HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಅರಮನೆ ಗಾರ್ಮೆಂಟ್ಸ್‌ನ 2ನೇ ಸಂಸ್ಥೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಎಂ.ಟಿ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅರಮನೆ ಗಾಮೆಂಟ್ಸ್ ಡ್ರೆಸ್ ಮಳಿಗೆಯ 2ನೇ ಶಾಖೆ ಪುತ್ತೂರು ಗಾಂಧಿಕಟ್ಟೆ ಬಳಿ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಅ.26ರಂದು ಶುಭಾರಂಭಗೊಂಡಿತು.


ಸಯ್ಯದ್ ಮಹಮ್ಮದ್ ತಂಙಳ್ ಸಾಲ್ಮರ ಉದ್ಘಾಟಿಸಿ ಶುಭ ಹಾರೈಸಿದರು. ಕೆಮ್ಮಾಯಿ ಖತೀಬ್ ಇಕ್ಬಾಲ್ ಸಖಾಫಿ ದುವಾ ನೆರವೇರಿಸಿದರು. ಪುತ್ತೂರು ಟ್ರೇಡರ್‍ಸ್ ಯೂನಿಯನ್ ಅಧ್ಯಕ್ಷ ಅಬ್ದುಲ್ ಲತೀಫ್ ಎಂಪವರ್, ಅರ್ಫಾಝ್ ಅರಮನೆ, ಅಫ್ರೀಝ್ ಅರಮನೆ, ಇಲ್ಯಾಸ್ ಸಖಾಫಿ ಕೆಮ್ಮಾಯಿ, ಕಬೀರ್ ಸಖಾಫಿ ಕೆಮ್ಮಾಯಿ, ಅಬ್ದುಲ್ ಲತೀಫ್ ಕೆಮ್ಮಾಯಿ, ಸಮ್ಮೂನ್ ಕೆಮ್ಮಾಯಿ, ಸಿದ್ದೀಕ್ ಕೆ.ಎ, ಶೂ ಬಜಾರ್‌ನ ಅಬೂಬಕ್ಕರ್, ಕೆಮ್ಮಾಯಿ ಗಾರ್ಬಲ್‌ನ ಹಸನ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿದ ಅರಮನೆ ಗಾರ್ಮೆಂಟ್ಸ್‌ನ ಮಾಲಕ ಅಬ್ದುಲ್ ರಹಿಮಾನ್ ಹಾಜಿ ಕೆಮ್ಮಾಯಿ ಮಾತನಾಡಿ ಶುಭಾರಂಭದ ಪ್ರಯುಕ್ತ ಸ್ವಂತ ತಯಾರಿಕೆಯಲ್ಲಿ ಬಟ್ಟೆಬರೆಗಳು ಲಭ್ಯವಿದ್ದು ರೂ.೧೪೯ಕ್ಕೆ ಕುರ್ತೀಸ್, ಅರಬಿಯನ್ ಟಾಪ್, ಕಾಟನ್ ನೈಟಿ ಮಾರಾಟ ಮಾಡಲಾಗುತ್ತದೆ. ಅಲ್ಲದೇ ವಿವಿಧ ಲೇಡೀಸ್ ಡ್ರೆಸ್ ಐಟಂಗಳು ಕೂಡಾ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

ಪ್ರಥಮ ಖರೀದಿ:
ಅಬ್ದುಲ್ ಖಾದರ್ ಮಧುರಾ ಅವರು ಪ್ರಥಮ ಖರೀದಿ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.