HomePage_Banner
HomePage_Banner
HomePage_Banner

ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಆಡಳಿತ ಮೇಲ್ವಿಚಾರಕ ಅಬ್ದುಲ್ ಅಜೀಜ್ ಅಸ್‌ಬಾರ್ಕ್ ನಾಳೆ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಆಡಳಿತ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಅಜೀಜ್ ಅಸ್‌ಬಾರ್ಕ್ ಮಿತ್ತೂರು ರವರು 34 ವರ್ಷಗಳ ಸೇವೆಯನ್ನು ಮುಗಿಸಿ ಅ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. ಇವರು ತನ್ನ ಸೇವಾವಧಿಯಲ್ಲಿ ಪುತ್ತೂರು, ಮಂಗಳೂರು, ಚಿಕ್ಕಮಗಳೂರು ಹಾಗೂ ಮೈಸೂರುನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ ತನಿಖಾದಳದಲ್ಲಿ ತನಿಖಾಧಿಕಾರಿಯಾಗಿದ್ದಾಗ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ 3 ಬಾರಿ ಉನ್ನತ ಪ್ರಶಸ್ತಿಗೆ ಭಾಜನರಾಗಿದ್ದರು. ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಇವರು ಉತ್ತಮ ಕ್ರೀಡಾಪಟುವಾಗಿದ್ದರು.

ಮಿತ್ತೂರು ಅಸ್‌ಬಾರ್ಕ್ ಮಂಜಿಲ್ ನಿವಾಸಿಯಾಗಿರುವ ಅಬ್ದುಲ್ ಅಜೀಜ್ ರವರ ಪತ್ನಿ ಮಾಲಿಕಾ ಅಜೀಜ್ ಗೃಹಿಣಿಯಾಗಿದ್ದಾರೆ. ಪುತ್ರ ಅಮೀರ್ ಸುಹೇಲ್ ರವರು ಕೆನಡಾ ಸರಕಾರದ ಅಧೀನದ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೊಸೆ ಡಾ.ಅಫ್ರಾ ಸುಹೇಲ್ ರವರು ಮಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ಪುತ್ರಿ ಸುನೈನಾ ರೈಹಾನ್ ರವರು ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ಅಳಿಯ ಮಹಮ್ಮದ್ ರೈಹಾನ್ ನಿಟ್ಟೆ ರವರು ಸೌದಿ ಅರೇಬಿಯಾದ ಆರ್.ಎಂ.ಕೋ. ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕಿರಿಯ ಪುತ್ರಿ ಸನಾ ಸುಹಾನಾ ಫಿಜಿಯೋಥೆರಪಿ ವ್ಯಾಸಾಂಗ ಮಾಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.