HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಗಜಾನನ ಸ್ಟೋರ್ಸ್‌ನಲ್ಲಿ ಪೈಂಟ್‌ ಖರೀದಿಸಿದರೆ ಜಾಕ್‌ಪಾಟ್‌.. ಇಲ್ಲಿ ಖರೀದಿ ಮೊತ್ತವೇ ಬಹುಮಾನ !!

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ನಿವೃತ್ತ ಸೇನಾಧಿಕಾರಿ ಕೆ ಸುರೇಶ್ ಮಾಲಕತ್ವದ ಗಜಾನನ ಸ್ಟೋರ್ಸ್ ಸಂಸ್ಥೆಯಲ್ಲಿ ಮುಂಬರುವ ಹಬ್ಬಗಳ ಪ್ರಯುಕ್ತ ನಿಪ್ಪೋನ್ ಪೈಂಟ್ ಗ್ರಾಹಕರಿಗೆ ಖರೀದಿ ಬಿಲ್ ನ್ನೇ ಅದೃಷ್ಠ ಚೀಟಿಯನ್ನಾಗಿಸುವ ಹಾಗೂ ಖರೀದಿ ಮೊತ್ತವೇ ಬಹುಮಾನ ಮೊತ್ತವೆನಿಸುವ ವಿನೂತನ ‘ಲಕ್ಕಿ ನಂಬರ್ ಆನ್ ಬಿಲ್’ ಯೋಜನೆಯನ್ನು ನವೆಂಬರ್ 01 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.


ಪೈಂಟ್ ಮಾರುಕಟ್ಟೆಯ ಕ್ಷೇತ್ರದಲ್ಲಿ  ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ನಿಪ್ಪೋನ್ ಪೈಂಟ್ ಮಾರಾಟ ಮಾಡಿದ ಗ್ರಾಮೀಣ ಪ್ರದೇಶದ ಸಂಸ್ಥೆಯಾಗಿ ಸಾಧನೆ ಮೆರೆದು ಸತತ ಮೂರು ವರ್ಷ ಕ್ಲಬ್ ನಿಪ್ಪೋನ್ ಪ್ರಶಸ್ತಿ ಯನ್ನು ಗಳಿಸಿರುವ ಗಜಾನನ ಸ್ಟೋರ್ಸ್ ಸಂಸ್ಥೆಯು ಈ ಸಂಭ್ರಮವನ್ನು ಮುಂಬರುವ ಈದ್ ಮಿಲಾದ್ – ದೀಪಾವಳಿ – ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಗ್ರಾಹಕರೊಂದಿಗೆ ಹಂಚುವ ಸಲುವಾಗಿ ಸಂಸ್ಥೆಯಲ್ಲಿ ಹಲವಾರು ಬಹುಮಾನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಪೈಕಿ ನವೆಂಬರ್ 01 ರಿಂದ ಡಿಸೆಂಬರ್ 31 ರ ವರೆಗೆ  ರೂ 5೦೦೦/- ಕ್ಕಿಂತ ಹೆಚ್ಚಿನ ನಿಪ್ಪೋನ್ ಪೈಂಟ್ ಖರೀದಿಸಿದರೆ ಅದರ ಬಿಲ್‌ಗಳನ್ನು ‘ಲಕ್ಕಿ ನಂಬರ್ ಆನ್ ಬಿಲ್’ ಯೋಜನೆಯಲ್ಲಿ ಅದೃಷ್ಠ ಚೀಟಿಯನ್ನಾಗಿ ಪರಿಗಣಿಸಲಾಗುವುದು.
ನಿಮ್ಮ ಪೈಂಟ್ ಖರೀದಿಯ ಬಿಲ್ ಸಂಖ್ಯೆಯೇ ನಿಮ್ಮ ಪಾಲಿನ ಅದೃಷ್ಠ ಸಂಖ್ಯೆಯಾಗುವ ಈ ಯೋಜನೆಯಲ್ಲಿ ನಿಪ್ಪೋನ್ ಪೈಂಟ್‌ಗಳನ್ನು ಖರೀದಿಸುವ ಸಂಧರ್ಭದಲ್ಲಿ ನೀಡಲಾಗುವ ಬಿಲ್ ಸಂಖ್ಯೆಯನ್ನು ಡ್ರಾ ಗೆ ಬಳಸಲಾಗುವುದು. ಮೂಲ ಬಿಲ್ ನ್ನೇ ಬಹುಮಾನ ಸ್ವೀಕಾರಕ್ಕೆ ಸಲ್ಲಿಸುವುದು ಕಡ್ಡಾಯ. ಜೆರಾಕ್ಸ್ ಪ್ರತಿಗಳನ್ನಾಗಲಿ ,ಹರಿದು ಹೋದ ಬಿಲ್ ಗಳನ್ನಾಗಲಿ ಪರಿಗಣಿಸುವುದಿಲ್ಲ. ಖರೀದಿಸಲ್ಪಟ್ಟ ಬಿಲ್ ಮೊತ್ತವೇ ಬಹುಮಾನದ ಮೊತ್ತವಾಗಿರುವುದು. ಉದಾ: ಒಂದು ಲಕ್ಷ ರೂ ಮೌಲ್ಯದ ಖರೀದಿಯ ಬಿಲ್ ಸಂಖ್ಯೆ ಅದೃಷ್ಠ ಸಂಖ್ಯೆ ಎಂದೆಣಿಸಲ್ಪಟ್ಟರೆ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಲಭಿಸುವುದು ಎಂದು ಸಂಸ್ಥೆಯ ಮಾಲಕ ಸುರೇಶ್ ಕೆ. ತಿಳಿಸಿದ್ದಾರೆ.

32 ಇಂಚಿನ ಟಿವಿ ಗೆದ್ದ ಗ್ರಾಹಕ

 
ಸಂಸ್ಥೆಯಲ್ಲಿ ನಿಪ್ಪೋನ್ ಗ್ರಾಹಕರಿಗಾಗಿ ಈಗಾಗಾಲೇ ಹಲವಾರು ಬಹುಮಾನ ಯೋಜನೆಗಳು ಅನುಷ್ಠಾನದಲ್ಲಿದ್ದು, ಪರಿಸರದ ಬಹಳಷ್ಟು ಗ್ರಾಹಕರು , ಪೈಂಟರುಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ . ಕೊರೋನಾ ಲಾಕ್ ಡೌನ್ ಬಳಿಕದ ಸೂಕ್ಷ್ಮ ದಿನಗಳಲ್ಲಿ ಅತ್ಯಧಿಕ ನಿಪ್ಪೋನ್ ಪೈಂಟ್ ಖರೀದಿಯಲ್ಲಿ ಸಾಧನೆ ತೋರಿದ ಪೈಂಟರ್ ಆರೀಫ್ ಮಠ ರವರು 32 ಇಂಚಿನ ಎಲ್‌ಇಡಿ ಟಿವಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.