HomePage_Banner
HomePage_Banner
HomePage_Banner

ದಲಿತ್ ಸೇವಾ ಸಮಿತಿ ಕುಂಬ್ರ ವಲಯದ ಸಭೆ

Puttur_Advt_NewsUnder_1
Puttur_Advt_NewsUnder_1
  • ಅನ್ಯಾಯ, ದೌರ್ಜನ್ಯಗಳ ವಿರುದ್ಧ ನಾವು ಧ್ವನಿ ಎತ್ತಬೇಕು-ಸೇಸಪ್ಪ ಬೆದ್ರಕಾಡು

ಪುತ್ತೂರು: ದಲಿತ್ ಸೇವಾ ಸಮಿತಿ ಕುಂಬ್ರ ವಲಯ ಶಾಖೆಯ ಸಭೆ ಅ.೨೬ರಂದು ಕುಂಬ್ರ ಶಾಲಾ ಸಭಾಂಗಣದಲ್ಲಿ ನಡೆಯಿತು. ದಲಿತ್ ಸೇವಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡುರವರು ದೀಪ ಬೆಳಗಿಸುವುದರೊಂದಿಗೆ ಸಭೆ ಉದ್ಘಾಟಿಸಿದರು.

ಕುಂಬ್ರ ವಲಯದ ಗೌರವಾಧ್ಯಕ್ಷ ಚಂದ್ರ ಇದ್ಪಾಡಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಜಿಲ್ಲಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿ ದಲಿತ ಸಮುದಾಯ ಒಗ್ಗಟ್ಟಾಗಬೇಕು, ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು, ಬಡವರ, ನಿರ್ಗತಿಕರ ಪರವಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು. ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ವಿರುದ್ಧ ನಾವು ಧ್ವನಿ ಎತ್ತಬೇಕು, ದಲಿತ ಸಮುದಾಯ ಎಲ್ಲ ರಂಗಳಲ್ಲೂ ಅಭಿವೃದ್ಧಿ ಹೊಂದಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು.

ವಲಯ ಗೌರವಾಧ್ಯಕ್ಷ ಚಂದ್ರ ಇದ್ಪಾಡಿ ಮಾತನಾಡಿ ದಲಿತ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಳ್ಳಬೇಕು, ಯಾವುದೇ ಸಮಸ್ಯೆ ಬಂದರೂ ನಾವದನ್ನು ಒಗ್ಗಟ್ಟಾಗಿ ಎದುರಿಸಬೇಕು, ಕುಂಬ್ರ ವಲಯ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಬೇಕು ಎಂದು ಹೇಳಿದರು.

ತಾಲೂಕು ಅಧ್ಯಕ್ಷ ಬಿ. ಕೆ.ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವೇ ನಮಗೆ ಪರಮಶ್ರೇಷ್ಠ, ನಮ್ಮ ಹಕ್ಕುಗಳು ನಮಗೆ ಸಿಗಬೇಕು, ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಭೂಮಿ ಇದ್ದವರು ಅದರಲ್ಲಿ ಕೃಷಿ ಮಾಡಬೇಕು, ಹೀಗೆ ಅಭಿವೃದ್ಧಿ ವಿಚಾರಗಳ ಬಗ್ಗೆ ನಾವು ಚಿಂತನೆ ನಡೆಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ, ಸುದ್ದಿ ಬಿಡುಗಡೆ ವರದಿಗಾರ ಯೂಸುಫ್ ರೆಂಜಲಾಡಿ ಮಾತನಾಡಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಂವಿಧಾನ ನಮಗೆ ದಾರಿದೀಪ, ದಲಿತ ಸಮುದಾಯ ತಮಗೆ ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು, ತಾಲೂಕಿನಲ್ಲಿ ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಅದೆಷ್ಟೋ ಬಡ ದಲಿತ ಸಮುದಾಯದ ಕುಟುಂಬಗಳಿಗರ ರಸ್ತೆ, ನೀರಿನ ವ್ಯವಸ್ಥೆಯಾಗಿದೆ, ತಮ್ಮ ಹಕ್ಕುಗಳಿಗಾಗಿ ಸಂವಿಧಾನಾತ್ಮಕವಾಗಿರುವ ನಿಮ್ಮ ಹೋರಾಟ ಮುಂದುವರಿಯಲಿ ಎಂದು ಹೇಳಿದರು.ದ.ಸೇ.ಸ. ಜಿಲ್ಲಾ ಪ್ರ.ಕಾರ್ಯದರ್ಶಿ ಚಂದ್ರಶೇಖರ ವಿಟ್ಲ ಮಾತನಾಡಿ ನಮ್ಮ ಸಮಿತಿಯು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಕ್ರಿಯವಾಗಿದೆ ಎಂದರು.

ಪುತ್ತೂರು ತಾಲೂಕು ಮಹಿಳಾ ಅಧ್ಯಕ್ಷೆ ಸುನಂದಾ ತೆಂಕಿಲ ಮಾತನಾಡಿ ಶುಭ ಹಾರೈಸಿದರು. ತಾಲೂಕು ಕಾರ್ಯದರ್ಶಿ ಸುಂದರ್ ನರಿಮೊಗರು, ಪ್ರಸಾದ್ ಅನಂತಾಡಿ, ಧನಂಜಯ ಬಲ್ನಾಡು, ಉಪಾಧ್ಯಕ್ಷ ಸುಂದರ ಕೆ, ಮೊಗೇರ ಸೇವಾ ಸಮಿತಿ ಕುಂಬ್ರ ಇದರ ಗೌರವಾಧ್ಯಕ್ಷ ಚೆನ್ನಪ್ಪ ಕೆ, ದಲಿತ್ ಸೇವಾ ಸಮಿತಿ ಕುಂಬ್ರ ವಲಯದ ಅಧ್ಯಕ್ಷ ಜಯಂತ್ ಕುಂಬ್ರ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಿನಯ್ ಕೆ ಪ್ರಾರ್ಥಿಸಿದರು. ಚರಿತಾ ಕೆ ಸ್ವಾಗತಿಸಿದರು. ಅಶ್ವಿತಾ ಕಾರ್ಯ ನಿರೂಪಿಸಿ ವಂದಿಸಿದರು.

ಧನ ಸಹಾಯ:
ಕುಂಬ್ರದ ಬಡ ಕುಟುಂಬದ ಶರಣ್ ಎಂಬವರಿಗೆ ದಲಿತ್ ಸೇವಾ ಸಮಿತಿಯಿಂದ ಧನ ಸಹಾಯ ವಿತರಿಸಲಾಯಿತು.

ಕ್ಯಾಂಡಲ್ ಹೊತ್ತಿಸಿ ಮೌನ ಪ್ರಾರ್ಥನೆ:
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ದಲಿತ ಸಮುದಾಯದ ಮನೀಷಾರವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷಗಳ ಕಾಲ ಸಭೆಯಲ್ಲಿದ್ದ ಎಲ್ಲರೂ ಕ್ಯಾಂಡಲ್ ಹೊತ್ತಿಸಿ ಹಿಡಿದು ಮೌನ ಪ್ರಾರ್ಥನೆ ನಡೆಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.