HomePage_Banner
HomePage_Banner
HomePage_Banner

ವಿವಾಹಿತನಿಂದ ಕಿರುಕುಳ-ಡೈರಿ ಬರೆದಿಟ್ಟು ಖಾಸಗಿ ಆಸ್ಪತ್ರೆ ಸಿಬಂದಿ ಕೆರೆಗೆ ಹಾರಿ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವಾಹಿತನೋರ್ವ ಮಾನಸಿಕ ಕಿರುಕುಳ ಹಾಗೂ ಜೀವಬೆದರಿಕೆ ಹಾಕುತ್ತಿರುವುದಾಗಿ ಡೈರಿಯಲ್ಲಿ ಬರೆದಿಟ್ಟು ಪುತ್ತೂರಿನ ಖಾಸಗಿ ಆಸ್ಪತ್ರೆಯ ಸಿಬಂದಿ, ಸಂಪಾಜೆ ನಿವಾಸಿ ಸಂಪ್ಯದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.28ರಂದು ಸಂಜೆ ನಡೆದಿದೆ.

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡರ ಪುತ್ರಿ ಮಧುಶ್ರೀ (26 ವ) ಆತ್ಮಹತ್ಯೆ ಮಾಡಿಕೊಂಡವರು. ಆರ್ಯಾಪು ಗ್ರಾಮದ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಯ ಸಮೀಪದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಕಳೆದ 4 ವರ್ಷಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ರಿಶೆಪ್ಸನ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ ರಾತ್ರಿ ಆಸ್ಪತ್ರೆಯ ವಸತಿಗೃಹದಲ್ಲಿಯೇ ತಂಗುತ್ತಿದ್ದರು. ರಜಾ ದಿನ ಹಾಗೂ ಬಿಡುವಿನ ವೇಳೆಯಲ್ಲಿ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗುತ್ತಿದ್ದರು. ಅ.27ರ ಸಂಜೆ ತನಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಆಸ್ಪತ್ರೆಯ ವಸತಿಗೃದಲ್ಲಿಯೇ ತಂಗಿದ್ದ ಆಕೆ ಅ.೨೮ರಂದು ವಾರದ ರಜೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ ಉಪಾಹಾರ ಸೇವಿಸಿ ಸಿಬಂದಿಗಳೊಂದಿಗೆ ಮಾತನಾಡಿ ಸಂಪ್ಯದ ತನ್ನ ಅಜ್ಜಿ ಮನೆಗೆ ತೆರಳಿದರು. ಮಧ್ಯಾಹ್ನ ಊಟ ಮಾಡಿ ಮನೆ ಮಂದಿ ಮಲಗಿದ್ದು ಎದ್ದು ನೋಡುವಾಗ ಆಕೆ ನಾಪತ್ತೆಯಾಗಿದ್ದಳು. ಮನೆಯಿಂದ ನಾಪತ್ತೆಯಾದವಳನ್ನು ಹುಡುಕಾಡುತ್ತಾ ಹೋದಾಗ ಆಕೆಯ ಅಜ್ಜಿ ಮನೆ ಸಮೀಪದ ಚೋಮಣ್ಣ ಗೌಡ ಎಂಬವರ ತೋಟದ ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಸಂಪಾಜೆಯ ದೇವಿಚರಣ್‌ನಿಂದ ಕಿರುಕುಳ-ಡೈರಿಯಲ್ಲಿ ಪತ್ತೆ

ನಾನು ಸುಮಾರು 5 ವರ್ಷಗಳಿಂದ ಸುಳ್ಯ ಸಂಪಾಜೆಯ ದೇವಿಚರಣ್ ಪಡ್ಪು ಎಂಬವರನ್ನು ಪ್ರೀತಿಸುತ್ತಿದ್ದೆವು. ಆದರೆ ದೇವಿಚರಣ್ ಕಳೆದ ಜೂನ್‌ನಲ್ಲಿ ಬೇರೊಂದು ಹುಡುಗಿಯನ್ನು ವಿವಾಹವಾಗಿದ್ದರು. ಹಾಗಿದ್ದರೂ ದೇವಿಚರಣ್‌ರವರು ಮಧುಶ್ರೀಯವರಿಗೆ ಮೊಬೈಲ್ ಕರೆಮಾಡುತ್ತಿರುವುದಲ್ಲದೆ ಮೆಸ್ಸೇಜ್ ಮಾಡಿ ಬೇರೆಯವರನ್ನು ಮದುವೆಯಾಗದಂತೆ ಹಾಗೂ ಯಾವಾಗಲೂ ನನ್ನೊಂದಿಗೆ ಸಂಪರ್ಕದಲ್ಲಿರುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ತನ್ನಿಂದ ದೂರ ಹೋಗುವಂತೆ ನಾನು ಮನವಿ ಮಾಡಿದರೂ ಆತ ನಿರಂತರವಾಗಿ ಪೀಡಿಸುತ್ತಿರುವುದಾಗಿ ಆಕೆಯ ಬ್ಯಾಗ್‌ನಲ್ಲಿರುವ ಡೈರಿಯಲ್ಲಿ ಬರೆದಿರುವುದು ಪತ್ತೆಯಾಗಿದೆ. ದೇವಿಚರಣ್ ಕಿರುಕುಳ ನೀಡುತ್ತಿರುವ ಬಗ್ಗೆ ಆಕೆ ಅಜ್ಜಿ ಮನೆಯಲ್ಲಿ ಹೇಳಿಕೊಂಡಿದ್ದು ಅವರು ಆಕೆಯನ್ನು ಸಮಾಧಾನ ಪಡಿಸಿದ್ದರು.

ದೇವಿಚರಣ್ ದುಷ್ಪ್ರೇರಣೆಯಿಂದ ಆತ್ಮಹತ್ಯೆ ಆರೋಪ-ಮಾವನಿಂದ ಪೊಲೀಸರಿಗೆ ದೂರು:
ತನ್ನ ಅಕ್ಕನ ಮಗಳಾದ ಮಧುಶ್ರೀಯವರಿಗೆ ಸಂಪಾಜೆಯ ದೇವಿಚರಣ್ ಪಡ್ಪು ಎಂಬಾತ ಮೊಬೈಲ್ ಕರೆ ಮಾಡಿ ಹಾಗೂ ಮೆಸ್ಸೆಜ್ ಮೂಲಕ ಬೇರೆಯರವನ್ನು ಮದುವೆಯಾಗದಂತೆ ಹಾಗೂ ಯಾವಾಗಲೂ ತನ್ನೊಂದಿಗೆ ಸಂಪರ್ಕದಲ್ಲಿರುವಂತೆ ಪೀಡಿಸಿ, ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೆ ಮಧುಶ್ರೀ ಬೇರೆಯವರನ್ನು ವಿವಾಹವಾದರೆ ಆಕೆ ಮದುವೆಯಾಗುವ ಹುಡುಗನಲ್ಲಿ ತನಗೆ ಮತ್ತು ಮಧುಶ್ರೀಗೆ ಸಂಬಂಧವಿತ್ತು ಎಂದು ಹೇಳುವುದು ಮಾತ್ರವಲ್ಲದೆ ಮಧುಶ್ರೀ ಬೇರೆಯವರನ್ನು ಮದುವೆಯಾದರೆ ಆಕೆಯನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದು ಆತನ ದುಷ್ಪ್ರೇರಣೆಯಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ಮಾವ ವಿಠಲ ಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಮಧುಶ್ರೀ ಅವರ ಮಾವ ವಿಠಲರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.