HomePage_Banner
HomePage_Banner
HomePage_Banner

ಬ್ರಹ್ಮಾವರದ ಗೇರು ಬೀಜ ಕಾರ್ಖಾನೆಗಳಲ್ಲಿ ಕಳವು ಪ್ರಕರಣ: ಮೊಟ್ಟೆತಡ್ಕದ ಮೊಹಮ್ಮದ್ ಬಶೀರ್, ಮಿತ್ತೂರಿನ ಉಮ್ಮರ್ ಫಾರೂಕ್ ಬಂಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಕೆಳಕರ್ಜೆ ಮತ್ತು ಚೇರ್ಕಾಡಿ ಗ್ರಾಮದ ಮುಂಡ್ಕಿನಚೆಡ್ಡು ಎಂಬಲ್ಲಿ ಗೇರು ಬೀಜದ ಎರಡು ಕಾರ್ಖಾನೆಗಳಿಂದ ಲಕ್ಷಾಂತರ ರೂ.ಮೌಲ್ಯದ ಗೇರು ಬೀಜಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೊಟ್ಟೆತಡ್ಕ, ಮಿತ್ತೂರು ನಿವಾಸಿ ಆರೋಪಿಗಳಿಬ್ಬರನ್ನು ಪೊಲೀಸರು ಪ್ರಕರಣ ನಡೆದ ಎರಡೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಇಂದಿರಾನಗರ ದಿ.ಅಬ್ದುಲ್ ರೆಹಮಾನ್ ಅವರ ಪುತ್ರ ಸಯ್ಯದ್ ಮೊಹಮ್ಮದ್ ಬಶೀರ್(37ವ) ಮತ್ತು ಕೆದಿಲ ಗ್ರಾಮದ ಮಿತ್ತೂರು ಕಲ್ಲಸರ್ಪೆ ದಿ.ಪಲ್ಲಿಯಬ್ಬ ಎಂಬವರ ಪುತ್ರ ಉಮ್ಮರ್ ಫಾರೂಕ್(36ವ)ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಹೊಸೂರು ಗ್ರಾಮದ ಕೆಳ ಕರ್ಜೆಯಲ್ಲಿರುವ ‘ವಿನಾಯಕ’ ಕ್ಯಾಶ್ಯೂ ಫ್ಯಾಕ್ಟರಿಯ ಸೈಡಿನ ಬಾಗಿಲನ್ನು ಬಲತ್ಕಾರದಿಂದ ಮೀಟಿ ಮೇಲೆತ್ತಿ ಕಳವಿಗೆ ಯತ್ನಿಸಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.26ರಂದು ಪ್ರಕರಣ ದಾಖಲಾಗಿತ್ತು.ಮತ್ತೊಂದೆಡೆ ಚೇರ್ಕಾಡಿ ಗ್ರಾಮದ ಮುಂಡ್ಕಿನ್‌ಜೆಡ್ಡು ಎಂಬಲ್ಲಿ ‘ವಿಜಯದುರ್ಗಾ’ ಎಂಬ ಗೇರು ಬೀಜ ಕಾರ್ಖಾನೆಯ ಒಳಗೆ ನುಗ್ಗಿ ಸ್ಟಾಕ್ ರೂಮ್‌ನಲ್ಲಿದ್ದ ತಲಾ 10 ಕೆಜಿ ತೂಕದ ಒಟ್ಟು 32 ಡಬ್ಬಗಳಲ್ಲಿದ್ದ, ಅಂದಾಜು ರೂ. 14,000 ಮೌಲ್ಯದ ಗೇರು ಬೀಜ ಕಳ್ಳತನ ಮಾಡಿರುವ ಕುರಿತು ಅ.27ರಂದು ಇನ್ನೊಂದು ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರರವರ ಮಾರ್ಗದರ್ಶನದಂತೆ ಪೊಲಿಸ್ ಉಪಾಧೀಕ್ಷಕ ಜೈಶಂಕರ್ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭರವರ ನಿರ್ದೇಶನದಂತೆ ಅ.28ರಂದು ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ. ಸಿ. ಅವರ ವಿಶೇಷ ತಂಡ ಆರೋಪಿಗಳನ್ನು ಪುತ್ತೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ,ಪರಾರಿಯಾಗಲು ಉಪಯೋಗಿಸಿದ ರೂ.೪ ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು (KA-01-ML-8836), ಕಳವು ಮಾಡಿದ ರೂ.1.40 ಲಕ್ಷ ಮೌಲ್ಯದ 32 ಡಬ್ಬ ಗೇರು ಬೀಜ, ಆರೋಪಿಗಳ ವಶದಲ್ಲಿದ್ದ ರೂ.12 ಸಾವಿರ ಮೌಲ್ಯದ 3 ಮೊಬೈಲ್ ಫೋನ್‌ಗಳು ಸೇರಿ ಒಟ್ಟು ಸುಮಾರು ರೂ.5,52,000 ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಶಾಂತರಾಜ್, ಎ.ಎಸ್.ಐ ಗೋಪಾಲ ಪೂಜಾರಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ, ರಾಘವೇಂದ್ರ ಕಾರ್ಕಡ, ಸಂತೋಷ್ ಶೆಟ್ಟಿ, ಗಣೇಶ ದೇವಾಡಿಗ, ದಿಲೀಪ್ ಕುಮಾರ, ಚಾಲಕ ಅಣ್ಣಪ್ಪ ಸಹಕರಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.