HomePage_Banner
HomePage_Banner
HomePage_Banner
Breaking News

ಪೆರ್ನೆಯಲ್ಲಿ ಅಡಿಕೆ ಉದ್ಯಮಿಗೆ ಚೂರಿ ಇರಿದು ಲಕ್ಷಾಂತರ ರೂಪಾಯಿ ದರೋಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಬಳಿ ಅಡಿಕೆ ಉದ್ಯಮಿಯೊಬ್ಬರಿಗೆ ವ್ಯಕ್ತಿಗಳಿಬ್ಬರು ಚೂರಿ ಇರಿದು ಉದ್ಯಮಿಯ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ದರೋಡೆ ಮಾಡಿದ ಘಟನೆ ಅ.27ರಂದು ರಾತ್ರಿ ನಡೆದಿದೆ.
ಬಿಳಿಯೂರು ಗ್ರಾಮದ ಗೋಪಾಲ್ ಶೆಟ್ಟಿ ಎಂಬವರ ಪುತ್ರ ಅಡಿಕೆ ಉದ್ಯಮಿ ದೀಪಕ್ ಶೆಟ್ಟಿ(45ವ) ಅವರು ಚೂರಿ ಇರಿತಕ್ಕೊಳಗಾದವರು. ದೀಪಕ್ ಶೆಟ್ಟಿಯವರು ಸಂಜೆ ಅಡಿಕೆ ಉದ್ಯಮ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದೀಪಕ್ ಶೆಟ್ಟಿಯವರ ಬೈಕ್‌ನ್ನು ಅಡ್ಡಗಟ್ಟಿ ತಲೆಗೆ ಮತ್ತು ಎದೆಗೆ ಚೂರಿಯಿಂದ ಇರಿದಿದ್ದಾರೆ. ಬಳಿಕ ಅವರ ಕೈಯಲ್ಲಿ ರೂ. ೪ಲಕ್ಷ ವಿದ್ದ ಬ್ಯಾಗ್‌ನ್ನು ಕಸಿದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡ ಗಾಯಾಳು ದೀಪಕ್ ಶೆಟ್ಟಿಯವರನ್ನು ಉಪ್ಪಿನಂಡಿ ಆಸ್ಪತ್ರೆಗೆ ಕರೆ ತಂದು ಬಳಿಕ ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.