HomePage_Banner
HomePage_Banner
HomePage_Banner
Breaking News

ಕಸದ ಕೊಂಪೆಯಾದ ಸಂಪ್ಯ…! ಮಾಣಿ- ಮೈಸೂರು ಹೈವೇ ಬದಿಗಳಲ್ಲಿ ತ್ಯಾಜದ್ದೇ ರಗಳೆ…

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರದ ರಸ್ತೆ ಬದಿಗಳಲ್ಲಿ ತ್ಯಾಜ್ಯ ಹಾಕುವ ಮಂದಿಯನ್ನು ನಗರಸಭೆ ಸಿಬಂದಿಗಳು ರೆಡ್ ಹ್ಯಾಂಡಾಗಿ ಹಿಡಿಯುತ್ತಿದ್ದಾರೆ. ಈಗಾಗಲೇ ಕಸ ಹಾಕಿದ ಹಲವು ಮಂದಿಯ ವಿರುದ್ದ ಪ್ರಕರಣವೂ ದಾಖಲಾಗಿದೆ. ನಗರಸ‘ ಅಧಿಕಾರಿಗಳು ತ್ಯಾಜ್ಯ ಹಾಕುವವರ ವಿರುದ್ದ ಕೇಸು ಜಡಿದ ಮೇಲೆ ಕಸ ನಗರಕ್ಕೆ ಬರುತ್ತಿಲ್ಲ.. ಆದರೆ ಕೆಲವರು ಮನೆಯಿಂದ ತರುವ ಕಸವನ್ನು ಮಾಣಿ- ಮೈಸೂರು ರಾ.ಹೆದ್ದಾರಿಯ ಸಂಪ್ಯದ ಹೈವೇ ಬದಿಯಲ್ಲಿ ಸುರಿಯುತ್ತಿದ್ದಾರೆ ಇದರಿಂದ ಸಂಪ್ಯ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ ಎಂಬ ದೂರು ವ್ಯಕ್ತವಾಗಿದೆ.

ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ , ರಸ್ತೆ ಬದಿಯಲ್ಲಿ ಹಾಕಬೇಡಿ ದಂಡ ಹಾಕ್ತೇವೆ ಎಂದು ಆರ್ಯಾಪು ಗ್ರಾಪಂ ವತಿಯಿಂದ ರಸ್ತೆ ಬದಿಯಲ್ಲಿ ನಾಮಲಕವನ್ನು ಹಾಕಲಾಗಿದೆ. ನಾಮಲಕ ಹಾಕಿದ ಜಾಗದಲ್ಲೇ ಉದ್ಧೇಶಪೂರ್ವಕವಾಗಿ ಕೆಲವರು ಕಸದ ಪೊಟ್ಟಣವನ್ನೇ ತಂದು ಹಾಕುತ್ತಿದ್ದಾರೆ. ಯಾರು ಕಸ ಹಾಕ್ತಾರೆ ಎಂಬುದನ್ನು ಪತ್ತೆ ಮಾಡಲು ಅಲ್ಲಿ ಸಿ ಸಿ ಕೆಮರಾ ಅಳವಡಿಸಿಲ್ಲವಾದ್ದರಿಂದ ಸಾರ್ವಜನಿಕರು ಅಲ್ಲೇ ಕಸವನ್ನು ಹಾಕುತ್ತಿದ್ದಾರೆ.

ಹೊಳೆಗಳಿಗೂ ತ್ಯಾಜ್ಯ: ವಾಹನದಲ್ಲಿ ಬರುವ ಸವಾರರು ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಮಾತ್ರವಲ್ಲದೆ ಕೊಳೆತ ತ್ಯಾಜ್ಯವನ್ನು ಸೇತುವೆ ಇದ್ದಲ್ಲಿ ಹೊಳೆಗೆ ಎಸೆಯುತ್ತಿದ್ದಾರೆ. ಕುಂಬ್ರ, ಶೇಕಮಲೆ, ಸಂಟ್ಯಾರ್ ಸೇತುವೆಯ ಬಳಿಯೂ ರಾಶಿ ರಾಶಿ ಕಸಗಳನ್ನು ತಂದು ಸುರಿಯುತ್ತಿದ್ದಾರೆ. ಹೊಳೆಯಲ್ಲಿ ನೀರು ಇರುವ ಕಾರಣ ತ್ಯಾಜ್ಯ ನೀರಿನ ಜೊತೆ ಸೇರಿಕೊಳ್ಳುತ್ತಿದೆ. ಕೋಳಿ ತ್ಯಾಜ್ಯ , ಹೊಟೇಲ್ ತ್ಯಾಜ್ಯಗಳು ಹೊಳೆ ನೀರು ಪಾಲಾಗುತ್ತಿರುವುದು ಹೊಳೆ ಬದಿ ನಿವಾಸಿಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ. ಸತ್ತ ಕೋಳಿಗಳು ನೀರಿನಲ್ಲಿ ಪೂರ್ಣವಾಗಿ ಕೊಚ್ಚಿ ಹೋಗದೆ ಅಲ್ಲಲ್ಲಿ ಸಿಲುಕಿಕೊಂಡು ಗಬ್ಬು ವಾಸನ ಹೊಡೆಯುತ್ತಿದೆ.

ಪರಿಹಾರವೇನು?: ಕೊಳೆತ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕುತ್ತಿರುವ ಕಿಡಿಗೇಡಿಗಳಿಗೆ ಕಡಿವಾಣ ಹಾಕಿ ಎಂದು ಪ್ರತೀ ಬಾರಿಯೂ ಗ್ರಾಮಸ್ಥರು ಗ್ರಾಪಂಗೆ ಮನವಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಕಸ ಹಾಕುವ ಮಂದಿಯನ್ನು ಹಿಡಿಯಲು ಗ್ರಾಪಂಗೆ ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ರಾತ್ರಿ ವೇಳೆ ಅಥವಾ ಮುಂಜಾನೆ ಈ ಕೃತ್ಯಗಳು ನಡೆಯುತ್ತಿದೆ. ಗ್ರಾಮಗಳಲ್ಲಿ ಸಿ ಸಿ ಕೆಮರಾ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ತ್ಯಾಜ್ಯ ಹಾಕುವ ಮಂದಿಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಕುಂಬ್ರ ಸೇತುವೆ ಬಳಿ ತ್ಯಾಜ್ಯ ಹಾಕುವವರನ್ನು ಸಾರ್ವಜನಿಕರು ಹೊಂಚು ಹಾಕಿ ಹಿಡಿದಿದ್ದರು. ಆ ಬಳಿಕ ಕಸ ಬೀಳುವುದು ಮಾತ್ರ ನಿಂತಿಲ್ಲ. ತ್ಯಾಜ್ಯವನ್ನು ಹಾಕದೇ ಇರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಚಿಂತನೆ ಹೊಳೆಯುವುದೇ ಇಲ್ಲ ಎಂಬುದೇ ವಿಪರ್ಯಾಸವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.