HomePage_Banner
HomePage_Banner
HomePage_Banner

ಸಾಮೆತ್ತಡ್ಕ ಶಾಲೆ ಅಮೂಲಾಗ್ರ ಬದಲಾವಣೆಯಾಗಲಿದೆ: ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
  • ಶಿಶು ವಿಹಾರ ಕಟ್ಟಡದಕ್ಕೆ ಶಾಸಕರಿಂದ ಶಿಲಾನ್ಯಾಸ

ಪುತ್ತೂರು: ಮಾತೃ ಭಾಷೆಗೆ ಪ್ರಾದಾನ್ಯತೆ ಕೊಟ್ಟು ನಮ್ಮ ಶಿಕ್ಷಣ ಪದ್ಧತಿ ಮುಂದುವರಿಯಬೇಕು. ಆಧುನಿಕತೆಯನ್ನು ಮೈಗೂಡಿಸಿ ಮಾತೃ ಭಾಷೆಯಿಂದ ದೂರ ಹೋಗದೆ ಸಾಮೆತ್ತಡ್ಕ ಶಾಲೆ ಅಮೂಲಾಗ್ರ ಬದಲಾವಣೆಗೆ ಸಹಕಾರ ನೀಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅವರು ಭರವಸೆ ವ್ಯಕ್ತಪಡಿಸಿದರು.

ನಮ್ಮ ಶಾಲೆ ಸಾಮೆತ್ತಡ್ಕ ಎಂಬ ಹೆಸರಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಅ.30ರಂದು ಅವರು ರೂ. 2.50 ಲಕ್ಷದ ನೂತನ ಶಿಶು ವಿಹಾರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಕೊಡುವ ಉದ್ದೇಶದಿಂದ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕೆಂದು ಹಿಂದೆ ಸರಕಾರಿ ಶಾಲೆಗಳು ಆರಂಭಗೊಂಡಿತ್ತು. ಆದರೆ ವಿದ್ಯೆ ಪಡೆದ ನಾಗರಿಕರು ಶಾಲೆಯನ್ನು ಉಳಿಸುವಲ್ಲಿ ದೂರ ಹೋದ ಪರಿಣಾಮ ನಮ್ಮಲ್ಲಿ ಶಾಲೆಗಳ ಬಾಗಿಲು ಮುಚ್ಚಿ ಸರಕಾರದ ಯೋಜನೆಗೆ ತೊಂದರೆ ಆಗಿತ್ತು. ಆಧುನಿಕತೆಯನ್ನು ಮೈಗೂಡಿಸಿ ಮಾತ್ರ ಭಾಷೆಯಿಂದ ದೂರ ಹೋಗಿ ಪಾಶ್ಚತ್ಯಾ ಒಳವು ಹೆಚ್ಚಾಯಿತು.

ಮಾನಸಿಕತೆ ಬದಲಾದ ಹಾಗೆ ನಮ್ಮ ಸಂಸ್ಕೃತಿ ಕಳೆಗುಂದಿತ್ತು. ಈ ನಿಟ್ಟಿನಲ್ಲಿ ಹೊಸದಾಗಿ ಎನ್.ಇಪಿ ಎಜ್ಯುಕೇಶನ್ ಪಾಲಿಸಿ ಬಂದ ಬಳಿಕ ಎಲ್ಲವೂ ಸರಿಯಾಗಲಿದೆ. ಇಂತಹ ಸಂದರ್ಭದಲ್ಲಿ ಮಾತೃ ಭಾಷೆಗೆ ಆದ್ಯತೆ ಕೊಟ್ಟು ಆಂಗ್ಲಮಾಧ್ಯಮ ಆರಂಭಿಸುವ ಮೂಲಕ ಸಾಮೆತ್ತಡ್ಕ ಶಾಲೆ ಅಮೂಲಾಗ್ರ ಬದಲಾವಣೆಯಾಗಲಿದೆ. ಕೋವಿಡ್ ಸಂದರ್ಭದಲ್ಲಿ ಸರಕಾರದಲ್ಲಿ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ನೋಡಿಕೊಂಡು ಶಾಲೆಗೆ ಅಗತ್ಯದ ವಿಚಾರಗಳನ್ನು ಪೂರೈಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕರಲ್ಲಿ ಬೇಡಿಕೆ :
ಸ್ಥಾಪಕ ಅಧ್ಯಕ್ಷರಾಗಿರುವ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ 73ನೇ ಇಸವಿಯಲ್ಲಿ ಸಾಮೆತ್ತಡ್ಕ ಶಾಲಾ ಪ್ರಾರಂಭ ಆಗಿತ್ತು. 250 ಮಕ್ಕಳ ಸಂಖ್ಯೆ ಬೆಳವಣಿಗೆಯಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಮಕ್ಕಳ ಸಂಖ್ಯೆ ಕಡಿಮೆ ಆಗಿ 28 ಸಂಖ್ಯೆಗೆ ಇಳಿದಿತ್ತು. ಹಾಗಾಗಿ ಶಾಲೆಯಲ್ಲಿ ಪ್ರಸ್ತುತ ವರ್ಷ ಎಲ್.ಕೆ ಜಿ ಮತ್ತು ಯು ಕೆ ಜಿ ಪ್ರಾರಂಭಿಸಿದ್ದೇವೆ. ಮುಂದೆ ಹೈಸ್ಕೂಲ್ ಮಾಡುವ ಚಿಂತನೆ ಇದೆ. ಈಗಾಗಲೇ 2 ಮಂದಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಇದೀಗ 65 ಮಕ್ಕಳ ನೊಂದಾವಣೆ ಆಗಿದ್ದು, ಮುಂದೆ ಶಾಲೆಯ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿ ಶೌಚಾಲಯ, ರಂಗ ಮಂಟಪ ಮತ್ತು ಶಾಲೆಗೆ ಬರುವ ರಸ್ತೆ ಪುನರ್‌ನಿರ್ಮಾಣ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕಾಮತ್, ನಗರಸಭಾ ಸದಸ್ಯರಾದ ಮನೋಹರ್, ಬಾಲಚಂದ್ರ, ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು. ಇಂಜಿನಿಯರ್ ವೆಂಕಟ್ ರಾಜ್, ಮಾಜಿ ಪುರಸಭೆ ಸದಸ್ಯ ಉದಯ ಕುಮಾರ್ ಹೆಚ್, ಸುರೇಶ್ ಗೌಡ ಕಲ್ಲಾರೆ, ಯುವಕ ಮಂಡಲದ ಅಧ್ಯಕ್ಷ ಇಂದಿವರ್, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಪಂಚಾಕ್ಷರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶಿಕ್ಷಕಿ ಮರಿಯಾ ಆಶ್ರಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.