HomePage_Banner
HomePage_Banner
HomePage_Banner

ಕೆಯ್ಯೂರಿನಲ್ಲಿ ಅಕ್ಷಯ ಗ್ರೂಪ್‌ನ 6ನೇ ಶಾಖೆ: ಅಕ್ಷಯ ಫಾರ್ಮ್ಸ್ ಫ್ರೆಶ್ ಚಿಕನ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಸ್ವಾವಲಂಭಿ ಬದುಕಿಗೆ ಜಯಂತ್‌ರವರು ಯುವಜನತೆಗೆ ಪ್ರೇರಣೆ-ಮಠಂದೂರು

ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ದೊಡ್ಡ ದೊಡ್ಡ ಉದ್ಯಮಗಳು ನಮ್ಮ ಪರಿಸರದಲ್ಲಿ ಕಾಲಿರಿಸುವ ಮೊದಲೇ ಯುವಜನತೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋಳಿ ಉದ್ಯಮದ ಮೂಲಕ ಸ್ವಾವಲಂಭಿ ಬದುಕನ್ನು ಯಶಸ್ವಿಯಾಗಿಸಿ ಸಮಾಜದಲ್ಲಿ ಓರ್ವ ಯಶಸ್ವಿ ಉದ್ಯಮಿ ಎನಿಸಿಕೊಂಡ ಜಯಂತ್ ನಡುಬೈಲುರವರು ಯುವಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.

ಗುಣಮಟ್ಟದ ಸೇವೆಯ ಭರವಸೆ ಮತ್ತು ಮೂರು ಲಕ್ಷಕ್ಕೂ ಮಿಕ್ಕಿ ಉತ್ಪಾದಿಸಿದ ನೈಜ ರುಚಿಯ ಕೋಳಿಗಳ ಸಾಕಾಣಿಕೆ ಹಾಗೂ ಮಾರಾಟ ಉದ್ಯಮದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಉದ್ಯಮಿ ಜಯಂತ್ ನಡುಬೈಲುರವರ ಮಾಲಕತ್ವದ ಅಕ್ಷಯ ಗ್ರೂಪ್‌ನ ಆರನೇ ಶಾಖೆಯಾದ ಅಕ್ಷಯ ಫಾರ್ಮ್ಸ್ ಫ್ರೆಶ್ ಚಿಕನ್ ಸಂಸ್ಥೆಯು ಕೆಯ್ಯೂರಿನ ವಿಶ್ವಚೇತನ ಕಾಂಪ್ಲೆಕ್ಸ್‌ನಲ್ಲಿ ಅ.೩೦ ರಂದು ಉದ್ಘಾಟನೆಗೊಂಡ ಸಂದರ್ಭದಲ್ಲಿ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯಕ್ಕೆ ರೋಗ ನಿರೋಧಕವುಳ್ಳ ಕೋಳಿ ಪೌಸ್ಟಿಕವುಳ್ಳ ಆಹಾರವಾಗಿದೆ ಎಂದು ಆರೋಗ್ಯ ಇಲಾಖೆ ಹಾಗೂ ಸರಕಾರವು ದೃಢಪಡಿಸಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಯುವಜನತೆ ವೈಟ್ ಕಾಲರ್ ಉದ್ಯೋಗವನ್ನು ಅರಸಿ ಹಳ್ಳಿಯಿಂದ ಪೇಟೆ ಕಡೆಗೆ ಧಾವಿಸುತ್ತಿದ್ದರು. ಕೋವಿಡ್ ಬಂದ ಮೇಲೆ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪೇಟೆಯಲ್ಲಿದ್ದ ಯುವಜನತೆ ಪುನಹ ಹಳ್ಳಿಗೆ ಆಗಮಿಸಿ ಇಲ್ಲಿಯೇ ಉದ್ಯೋಗವನ್ನು ಮಾಡುವ ಮೂಲಕ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕನಸಿಗೆ ನೀರೆರೆದಿದ್ದಾರೆ. ಆಳಾಗಿ ಬದುಕಬೇಡ ಅರಸನಾಗಿ ಬದುಕು ಎನ್ನುವಂತೆ ತಾನು ಉತ್ಪಾದಿಸಿದ ಯಾವುದೇ ವಸ್ತು ಸಾಮಾನ್ಯ ಪ್ರಜೆಗೂ ತಲುಪಿ ಉತ್ತಮ ಉದ್ಯಮಿ ಎನಿಸಿಕೊಂಡಾಗ ಸಮಾಜ ಗುರುತಿಸುತ್ತದೆ. ಕೃಷಿ ಮಸೂದೆಯ ಬಗ್ಗೆ ಪರ, ವಿರೋಧ ಏನೇ ಚರ್ಚೆ ನಡೆದರೂ ಕೋಳಿ ಉದ್ಯಮಕ್ಕೆ ಆ ಮಸೂದೆಯು ಪೂರಕವಾಗಿದೆ ಎಂದು ಹೇಳಲು ಖುಶಿ ಎನಿಸುತ್ತದೆ ಎಂದ ಅವರು ಜಯಂತ್ ನಡುಬೈಲುರವರ ಉದ್ಯಮದ ಹೆಸರಾಗಿರುವ ಅಕ್ಷಯ ಫ್ರೆಶ್ ಚಿಕನ್ಸ್ ಸಂಸ್ಥೆಯು ಸ್ವದೇಶಿ ಚಿಂತನೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಮಾತ್ರವಲ್ಲದೆ ಜಯಂತ್‌ರವರು ತನ್ನ ಉದ್ಯಮದ ಜೊತೆಗೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಜಯಂತ್ ರವರ ಕೋಳಿ ಉದ್ಯಮದ ಸೇವರಯ ಮುಖಾಂತರ ಜನರ ಪ್ರೀತಿ ಹಾಗೂ ವಿಶ್ವಾಸ ಗಳಿಸುತ್ತಾ ಮುನ್ನೆಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಉದ್ಯಮದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ-ದಿನೇಶ್ ಮೆದು:
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ, ಯಾವುದೇ ಉದ್ಯಮವನ್ನು ಆರಂಭಿಸಿದಾಗ ಕಷ್ಟ-ನಷ್ಟಗಳಾಗುವುದು ಸಹಜ. ನಷ್ಟ ಸಂಭವಿಸಿದಾಗ ಧೃತಿಗೆಡದೆ ಎಲ್ಲಿ ನಷ್ಟ ಸಂಭವಿಸಿದೆ ಎಂಬುದರ ಬಗ್ಗೆ ಪರಾಮರ್ಶೆ ಮಾಡಿದಾಗ ಉದ್ಯಮದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಜಯಂತ್‌ರವರು ಉದಾಹರಣೆಯಾಗಿದ್ದಾರೆ. ಇಪ್ಪತ್ತು ವರುಷಗಳ ಹಿಂದೆ ಸಣ್ಣ ಅಂಗಡಿಯೊಂದನ್ನು ತೆರೆದು ಒಳ್ಳೆಯ ಸೇವಾ ಮನೋಭಾವನೆಯಿಂದ ಜನರ ಪ್ರೀತಿ ಗಳಿಸಿ ಈಗ ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಕಂಡುಕೊಂಡ ಜಯಂತ್‌ರವರ ಸಾಧನೆ ಯುವಜನತೆಗೆ ಧೈರ್ಯ ಹಾಗೂ ಪ್ರೇರಣೆಯಾಗಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಕ್ಕೆ ತೊಡಗಿಸಿಕೊಂಡಾಗ ಬಹಳ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನು ಲಾಭದ ದೃಷ್ಟಿಯಿಂದ ನೋಡದೆ ತಾನು ಗಳಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಿದಾಗ ಮಾನವ ಸಹಜವಾಗಿ ಅಭಿವೃದ್ಧಿ ಹೊಂದುತ್ತಾನೆ ಎಂದು ಹೇಳಿ ಶುಭ ಹಾರೈಸಿದರು.

ಪೌಷ್ಟಿಕಾಂಶವಿದ್ದರೆ ಸ್ವಸ್ಥ ಸಮಾಜ, ಸದೃಢ ಸಮಾಜ ನಿರ್ಮಾಣ-ಡಾ|ಅರುಣ್ ಕುಮಾರ್:
ಭಾರತ್ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಮಂಗಳೂರು ಇದರ ಆಡಳಿತ ನಿರ್ದೇಶಕ ಡಾ|ಅರುಣ್ ಕುಮಾರ್ ಮಾತನಾಡಿ, ಕೋಳಿ ಹಾಗೂ ಮೊಟ್ಟೆ ಮಾನವನಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ ಎನ್ಮುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಇಲಾಖೆ ಹೇಳಿದೆಯಾದರೂ ಕೋಳಿ ಪೌಸ್ಟಿಕ ಆಹಾರವಲ್ಲ, ಕೋಳಿ ತಿಂದರೆ ಅದಾಗುತ್ತದೆ, ಇದಾಗುತ್ತದೆ ಎಂದು ಅಪಪ್ರಚಾರ ಮಾಡಿ ಕೋಳಿ ಉದ್ಯಮ ಹಲವಾರು ಬಾರಿ ನಷ್ಟಕ್ಕೀಡಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಸತ್ಯ ಎಲ್ಲಿ ಹೋದರೂ ಸತ್ಯನೇ. ಮಾನವನ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಬೇಕಾಗಿದ್ದು, ಕೋಳಿ ಆಹಾರವು ಸಾಕಷ್ಟು ಪ್ರೊಟೀನ್‌ನ್ನು ಒದಗಿಸುತ್ತದೆ. ಪೌಸ್ಟಿಕಾಂಶವಿದ್ದರೆ ಸ್ವಸ್ಥ ಸಮಾಜ, ಸದೃಢ ಸಮಾಜ ನಿರ್ಮಾಣವಾಗುವಲ್ಲಿ ಕೋಳಿ ಉದ್ಯಮವು ಬಹಳ ಸಹಕಾರಿಯಾಗಿದೆ. ಮಾತ್ರವಲ್ಲದೆ ಕೋಳಿ ಉದ್ಯಮವು ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ ಜೊತೆಗೆ ವಾರ್ಷಿಕ ವಹಿವಾಟು ಕೂಡ ಎಂದು ಹೇಳಿ ಶುಭ ಹಾರೈಸಿದರು.

ಕೆಯ್ಯೂರಿಗೆ ಮತ್ತೊಂದು ಗರಿ-ಎಸ್.ಬಿ ಜಯರಾಮ್ ರೈ:
ಪಲ್ಲತ್ತಡ್ಕ ಶ್ರೀ ಕ್ಷೇತ್ರ ಹೊಸಮ್ಮ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಎಸ್.ಬಿ ಜಯರಾಮ್ ರೈ ಬಳಜ್ಜರವರು ಮಾತನಾಡಿ, ಕೆಯ್ಯೂರಿನಲ್ಲಿ ಕೋಳಿ ಉದ್ಯಮವನ್ನು ಜಯಂತ್ ನಡುಬೈಲುರವರು ತೆರೆಯುವುದರ ಮೂಲಕ ಕೆಯ್ಯೂರಿನ ಪ್ರಗತಿಗೆ ಮತ್ತೊಂದು ಗರಿ ಪೋಣಿಸಿದಂತಾಗಿದೆ ಅಲ್ಲದೆ ಜಯಂತ್‌ರವರು ಕೆಯ್ಯೂರಿನ ಯುವತಿಯನ್ನು ಮದುವೆಯಾಗುವ ಮೂಲಕ ತನ್ನ ಪತ್ನಿಯ ಸಹಕಾರದೊಂದಿಗೆ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ ಕೂಡ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೆರೆಮರೆಯ ಕಾಯಿಯಂತೆ ಜಯಂತ್ ರವರು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜಯಂತ್‌ರವರ ಉದ್ಯಮವು ಮತ್ತಷ್ಟು ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹೇಳಿ ಶುಭಹಾರೈಸಿದರು.

ಫೀನಿಕ್ಸ್‌ನಂತೆ ಸೆಟೆದು ನಿಲ್ಲುವ ಧೈರ್ಯ ಜಯಂತ್‌ರಿಗಿದೆ-ಅಬ್ದುಲ್ ಖಾದರ್:
ಕೆಯ್ಯೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಖಾದರ್ ಮೇರ್ಲರವರು ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಕೇವಲ ೫೦೦ ಕೋಳಿಗಳ ಉದ್ಯಮವನ್ನು ಆರಂಭಿಸಿ ಪ್ರಸ್ತುತ ಲಕ್ಷಕ್ಕೂ ಮಿಕ್ಕಿ ಕೋಳಿ ಮರಿಗಳನ್ನು ಸಾಕಿ ವ್ಯವಹಾರ ಮಾಡುವ ಮೂಲಕ ಜಯಂತ್‌ರವರು ಗುರುತಿಸಿಕೊಂಡಿರುವುದು ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಜಯಂತ್‌ರವರು ಕೋಟಿ ನಷ್ಟವನ್ನು ಅನುಭವಿಸಿದ್ದರೂ, ಸಾಲವನ್ನು ಮೆಟ್ಟಿ ನಿಂತು ಫೀನಿಕ್ಸ್‌ನಂತೆ ಸೆಟೆದು ನಿಲ್ಲುವ ಧೈರ್ಯ ಅವರಿಗಿದೆ. ಬಡವರಿಗೆ ಕಡಿಮೆ ದರದಲ್ಲಿ ಕೋಳಿ ಸಿಗುವಂತೆ ಮಾಡುವುದು ಜಯಂತ್‌ರವರ ಗುರಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

`ಅಕ್ಷಯ’, ಜಯಂತ್‌ರವರ ಬದುಕಿಗೆ `ಅಕ್ಷಯ ಪಾತ್ರೆ’ಯಾಗಿದೆ-ಜಯಂತ್ ಕೆಂಗುಡೇಲು:
ಕೆಯ್ಯೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಜಯಂತ್ ಕೆಂಗುಡೇಲು ಮಾತನಾಡಿ, ತನ್ನ ಅಣ್ಣ ವಿಶ್ವನಾಥ್ ಕೆಂಗುಡೇಲುರವರ ಮಾಲಕತ್ವದ ವಿಶ್ವಚೇತನಾ ಕಟ್ಟಡಕ್ಕೆ ಜಯಂತ್‌ರವರ ಕೋಳಿ ಉದ್ಯಮವು ಕಾಲಿರಿಸಿದ ಮೇಲೆ ಈ ಕಟ್ಟಡಕ್ಕೆ ನವಚೇತನಾ ಬಂದಂತಾಗಿದೆ. ನಮ್ಮಂತ ಎಲ್ಲಾ ಯುವಜನತೆಯ ಬದುಕಿಗೆ ಜಯಂತ್‌ರವರು ಓರ್ವ ಪ್ರೇರಣಾ ಶಕ್ತಿಯಾಗಿದ್ದಾರೆ. ಜಯಂತಣ್ಣರವರ ಉದ್ಯಮದ ಹೆಸರೇ `ಅಕ್ಷಯ’ವಾಗಿದ್ದು, ಜಯಂತ್‌ರವರ ಬದುಕಿಗೆ ಅದೊಂದು `ಅಕ್ಷಯ ಪಾತ್ರೆ’ಯಾಗಿ ಪರಿಣಮಿಸಿದೆ ಎಂದರೆ ಸುಳ್ಳಲ್ಲ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಶ್ವಚೇತನಾ ಕಟ್ಟಡ ಮಾಲಕ ವಿಶ್ವನಾಥ ಪೂಜಾರಿ ಕೆಂಗುಡೇಲು ಉಪಸ್ಥಿತರಿದ್ದರು. ಅಕ್ಷಯ ಗ್ರೂಪ್‌ನ ಮಾಲಕ ಜಯಂತ್ ನಡುಬೈಲು ಸ್ವಾಗತಿಸಿ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಂತ್ ನಡುಬೈಲುರವರ ಪತ್ನಿ ಕಲಾವತಿ ಜಯಂತ್, ಪುತ್ರರಾದ ಅಕ್ಷಯ್ ಹಾಗೂ ಅಂಚಿತ್, ಭಾವ ನವೀನ್ ಕಲ್ಲಗುಡ್ಡೆ, ಸಿಬ್ಬಂದಿಗಳಾದ ಪದ್ಮನಾಭ, ಮನೋಜ್, ಹರೀಶ್‌ರವರು ಅತಿಥಿಗಳಿಗೆ ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಭಾರತ್ ಅಗ್ರೋ ಸರ್ವಿಸ್ ಲಿ.ನ ಜನರಲ್ ಮ್ಯಾನೇಜರ್ ದಯಾನಂದ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಮಾಜಿ ಅಧ್ಯಕ್ಷರಾದ ಜಯಂತ್ ಬಾಯಾರು, ಹೊನ್ನಪ್ಪ ಪೂಜಾರಿ ಕೈಂದಾಡಿ, ಚಂದ್ರಕಾಂತ ಶಾಂತಿವನ, ಪ್ರಮುಖರಾದ ಎ.ಕೆ ಜಯರಾಮ ರೈ, ಪ್ರವೀಣ್ ರೈ, ನಿತೀಶ್ ಕುಮಾರ್ ಶಾಂತಿವನ, ಗೌರೀಶ್ ನರಿಮೊಗರು, ರಾಜೀವ ಪೂಜಾರಿ ಪಲ್ಲತ್ತಡ್ಕ, ರವೀಂದ್ರ ಪೂಜಾರಿ ಸಂಪ್ಯ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಯಂತ್ ನಡುಬೈಲುರವರ ತಂದೆ ನಾರಾಯಣ ಸಾಲಿಯಾನ್, ಪತ್ನಿ ತಾಯಿ ಪ್ರೇಮಾ ಉಪಸ್ಥಿತರಿದ್ದರು.

ಅಲ್ಲಲ್ಲಿ ಶಾಖೆಗಳು..ಕಡಿಮೆ ದರದಲ್ಲಿ ಕೋಳಿ..
ಕೋಳಿ ಉದ್ಯಮವು ಕೃಷಿಯಾಧಾರಿತ ಉದ್ಯಮವಾಗಿ ಬೆಳೆದಿದೆ. ಕೃಷಿಯಾಧಾರಿತವಾಗಿ ಒಟ್ಟಿಗೆ ಹೋದಾಗ ಈ ಉದ್ಯಮದಲ್ಲಿ ಸಾಕಷ್ಡು ಏರಿಳಿತ ಖಂಡಿತಾ ಇದೆ. ಕೋಳಿ ಉದ್ಯಮದಲ್ಲಿ ಸಾಕಷ್ಟು ಬಾರಿ ಹೊಡೆತ ಬಿದ್ದು ನಷ್ಟವನ್ನು ಅನುಭವಿಸಿದ ಘಟನೆಗಳನ್ನು ಜನರು ಕಂಡಿದ್ದಾರೆ. ಉದ್ಯಮದ ಆರಂಭದ ಸಮಯದಲ್ಲಿ ಬ್ರಾಯ್ಲರಿಗೆ ಅಷ್ಟೊಂದು ಬೇಡಿಕೆ ಇರಲಿಲ್ಲ, ಆವಾಗ ನಾಟಿಕೋಳಿಗಳು ಮಾತ್ರ ಇದ್ದವು. ೫೦೦ ಕೋಳಿಗಳನ್ನು ಮಾರಾಟ ಮಾಡಲು ಮಂಗಳೂರಿಗೆ ಹೋಗಬೇಕಾದ ಕಷ್ಟದ ದಿನಗಳು ಅವು. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಕೋಳಿ ಫಾರ್ಮ್ ಮಾಡಲು ಇಂಟಿಗ್ರೇಶನ್, ಕಾಂಟ್ರ್ಯಾಕ್ಟ್ ನೆಲೆಯಲ್ಲಿ ಉದ್ದಿಮೆಯನ್ನು ಆರಂಭಿಸಿದ್ದು, ಕೋಳಿಗಳನ್ನು ಉತ್ಪಾದನೆ ಮಾಡಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಬ್ರಾಯ್ಲರ್, ಟೈಸನ್ ಹಾಗೂ ನಾಟಿಕೋಳಿಗಳನ್ನು ನೀಡಲು ಅಲ್ಲಲ್ಲಿ ಶಾಖೆಗಳನ್ನು ತೆರೆಯುತ್ತಿದ್ದೇನೆ. ಗ್ರಾಹಕರ ಪ್ರೋತ್ಸಾಹ ಹಾಗೂ ಆಶೀರ್ವಾದ ಸದಾ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ. – ಜಯಂತ್ ನಡುಬೈಲು, ಮಾಲಕರು, ಅಕ್ಷಯ ಗ್ರೂಪ್, ಪುತ್ತೂರು

ಶುಭಾರಂಭದ ಪ್ರಯುಕ್ತ ಕೋಳಿ ಖರೀದಿಯ ಮೇಲೆ ಒಂದು ಪ್ಯಾಕೇಟ್ ಕೋಳಿ ರೊಟ್ಟಿ ಉಚಿತ..
ರಖಂ/ರಿಟೈಲ್ ಶಾಖೆಗಳು..
ಅಕ್ಷಯ ಚಿಕನ್, ಸಂಪ್ಯ(ಬ್ರಾಯ್ಲರ್/ಟೈಸನ್/ನಾಟಿಕೋಳಿ)
ಅಕ್ಷಯ ಚಿಕನ್, ಏಳ್ಮುಡಿ(ಬ್ರಾಯ್ಲರ್/ಟೈಸನ್/ನಾಟಿಕೋಳಿ)
ಅಕ್ಷಯ ಚಿಕನ್, ಪುರುಷರಕಟ್ಟೆ(ಬ್ರಾಯ್ಲರ್/ಟೈಸನ್/ನಾಟಿಕೋಳಿ)
ಅಕ್ಷಯ ಕೋಲ್ಡ್ ಸ್ಟೋರೇಜ್, ದರ್ಬೆ(ಬ್ರಾಯ್ಲರ್/ಟೈಸನ್/ಹಂದಿ ಮಾಂಸ)
ಅಕ್ಷಯ ಕೋಲ್ಡ್ ಸ್ಟೋರೇಜ್, ಯೂನಿಯನ್ ಕ್ಲಬ್ ಬಿಲ್ಡಿಂಗ್, ಮಾರ್ಕೆಟ್, ಪುತ್ತೂರು(ಹಂದಿ ಮಾಂಸ)

ಸಹ ಸಂಸ್ಥೆಗಳು..
ಬ್ರಾಯ್ಲರ್ ಫಾರ್ಮ್ಸ್
ರಿಟೈಲ್ ಮಾರಾಟ ಶಾಖೆಗಳು
ಇಂಟಿಗ್ರೇಶನ್
ಕೋಳಿ ಮರಿ ಮತ್ತು ಫೀಡ್ಸ್‌ಗಳ ಮಾರಾಟ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.