HomePage_Banner
HomePage_Banner
HomePage_Banner
Breaking News

ನೂಜಿಬಾಳ್ತಿಲ ಗ್ರಾ.ಪಂ ನಲ್ಲಿ ವಿಶೇಷ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾ.ಪಂನಲ್ಲಿ 2020-21ನೇ ಸಾಲಿನ ವಿಶೇಷ ಗ್ರಾಮ ಸಭೆಯು ಅ.27ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ ರವರು ಸಬೆಯ ಅದ್ಯಕ್ಷತೆ ವಹಿಸಿ ಮಾತನಾಡಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡಿದರು. ಅಲ್ಲದೆ ಗ್ರಾ. ಪಂ ನಲ್ಲಿ ತೆರಿಗೆ ಪರಿಷ್ಕರಣೆ ನಡೆಸಲಾಗುವುದು. ಸರಕಾರದ ನಿಯಮದಂತೆ ಪ್ರತಿ ಮನೆಯ ಅಳತೆ ಮಾಡುವ ಮೂಲಕ ಸಬ್ ರಿಜಿಸ್ಟರ್ ದಾಖಲೆಯಂತೆ ಪರಿಸ್ಕರಿಸಲಾಗುವುದೆಂದು ಮಾಹಿತಿ ನೀಡಿದ ಪಿ ಡಿ ಒ ರವರು ಈಗಾಗಲೇ ಹಲವಾರು ಮಂದಿ ತಮ್ಮ ತಮ್ಮ ಹುಲ್ಲಿನ ಮನೆ ಹಂಚಿನ ಮನೆ ಇದ್ದವರು ಆರ್‌ ಸಿಸಿ ಮನೆಗಳನ್ನು ಕಟ್ಟದ್ದು ಎಲ್ಲರಿಗೂ ನಿಯಮಾನುಸಾರ ತೆರಿಗೆ ವಿಧಿಸಲಾಗುವುದು ಎಂದರು.

ಗ್ರಾ. ಪಂ ಮಾಜಿ ಸದಸ್ಯರಾದ ರಾಜು ಗೋಳಿಯಡ್ಕ ರಾಮಚಂದ್ರ ಗೌಡ. ಯಸ್, ತೋಮಸ್ ಕೆ ಜೆ, ಜಾನಕಿ ಕಲ್ಲುಗುಡ್ಡೆ ಪ್ರಮುಖ ರಾದ ಕುಶಾಲಪ್ಪ ಗೌಡ, ಬಾಳೆಮಾರು ನೇಮಣ್ಣಗೌಡ, ಕಲ್ನಾರ್ ಶೇಖರಗೌಡ ಕೆರೆಜ್ಜಾಲು, ಬಾಲಕೃಷ್ಣ ಕೋಟೆಗುಡ್ಡೆ ಮುರುಗನ್ ಪೇರಡ್ಕ, ಮೋನಪ್ಪಗೌಡ ಬಳ್ಳೇರಿ ಜಯಂತಿ ಪೇರಡ್ಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಗುರುವ, ಯಸ್ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ತಮ್ಮಯಗೌಡ, ಗಿರಿಜ, ಧನ್ ರಾಜ್ ಕುಶಲ, ವಿಶಾಲಾಕ್ಷಿ ಅಬ್ದುಲ್ ರಫಿಕ್ ಮೊದಲಾದವರು ಉಪಸ್ಥಿತರಿದ್ದರು.

ಗ್ರಾ ಪಂ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕೊಳಚೆ ನೀರು ಇಂಗಿಸಲು ದ್ರವತ್ಯಾಜ್ಯ ಇಂಗು ಗುಂಡಿ (ಸೋಕ್ ಪಿಟ್ ) ಮಾಡಿಸಿ ಕೊಂಡು ಉದ್ಯೋಗ ಖಾತರಿಯೋಜನೆಯಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು –  ಆನಂದ ಎ. ಪಂ ಅಭಿವೃದ್ಧಿ ಅಧಿಕಾರಿ ಗ್ರಾ ಪಂ ನೂಜಿಬಾಳ್ತಿಲ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.