HomePage_Banner
HomePage_Banner
HomePage_Banner

ಪ್ರವಾದಿ ವಚನವನ್ನು ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ: ಹಕಿಂ ಫೈಝಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತಿನಲ್ಲಿ ಲೋಕಅವಸಾನ ಕಾಲದವರೆಗೆ ಏನೆಲ್ಲಾ ಘಟನೆಗಳು ನಡೆಯಲಿದೆ ಎಂಬುದನ್ನು ಕಣ್ಣಿಗೆ ಕಾಣುವಂತೆ ತನ್ನ ವಚನದಲ್ಲಿ ಬಣ್ಣಿಸಿದ ಪ್ರವಾದಿಯವರ ವಚನವನ್ನು ಜಗತ್ತೇ ನಿಬ್ಬೆರಗಾಗಿ ಆಲಿಸುತ್ತಿದೆ, ಅದರ ಬಗ್ಗೆ ಅಧ್ಯಯನ ನಡೆಸುತ್ತಿದೆ, ಆದರೆ ಪ್ರವಾದಿ ಅನುಯಾಯಿಗಳು ಅವರ ಆದರ್ಶವನ್ನು ಪಾಲಿಸುವಲ್ಲಿ ಹಿಂದೆ ಸರಿಯುತ್ತಿದ್ದಾರೆ ಎಂದು ಕುಂಬ್ರ ಬದ್ರಿಯಾ ನಗರ ಖತೀಬ್ ಹಕೀಂ ಫೈಝಿ ಹೇಳಿದರು.

ಅವರು ಮಸೀದಿಯಲ್ಲಿ ನಡೆದ ಮಿಲಾದ್ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರವಾದಿ ಮುಹಮ್ಮದರು ಕೇವಲ ಮುಸ್ಲಿಮರಿಗೆ ಮಾತ್ರ ಪ್ರವಾದಿಯವರಾಗಿಲ್ಲ ಅವರು ಇಡೀ ವಿಶ್ವ ಮಾನವ ಕುಲಕ್ಕೆ ಪ್ರವಾದಿಯನ್ನಾಗಿ ಅಲ್ಲಾಹನು ನೇಮಿಸಿದ್ದಾನೆ. 1400 ವರ್ಷಗಳ ಹಿಂದೆ ಅಂದಕಾರದಲ್ಲಿ ಮುಳುಗಿದ್ದ ಅರೇಬಿಯನ್ ಜನತೆಯಲ್ಲಿ ವಿಜ್ಞಾನದ ಬೆಳಕನ್ನು ನೀಡಿ ಅವರನ್ನು ಸತ್ಯದೆಡೆಗೆ ಮರಳುವಂತೆ ಮಾಡಿದ ಪ್ರವಾದಿಯವರು ಮನುಕುಲಕ್ಕೆ ಸತ್ತ, ನ್ಯಾಯ, ನೀತಿ , ಧರ್ಮವನ್ನು ಬೋದಿಸಿದವರು. ಅವರ ಜನ್ಮ ದಿನದಂದು ಮಾತ್ರ ನಾವು ಅವರನ್ನು ನೆನೆಸಿದರೆ ಸಾಲದು ಅವನ ಜೀವನ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ರಾಯಲ್, ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಜತೆ ಕಾರ್ಯದರ್ಶಿ ಬಶೀರ್ ಕಡ್ತಿಮಾರ್, ಕೋಶಾಧಿಕಾರಿ ಅಬ್ಬಾಸ್ ಬ್ರೆಂಚ್, ಮಾಜಿ ಅಧ್ಯಕ್ಷ ಮೂಸಾ ಮುಸ್ಲಿಯಾರ್, ಕೆ ಬಿ ಮಹಮ್ಮದ್ ಬದ್ರಿಯಾನಗರ, ಅರಬಿಕುಂಞಿ ಮಗಿರೆ, ಅಬ್ದುಲ್‌ರಹಿಮಾನ್ ಕೊಯಿಲ, ಹಸೈನಾರ್ ಕೊಯಿಲ,ನೌಫಲ್ ಸಖಾಫಿ ಬೆದ್ರಗುರಿ, ಹಾಫಿಝ್ ಬದ್ರಿಯಾನಗರ,ಸದರ್ ಮುಅಲ್ಲಿಂ ಜಾಬಿರ್ ಜೌಹರಿ, ಸಯ್ಯದ್ ಕೊಯಿಲ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೇಯಲ್ಲಿ ಸೀರಣಿ ವಿತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.