HomePage_Banner
HomePage_Banner
HomePage_Banner

ಸವಣೂರು : ವಿದೇಶದಲ್ಲಿದ್ದ ಮಗನಿಗೆ ಕೊಲೆ ಬೆದರಿಕೆ | ಮುಕ್ವೆಯ ಯುವಕನ ವಿರುದ್ದ ತಾಯಿಯಿಂದ ದೂರು

Puttur_Advt_NewsUnder_1
Puttur_Advt_NewsUnder_1

ಸವಣೂರು: ವಿದೇಶದಲ್ಲಿ ಉದ್ಯೋಗ‌ ಮಾಡಿಕೊಂಡಿರುವ ಯುವಕನಿಗೆ ನರಿಮೊಗರು ಗ್ರಾಮದ ಮುಕ್ವೆಯ ಶಾಪಿ ಎಂಬಾತ ಕೊಲೆ ಬೆದರಿಕೆ ಒಡ್ಡಿರುವ ಕುರಿತು ಯುವಕನ ತಾಯಿ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸವಣೂರು ಗ್ರಾಮದ ಇಬ್ರಾಹಿಂ ಎಂಬವರ ಪತ್ನಿ ಜೈನಾಬಿ ಅವರ ಮಗ ಶರೀಫ್ ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದು,ಅಲ್ಲಿ ಜೈನಾಬಿ ಅವರ ದೂರದ ಸಂಬಂಧಿ ಶಾಫಿ ಎಂಬವರು ಉದ್ಯೋಗದಲ್ಲಿರುವಾಗ ಯಾವುದೋ‌ ಕಾನೂನು ಬಾಹಿರ ಕೆಲಸ ಮಾಡಿ ಕೆಲಸದಿಂದ ವಜಾಗೊಂಡಿದ್ದರು.ಶಾಫಿ ಅವರು ಬೇರೆ ಕೆಲಸ ತೆಗೆಸಿಕೊಡುವಂತೆ ಶೆರೀಫ್ ನಲ್ಲಿ ಒತ್ತಾಯ ಮಾಡಿದ್ದು,ಅಲ್ಲಿ ಕೆಲಸ ಸಿಗದೆ ಮರಳಿ ಊರಿಗೆ ಬಂದಿದ್ದರು.

ಊರಿಗೆ ಬಂದ ಬಳಿಕ ಶಾಫಿ ಅವರು ತಮ್ಮ ಪರಿಚಯಸ್ಥರಲ್ಲಿ ಶೆರಿಫ್ ತನಗೆ ಕೆಲಸ ಕೊಡಿಸಲು ಯಾವುದೇ ಪ್ರಯತ್ನ ಮಾಡಿಲ್ಲವೆಂದೂ ,ಶೆರೀಫ್ ಊರಿಗೆ ಬಂದಾಗ ಆತನ ಕೈ ಕಾಲು ಕಡಿಯುವುದಾಗಿ ಮತ್ತು ಕೊಲೆ‌ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.ಆದ್ದರಿಂದ ಶಾಫಿ ವಿರುದ್ದ ಸೂಕ್ತ ಕ್ರಮಕೈಗೊಂಡು ರಕ್ಷಣೆ ನೀಡುವಂತೆ ಎಂದು ಜೈನಾಬಿ ಅವರು ಬೆಳ್ಳಾರೆ ದೂರು ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.