HomePage_Banner
HomePage_Banner
HomePage_Banner

ರೈತ ಹಿತ ರಕ್ಷಣಾ ವೇದಿಕೆಯಿಂದ ರೈತ ಜಾಗೃತಿ -1 ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ರೈತ ಹಿತ ರಕ್ಷಣಾ ವೇದಿಕೆ ಪುತ್ತೂರು ಇದರ ನಮ್ಮ ನಡಿಗೆ ರೈತರ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ರೈತ ಜಾಗೃತಿ -1 ಕಾರ್ಯಕ್ರಮ ಹಿರಿಯರಾದ ಪಿಜಿ ಭಟ್ ರವರ ಮನೆಯಲ್ಲಿ ಚಾಲನೆಗೊಂಡಿತು. ರೈತಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ರೈತರ ಹಿತಕ್ಕಾಗಿ ನಾವು ರಾಜಕೀಯ, ಧಾರ್ಮಿಕ ಅಥವಾ ಯಾವುದೇ ರೀತಿಯ ಭಿನ್ನ ಅಭಿಪ್ರಾಯ ಮರೆತು ಹೋರಾಡುವ ಎಂದು ಹೇಳಿದರು. ಪುತ್ತೂರು ಶಾಸಕರು ರೈತರಾಗಿ ಅನುಭವ ಉಳ್ಳ ಒಬ್ಬ ಉತ್ತಮ ಜನಪ್ರತಿನಿಧಿ. ಅವರು ಪಕ್ಷದ ಹೈ ಕಮಾಂಡ್‌ನ ಒತ್ತಡಕ್ಕೆ ಮಣಿದು ಈ ಮಸೂದೆ ಬೆಂಬಲಿಸಿ ಸವಾಲು ಹಾಕಿರ ಬಹುದು ಹೊರತು ಮನಃಸಾಕ್ಷಿಯಿಂದ ಅಲ್ಲ ಎಂಬುದು ನನ್ನ ಅನಿಸಿಕೆ ಎಂದರು.

ರೈತ ಹಿತರಕ್ಷಣೆ ವೇದಿಕೆಯ ಪ್ರಧಾನ ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ, ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಾಹುಲ್ ಹಮೀದ್, ಮೊಹಮ್ಮದ್ ಕoಚಾಲಿ ಕುಂಜ, ಕೃಷ್ಣಪ್ಪ ನಾಯಕ್, ಬಾಬು ರೈ ಕೋಟೆ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮೊಯಿದು ಕುಂಜಿ, ಮಹಾಲಿಂಗ ನಾಯ್ಕ್, ಬೆಟ್ಟಂಪಾಡಿ ಕೃಷಿ ಸಹಕಾರಿ ಸಂಘದ ನಿರ್ದೇಶಕ ಸದಾಶಿವ ರೈ, ಉದ್ಯಮಿ ನೆಲ್ಲಿಕಟ್ಟೆ ಲ.ಗಣೇಶ್ ಶೆಟ್ಟಿ, ಅಶೋಕ ಶೆಟ್ಟಿ, ಪ್ರಸಾದ ಪಾಣಾಜೆ, ಉಪಸ್ಥಿತರಿದ್ದರು. ಪಿಜಿ ಭಟ್ ಸಾಗತಿಸಿ ಮಾತನಾಡಿ ರೈತರ ಪರವಾದ ಎಲ್ಲ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದೆ ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.