HomePage_Banner
HomePage_Banner
HomePage_Banner

ಗೆಜ್ಜೆಗಿರಿ ಶ್ರೀ ಕ್ಷೇತ್ರದಲ್ಲಿ ಪುಟಾಣಿಗಳ ವಿದ್ಯಾರಂಭ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಅ. 25ರಂದು ವಿಜಯ ದಶಮಿ ಪರ್ವದಲ್ಲಿ ಪುಟಾಣಿಗಳ ವಿದ್ಯಾರಂಭ ಕಾರ್ಯಕ್ರಮ ವೈದಿಕ ವಿಧಿ ವಿಧಾನಗಳ ಮೂಲಕ ನಡೆಯಿತು.

ಕ್ಷೇತ್ರದ ತಂತ್ರಿವರ್ಯರಾದ ಲೋಕೇಶ್ ಶಾಂತಿ ನೇತೃತ್ವದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಮುಂಜಾನೆ ಪ್ರಾರ್ಥನೆ, ವಾಗೀಶ್ವರಿ ಪೂಜೆ ನಡೆದು ವಿದ್ಯಾರಂಭಕ್ಕೆ ಚಾಲನೆ ನೀಡಲಾಯಿತು. ಬಳಿಕ ನಾನಾ ಊರುಗಳಿಂದ ಆಗಮಿಸಿದ್ದ ಪುಟಾಣಿಗಳು ವಿದ್ಯಾರಂಭ ವಿಧಿಯಲ್ಲಿ ಪಾಲ್ಗೊಂಡು ಅಕ್ಷರಾಭ್ಯಾಸ ಆರಂಭಿಸಿದರು. ಸಾಮಾಜಿಕ ಅಂತರದ ಕೋವಿಡ್ -19 ನಿಯಮಾವಳಿ ಪಾಲಿಸುವುದಕ್ಕಾಗಿ ಪ್ರತೀ ಪುಟಾಣಿಗೂ ಪ್ರತ್ಯೇಕವಾಗಿ ವಿದ್ಯಾರಂಭ ಮಾಡಿಸಲಾಯಿತು.

ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಆನುವಂಶಿಕ ಮೊಕ್ತೇಸರರಾದ ಮಾತೃಶ್ರೀ ಲೀಲಾವತಿ ಪೂಜಾರಿ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಸವಿತಾ ಮಹಾಬಲ ಪೂಜಾರಿ ಉಪಸ್ಥಿತರಿದ್ದರು. ಫೆಬ್ರುವರಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಹೋಮ, ನವರಾತ್ರಿ ಪೂಜೆ ಮತ್ತು ವಿದ್ಯಾರಂಭ ವಿಧಿಗಳು ನಡೆದಿವೆ.

ಚಿತ್ರ: ಗೆಜ್ಜೆಗಿರಿಯಲ್ಲಿ ವಿದ್ಯಾರಂಭ ಕಾರ್ಯಕ್ರಮ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.