HomePage_Banner
HomePage_Banner
HomePage_Banner

ಬಾಲ್ಯ ಸ್ನೇಹಿತರ ಶ್ರೇಯೋಭಿವೃದ್ಧಿಗಾಗಿ ಸಮಯ ಮೀಸಲಿಟ್ಟ ವಾಟ್ಸಾಪ್ ‌ಗ್ರೂಪ್ ಸ್ನೇಹಿತರು

Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನ ಎಸ್.ಆರ್.ಕೆ. ಲ್ಯಾಡರ‍್ಸ್ ಮಾಲಕ ಕೇಶವ ಎ. ಅವರ ನೇತೃತ್ವದಲ್ಲಿ ಮಾದರಿ ಕಾರ್ಯ

    ಪುತ್ತೂರು: ಶೈಕ್ಷಣಿಕ ವರ್ಷ ಮುಗಿಸಿ ಕೆಲಸ ಹುಡುಕಲು ಹೊರಟ ಮೇಲೆ ಕೆಲಸದ ಬಗ್ಗೆಯೇ ಹೆಚ್ಚು ಗಮನಹರಿಸಿ ನಮ್ಮ ಸ್ನೇಹದ ಮಹತ್ವ ದಿನೇದಿನೇ ಕುಗ್ಗುತ್ತಾ ಹೋಗುತ್ತದೆ. ಬದುಕಿನ ಹೋರಾಟದಲ್ಲಿ ನಾವು ವಿಭಿನ್ನ ವ್ಯಕ್ತಿಗಳಾಗಿ ವಿಭಿನ್ನ ಅನುಭವಗಳನ್ನು ಹೊತ್ತು ಬೇರೆ ಬೇರೆಯದೇ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಬಾಲ್ಯದ ಸ್ನೇಹಿತರೊಂದಿಗೆ ಸ್ವಲ್ಪ ಹೊತ್ತು ಸುಮ್ಮನೆ ಕಾಲ ಕಳೆಯುವುದು ಬಿಡಿ, ಪೋನ್‌ನಲ್ಲಿ ಮಾತನಾಡುವುದಕ್ಕೂ ಸಮಯ ಸಿಗುವುದಿಲ್ಲ ಎನ್ನುವವರಿಗೆ ಇಲ್ಲೊಂದು ಅದ್ಭುತ ಉತ್ತರವಿದೆ. 40ರ ವಯೋಮಾನದ ಬಳಿಕವೂ ಸಮಾಜಕ್ಕಾಗಿ ಮಾಡುವ ಕೆಲಸಗಳು ಬೇಕಾದಷ್ಟು ಇವೆ ಅನ್ನೋದನ್ನು ಬಿಳಿನೆಲೆಗೋಪಾಲಕೃಷ್ಣ ಪ್ರೌಢಶಾಲೆಯ 1992ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಮಾದರಿಯಾಗಿದೆ.

ಪುತ್ತೂರಿನ ಮುಕ್ರಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಎಸ್.ಆರ್.ಕೆ. ಲ್ಯಾಡರ‍್ಸ್‌ನ ಕೇಶವ ಎ ಅವರು ಕೋವಿಡ್ -19 ಲಾಕ್‌ಡೌನ್ ಸಂದರ್ಭ ತಮ್ಮ ಎಸ್‌ಎಸ್‌ಎಲ್‌ಸಿ ಸಹಪಾಠಿಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಿ ವಾಟ್ಸಾಪ್ ಗ್ರೂaಪ್ ರಚನೆ ಮಾಡಿದ್ದಾರೆ. ೮ ತಿಂಗಳ ಹಿಂದೆ ರಚನೆ ಗೊಂಡ ಈ ವಾಟ್ಸಾಪ್ ಗ್ರೂಪ್‌ನಲ್ಲಿ ಇದೀಗ ಸುಮಾರು 55 ಮಂದಿ ಬಾಲ್ಯದ ಎಸ್‌ಎಸ್‌ಎಲ್‌ಸಿ ಸಹಪಾಠಿಗಳು ಸದಸ್ಯರಾಗಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಸುಮಾರು 15 ಮಂದಿ ಸ್ನೇಹಿತರ ಮೂಲಕ ಆರ್ಥಿಕವಾಗಿ ಹಿನ್ನಡೆಯುಳ್ಳ, ಆರೋಗ್ಯದ ಸಮಸ್ಯೆಯಲ್ಲಿರುವ ಮತ್ತು ಮಕ್ಕಳ ಶಿಕ್ಷಣಕ್ಕೆ ತೊಂದರೆಯುಳ್ಳವರನ್ನು ಗುಮನಿಸಿ ಅವರಿಗೆ ಸಹಾಯ ಹಸ್ತ ತೋರಿಸುವ ಕೆಲಸ ಆರಂಭಿಸಿದ್ದಾರೆ.

ಈಗಾಗಲೇ ಹಲವು ನೆರವು ಯೋಜನೆ ಕಾರ್ಯಗತಗೊಂಡಿದ್ದು, ಅ.26ರಂದು ಕೇಶವ ಎ ಅವರ ಕೊಯಿಲ ಕಲಾಯಿಗುತ್ತು ಫಾರ್ಮ್‌ಹೌಸ್‌ನಲ್ಲಿ ನಡೆದ ಸ್ನೇಹಿತರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮುಂದಿನ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಗಣಿತ ಶಾಸ್ತ್ರಕ್ಕೆ ಶಿಕ್ಷಕರಾಗಿದ್ದು ಪ್ರಸ್ತುತ ರಾಮಕುಂಜ ಶಾಲೆಯ ಮುಖ್ಯ ಗುರುಗಳಾಗಿರುವ ಸತೀಶ್ ಭಟ್ ಅವರು ತಮ್ಮ ವಿದ್ಯಾರ್ಥಿಗಳು ಮಾಡುತ್ತಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಬೆಂಗಳೂರಿನಲ್ಲಿ ಸಕ್ಷಮ್ ಇಂಟೀರಿಯರ್ಸ್ ಪ್ರೈವೇಟ್‌ನ ಎಮ್ ಡಿ ಆಗಿರುವ ಸೂರ್ಯ ಪ್ರಸಾದ್ ರಾವ್ , ಬೆಂಗಳೂರಿನ ಮೆಕ್ರೋ ಟೆಕ್ನಾಲೋಜಿಯ ಶ್ರೀರಾಮ್, ನಾವಿಟೊ ಮರೀಟಿನ್ ಸೊಲ್ಯೂಶನ್‌ನ ಮ್ಹಾಲಕರಾಗಿರುವ ನೆಟ್ಟಣದ ಸುರೇಶ್, ಆಲಂಕಾರು ಡಿ.ಸಿ.ಸಿ.ಬ್ಯಾಂಕ್ ಮೆನೇಜರ್ ಆಗಿರುವ ಅಮಿತಾ, ಕೇರಳದ ಕಳ್ಳಪ್ಪಳ್ಳಿಯಲ್ಲಿ ಕೃಷಿಕರಾಗಿರುವ ಅಶಿತಾ, ಕೈಕಂಬದ ಆನಂದ್ ಕೆ.ಆರ್, ಇಲೆಕ್ಟ್ರೀಷಿಯನ್ ಆಗಿರುವ ಕೊಂಬಾರಿನ ಆನಂದ, ನೆಟ್ಟಣದ ಸುಂದರ, ಮರ್ದಾಳದ ಸುಮಿ, ಕಡಬ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಲತಾ, ಮಂಗಳೂರಿನಲ್ಲಿರುವ ಪ್ರಿಯ, ಕಾವುನಲ್ಲಿರುವ ಕಣ್ಣಗಿ, ಪುತ್ತೂರಿನಲ್ಲಿ ಜನಸೇವಾ ಕೇಂದ್ರ ನಡೆಸುತ್ತಿರುವ ಮಹೇಶ್, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಮ್ಯಾಥ್ಯು ವಿನೋದ್, ಬಜ್ಪೆಯಲ್ಲಿ ಶಿಕ್ಷಕರಾಗಿರುವ ಲಾಲ್ ಮೋಹನ್, ಸಾಮಾಜಿಕ ಕಾರ್ಯಕರ್ತ ಸುರೇಶ್, ಕೃಷಿಕ ಧರ್ಮಪಾಲ, ಸುಬ್ರಹ್ಮಣ್ಯದಲ್ಲಿರುವ ಚಂದ್ರಾವತಿ, ಕೊಂಬಾರು ಕೆಎಫ್‌ಡಿಸಿಯಲ್ಲಿರುವ ಪುಷ್ಪರಾಣಿ, ಮರ್ದಾಳದ ಸುಜಾತ ಉಪಸ್ಥಿತರಿದ್ದರು. ಬಾಲ್ಯದ ಸಹಪಾಠಿಗಳಲ್ಲಿ 6 ಮಂದಿ ನಿಧನರಾಗಿದ್ದು, ಸಭೆಯ ಆರಂಭದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಕೇವಲ 8 ತಿಂಗಳ ಹಿಂದೆ ರಚನೆ ಗೊಂಡ ಬಾಲ್ಯ ಸ್ನೇಹಿತರ ವಾಟ್ಸಾಪ್ ಗ್ರೂಪ್‌ನಲ್ಲಿ ಈಗಾಗಲೇ ಆರೋಗ್ಯ, ಶಿಕ್ಷಣ, ನೆರವಿಗೆ ಸಂಬಂಧಿಸಿ ರೂ. 3 ಲಕ್ಷಕ್ಕೂ ಮಿಕ್ಕಿ ಸಹಾಯಹಸ್ತ ನೀಡಲಾಗಿದೆ. ನಮ್ಮ ಸದಸ್ಯರ ಪುತ್ರನಿಗೆ ಡಿಪ್ಲೊಮೊ ಪದವಿ ಶಿಕ್ಷಣ ಕಲಿಯಲು ಕಾಲೇಜು ಶುಲ್ಕ ಪಾವತಿಸಲಾಗಿದೆ. ಮರ್ದಾಲದ ವ್ಯಕ್ತಿಗೆ ಆರೋಗ್ಯ ನೆರವು, ಆನ್‌ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಸಮಸ್ಯೆಗೆ 8 ಮಂದಿಗೆ ಆನ್‌ಡ್ರಾಯ್ಡ್ ಮೊಬೈಲ್ ಕೊಡಿಸಲಾಗಿದೆ. ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಸಹಪಾಠಿಗಳಲ್ಲದೆ ಇತರರಿಗೂ ಆಹಾರದ ಕಿಟ್, ವೈದ್ಯಕೀಯ ಸೌಲಭ್ಯ ಕೊಡಿಸಿದ್ದೇವೆ-ಕೇಶವ ಎ. ಎಸ್.ಆರ್.ಕೆ.ಲ್ಯಾಡರ‍್ಸ್, ಮುಕ್ರಂಪಾಡಿ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.