HomePage_Banner
HomePage_Banner
HomePage_Banner

ನ.26: ಅಖಿಲ ಭಾರತ ಕಾರ್ಮಿಕರ ಮುಷ್ಕರವನ್ನು ಯಶಸ್ವಿಗೊಳಿಸುವಂತೆ -ಬಿ.ಎಂ.ಭಟ್‌ಕರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾನೂನುಗಳ ತಿದ್ದುಪಡಿ ಮೂಲಕ ಕಾರ್ಮಿಕರ ವರ್ಗದ ಹಕ್ಕು ಸವಲತ್ತುಗಳನ್ನು ಕಡಿತ ಮಾಡುವ ವಿರೋಧ ನೀತಿಯನ್ನು ಜಾರಿಗೊಳಿಸುವುದು ಕಾರ್ಮಿಕರ ಭದ್ರತೆಯನ್ನು ಕಡೆಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ವಿರೋಧ ನೀತಿ ಮತ್ತು ಇತರ ಬೇಡಿಕೆಗಳಿಗೆ ಆಗ್ರಹಿಸಿ ನ.26ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನ್ಯಾಯವಾದಿ ಬಿ.ಎಮ್.ಭಟ್ ಕರೆ ನೀಡಿದ್ದಾರೆ.

ಕಾರ್ಮಿಕರ ಕೆಲಸದ ಭದ್ರತೆ ಹಾಗೂ ಸವಲತ್ತುಗಳಿಗಾಗಿ, ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿಗೊಳಿಸಿದ ಕನಿಷ್ಟ ವೇತನ ನೀಡದೆ ವಂಚಿಸುತ್ತಿರುವುದರ ವಿರುದ್ದ, ಬೀಡಿ ಕಾರ್ಮಿಕರಿಗೆ ಗ್ರಾಚ್ಯುವಿಟಿ ನೀಡದೆ ಶೋಷಿಸುತ್ತಿರುವ ಮಾಲಕರ ವಿರುದ್ದ, ಬೀಡಿ ಉದ್ಯಮದ ರಕ್ಷಣೆಗಾಗಿ ಮತ್ತು ರೈತ ವಿರೋಧಿಯಾದ ಭೂಸುಧಾರಣಾಕಾಯ್ದೆತಿದ್ದುಪಡಿ, ಎಪಿಎಂಸಿ ಕಾಯ್ದೆತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆತಿದ್ದುಪಡಿ, ವಿದ್ಯುತ್ ಖಾಸಗೀರಣಗಳ ವಿರೋದಿಸಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳ ರಕ್ಷಣೆ ಮೊದಲಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತಕಾರ್ಮಿಕರ ಮುಷ್ಕರ ನಡೆಯಲಿದೆ. ಇಂದು ಕೊರೋನಾ ಲಾಕ್‌ಡೌನ್ ಸಮಯ ಸಂಕಷ್ಟವನ್ನು ಎದುರಿಸುತ್ತಿರುವ ಸಮಯ ಈ ಕಾರ್ಮಿಕರ ಹಕ್ಕು ಸವಲತ್ತುಗಳನ್ನು ಕಿತ್ತುಕೊಳ್ಳಲು ಅನೂಕೂಲವಾಗುವಂತಹ ತಿದ್ದುಪಡಿಗಳನ್ನ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವುದು ಮಹಾ ದ್ರೋಹವಾಗಿದೆ. ಕಾರ್ಮಿಕರ ಕೆಲಸದ ಭದ್ರತೆಯನ್ನು ಕಡೆಗಣಿಸಲಾಗಿದೆ. ಮಾಲಕರು ತಮಗೆ ಇಷ್ಟ ಬಂದಂತೆ ಕಂಪೆನಿಯನ್ನು ಮುಚ್ಚಲು, ಕಾರ್ಮಿಕರನ್ನು ಕೆಲಸದಿಂದ ಕೈಬಿಡಲು ಅವಕಾಶ ನೀಡಲಾಗಿದೆ. ಗುತ್ತಿಗೆ ಕಾರ್ಮಿಕರನ್ನು ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ದುಡಿಸಲಾಗುತ್ತಿದೆ.

ಖಾಯಂ ಕೆಲಸಕ್ಕೂ ಗುತ್ತಿಗೆ ಕಾರ್ಮಿಕ ಪದ್ದತಿಯನ್ನೇ ಊರ್ಜಿಗೊಳಿಸಲಾಗುತ್ತಿದೆ. ಹಿಂದು ಧರ್ಮದರಕ್ಷಣೆ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರಕ್ಕೆ ಮಾಲಕ ವರ್ಗದ ಹಿತ ಮಾತ್ರಾ ಬೇಕಾದ್ದಾಗಿದೆ. ಬಡಕಾರ್ಮಿಕ ವರ್ಗ, ರೈತ ವರ್ಗ ಅವರಿಗೆ ಹಿಂದುಗಳಾಗಿ ಕಾಣುತ್ತಿಲ್ಲ ಎಂದು ನ್ಯಾಯವಾಗಿ ಬಿ.ಎಮ್ ಭಟ್ ತಿಳಿಸಿದ್ದಾರೆ. ಅದಿಕಾರಕ್ಕೆ ಏರಲು ಧರ್ಮವನ್ನೇ ಮೆಟ್ಟಿಲನ್ನಾಗಿಸಿದವರಿಂದ ಧರ್ಮವೂ ನಾಶ, ಕಾರ್ಮಿಕರ, ರೈತರ ಬದುಕೂ ನಾಶ. ಆದ್ದರಿಂದ ಸರಕಾರದ ಈ ತಪ್ಪು ನಡೆಯ ವಿರುದ್ದ ಕಾರ್ಮಿಕರ ಮುಷ್ಕರ ನಡೆಯಲಿದ್ದು ಅದನ್ನು ಯಶಸ್ವಿಗೊಳಿಸೋಣ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.