HomePage_Banner
HomePage_Banner
HomePage_Banner

ಕೊಂಬೆಟ್ಟು ಬಳಿ ರಸ್ತೆ ಮೋರಿ ಕಾಮಗಾರಿ  ಅ.30ರಿಂದ 1 ತಿಂಗಳು ಏಕಮುಖ ಸಂಚಾರ-ನಗರಸಭೆ ಪ್ರಕಟಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು-ಮಂಗಳೂರು ಮುಖ್ಯರಸ್ತೆಯ ಬೊಳುವಾರು ಕೊಂಬೆಟ್ಟು ಸಮೀಪ ನಾರಾಯಣ ನಾಯ್ಕ ಸನ್ಸ್ ಜವುಳಿ ಅಂಗಡಿಯ ಎದುರು ನಗರಸಭೆ ವತಿಯಿಂದ ರಸ್ತೆ ಮೋರಿ ಕಾಮಗಾರಿ ನಡೆಯಲಿರುವುದರಿಂದ ಅ.30ರಿಂದ ಒಂದು ತಿಂಗಳ ಅವಧಿಗೆ ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ನಗರಸ‘ ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

ಮುಖ್ಯರಸ್ತೆಯಲ್ಲಿ ಮೋರಿ ಕುಸಿದು ಮಳೆ ನೀರು ಹರಿಯಲು ಅನಾನುಕೂಲ ಆಗುತ್ತಿದೆ. ಅಲ್ಲದೇ ಅಪಾಯದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ರೂ. ೧೯.೫ಲಕ್ಷ ವೆಚ್ಚದಲ್ಲಿ ಮೋರಿ ಅಳವಡಿಕೆ ಕಾಮಗಾರಿ ನಡೆಯಲಿದೆ. ಮೋರಿ ಕಾಮಗಾರಿ ನಡೆಯುವ ಸಂದ‘ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾಹನಗಳಿಗೆ ಪಟ್ಟಣ ಪ್ರವೇಶಕ್ಕೆ ಮಾತ್ರ ಅವಕಾಶ

ಬೊಳುವಾರು ಕಡೆಯಿಂದ ಬರುವ ವಾಹನಗಳಿಗೆ ಮಾತ್ರ ಪಟ್ಟಣ ಪ್ರವೇಶಕ್ಕೆ ಅವಕಾಶವಿದ್ದು, ಹೊರ ಹೋಗುವ ಬಸ್, ಲಾರಿ ಸೇರಿದಂತೆ ಘನ ವಾಹನಗಳು ಎಮ್.ಟಿ.ರಸ್ತೆಯಾಗಿ ಮೊಳಹಳ್ಳಿ ಶಿವರಾಯ ವೃತ್ತದ ಬಳಿಯಿಂದ ಬೈಪಾಸ್ ಸೇರುವುದು, ಅದೇ ರೀತಿ ಕಾರು, ರಿಕ್ಷಾ ಸೇರಿದಂತೆ ದ್ವಿಚಕ್ರ ವಾಹನಗಳು ಶ್ರೀ‘ರ್ ‘ಟ್ ಬ್ರದರ‍್ಸ್ ಅಂಗಡಿಯ ಬಳಿಯಿಂದ ಎಡಕ್ಕೆ ತಿರುಗಿ ಮೊಳಹಳ್ಳಿ ಶಿವರಾಯ ವೃತ್ತದ ಮೂಲಕ ಬೈಪಾಸ್ ಸೇರುವುದು. ಒಂದು ತಿಂಗಳ ಅವಧಿಯ ತನಕ ಸಂಚಾರದಲ್ಲಿ ಬದಲಾವಣೆ ಇದ್ದು, ಈ ಸಂದ‘ ಮೊಳ್ಳಹಳ್ಳಿ ಶಿವರಾಯ ರಸ್ತೆಯಿಂದ ಬೈಪಾಸ್ ರಸ್ತೆಯ ತನಕ ರಸ್ತೆಯ ಅಕ್ಕಪಕ್ಕ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದುರಾಮ ನಾಯ್ಕ್, ಎಸ್.ಐ ಸಂಚಾರ ಪೊಲೀಸ್ ಠಾಣೆ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.