪ್ರತಿಮ ವಾಗ್ಮಿಯು, ಸಾಹಿತಿಯು ಆದ ಇವರ ಕೃತಿಗಳಾದ `ಎಮ್ಮೆ ತಂದ ಹೆಮ್ಮೆ’ ಮತ್ತು `ಬಯಸದೆ ಬಂದ ಭಾಗ್ಯ’ ಪ್ರಕಟಗೊಂಡಿರುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.