HomePage_Banner
HomePage_Banner
HomePage_Banner

ಕಡಬ: 2 ಕೆಜಿ ಗೋಧಿ ಕೊಂಡರೆ 1 ಕೆಜಿ ಕಲ್ಲು ಉಚಿತ! ಇದು ಸಂಚಾರಿ ನ್ಯಾಯಬೆಲೆ ಅಂಗಡಿಯ ಕೊಡುಗೆ..!?

Puttur_Advt_NewsUnder_1
Puttur_Advt_NewsUnder_1

ಕಡಬ: ತಾಲೂಕಿನ ಆಳಂತಾಯ ಗ್ರಾಮದಲ್ಲಿ ಈ ಬಾರಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜನರಿಗೆ ಬೇಡವೆನಿಸುವಂತಹ ಕೊಡುಗೆಯನ್ನು ನೀಡಿದೆ.  ಗ್ರಾಮದ ಜನರಿಗೆ ಸಂಚಾರಿ ನ್ಯಾಯಬೆಲೆ ಅಂಗಡಿ ನೀಡಿದ್ದು ಕಲ್ಲಿನ ಜೊತೆಗೆ ಗೋಧಿಯೋ ಅಥವಾ ಗೋಧಿ ಜೊತೆಗೆ ಕಲ್ಲೋ ಎಂದು ತಿಳಿಯದಾಗಿದೆ.ಇದೀಗ, ಈ ಉಚಿತ ಸವಲತ್ತನ್ನು ಪಡೆದುಕೊಂಡಿರುವ ಗ್ರಾಮದ ನಾಗರಿಕರು, ಇದನ್ನು ಹೇಗೆ ಬಳಸೋದು ಅಂತ ಯೋಚಿಸುವಂತಾಗಿದೆ!

ಹೌದು. ಸರ್ಕಾರವು ಸಂಚಾರಿ ನ್ಯಾಯಬೆಲೆ ಅಂಗಡಿ ಯೋಜನೆಯ ಮೂಲಕ ಜನರಿಗೆ ಆಹಾರ ಸಾಮಾಗ್ರಿಗಳನ್ನು ಉಚಿತವಾಗಿ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಅಕ್ಕಿ, ಬೇಳೆ, ಗೋಧಿ, ಕಡ್ಲೆ ಹೀಗೆ ಕೆಲ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತಿದ್ದು, ಅರ್ಹ ಜನರು ಈ ಯೋಜನೆಯಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ.  ಆದರೆ ಸಂಚಾರಿ ನ್ಯಾಯಬೆಲೆ ಅಂಗಡಿಯೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ, ಜನರಿಗೆ ಆಹಾರ ವಸ್ತುಗಳ ಜೊತೆಗೆ ಕಲ್ಲು, ಮಣ್ಣು ಮತ್ತು ಉಪಯೋಗಿಸಲಸಾಧ್ಯವಾದ ಕಲಬೆರಕೆಯ ವಸ್ತುಗಳು ಜನರಿಗೆ ದೊರಕುವಂತಾಗಿದೆ. 

ಆಳಂತಾಯ ಗ್ರಾಮದಲ್ಲಿ ಪ್ರತಿ ತಿಂಗಳ 24 ನೇ ತಾರೀಕಿನಂದು ಸಂಚಾರಿ ನ್ಯಾಯಬೆಲೆ ಅಂಗಡಿಯೂ ಗ್ರಾಮಕ್ಕೆ ಬರುತ್ತದೆ. ಅದೇ ಪ್ರಕಾರವಾಗಿ ಈ ತಿಂಗಳ ಪಡಿತರವೂ ಅ.24ಕ್ಕೆ ದೊರೆತಿದೆ. ಮನೆಯ ಪ್ರತಿ ಸದಸ್ಯನಿಗೆ 10 ಕೆ.ಜಿ.ಯಂತೆ ಅಕ್ಕಿ ಹಾಗೂ ಒಂದು ಪಡಿತರ ಚೀಟಿಗೆ 2 ಕೆ.ಜಿ. ಗೋಧಿಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಆದರೆ 2 ಕೆ.ಜಿ. ಗೋಧಿಯಲ್ಲಿ ಸುಮಾರು ಅರ್ಧ ಭಾಗದಷ್ಟು ಕಲ್ಲು ಕಂಡುಬಂದಿದೆ. ಈ ಅವ್ಯವಸ್ಥೆಯ ಕುರಿತು ಪಡಿತರ ನೀಡುವ ಸ್ಥಳದಲ್ಲೇ ಪಡಿತರ ವಿತರಿಸುವವರಿಗೆ ತಿಳಿಸಿದರೂ ಅವರು ಯಾವೂದೇ ಪ್ರತಿಕ್ರಿಯೆ ನೀಡಿರುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರ ನೀಡುವ ಸವಲತ್ತು ಸಮರ್ಪಕವಾಗಿರಬೇಕು. ಕಲ್ಲು ಮಣ್ಣುಗಳ ಮಿಶ್ರಣದ ಪಡಿತರ ನಮಗೆ ಬೇಡ, ಉತ್ತಮ ಗುಣಮಟ್ಟದ ಪಡಿತರವನ್ನು ಸರ್ಕಾರ ನೀಡಲಿ ಎಂದು ಜನ ಆಗ್ರಹಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.