HomePage_Banner
HomePage_Banner
HomePage_Banner

ಕೊಣಾಜೆ ಗ್ರಾ.ಪಂ. ಚುನಾವಣಾ ಮೀಸಲಾತಿ | ಪುತ್ತಿಗೆ ವಾರ್ಡ್ ನಲ್ಲಿ “ಎಸ್.ಟಿ.” ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ!

Puttur_Advt_NewsUnder_1
Puttur_Advt_NewsUnder_1
  • ಪುತ್ತಿಗೆ ವಾರ್ಡ್ ಗೆ “ಸಾಮಾನ್ಯ ಸ್ಥಾನ” ಮೀಸಲಾತಿ ನೀಡುವಂತೆ ಡಿ.ಸಿ.ಯವರಿಗೆ ಮನವಿ

ಕಡಬ: ಈಗಾಗಲೇ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿ ಪಂಚಾಯತ್ನ ಎಲ್ಲ ವಾರ್ಡ್ ಗಳಿಗೆ ಮೀಸಲಾತಿ ಸ್ಥಾನಗಳನ್ನು ಪ್ರಕಟಿಸಲಾಗಿದ್ದು ಇದರಲ್ಲಿ ಕೊಣಾಜೆ ಗ್ರಾಮದ ಪುತ್ತಿಗೆ ವಾರ್ಡ್ ಗೆ ಎಸ್,ಟಿ, ಮಹಿಳೆ-1 ಸ್ಥಾನ ಹಾಗೂ ಸಾಮಾನ್ಯ ಮಹಿಳೆ-1 ಸ್ಥಾನ ನೀಡಲಾಗಿದ್ದು, ಈ ವಾರ್ಡ್ ನಲ್ಲಿ ಎಸ್.ಟಿ.ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ, ಆದುದರಿಂದ ಪುತ್ತಿಗೆ ವಾರ್ಡ್ ಗೆ ಸಾಮಾನ್ಯ ಸ್ಥಾನ ನೀಡುವಂತೆ ಗ್ರಾ.ಪಂ.ಮಾಜಿ ಸದಸ್ಯ ಲೋಕಯ್ಯ ಗೌಡ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿ ಮನವಿ ಮಾಡಿದ್ದಾರೆ.

ಪುತ್ತಿಗೆ ವಾರ್ಡ್ ಗೆ ಎಸ್.ಟಿ. ಮಹಿಳೆ-1 ಸ್ಥಾನ, ಹಾಗೂ ಸಾಮಾನ್ಯ ಮಹಿಳೆ-1 ಸ್ಥಾನ, ಕೊಣಾಜೆ ವಾರ್ಡ್ ಗೆ ಸಾಮಾನ್ಯ ಸ್ಥಾನ-2 ಸ್ಥಾನ, ಹಾಗೂ ಎಸ್.ಸಿ. ಮಹಿಳೆ-1 ಸ್ಥಾನ ಒಟ್ಟು ಪಂಚಾಯತ್ ನಲ್ಲಿ 5 ಸ್ಥಾನಗಳಿವೆ. ಈ ಬಗ್ಗೆ ಗ್ರಾ.ಪಂ. ಮಾಜಿ ಸದಸ್ಯ ಲೋಕಯ್ಯ ಗೌಡ ಕೊಣಾಜೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಪುತ್ತಿಗೆ ವಾರ್ಡ್ ನಲ್ಲಿ ಎಸ್.ಟಿ. ವರ್ಗಕ್ಕೆ ಸೇರಿದ ಒಂದು ಮನೆಗಳು ಕೂಡ ಇಲ್ಲ, ಕೊಣಾಜೆ ವಾರ್ಡ್ ನಲ್ಲಿ ಆ ವರ್ಗಕ್ಕೆ ಸೇರಿದವರು ಇದ್ದಾರೆ ಆದುದರಿಂದ ಕೊಣಾಜೆ ವಾರ್ಡ್ ಗೆ ನೀಡಲಾದ 2 ಸಾಮಾನ್ಯ ಸ್ಥಾನಗಳಲ್ಲಿ ಒಂದನ್ನು ಪುತ್ತಿಗೆ ವಾರ್ಡ್ ಗೆ ಕಲ್ಪಿಸಿದರೆ ಅನುಕೂಲವಾಗುತ್ತದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಲೋಕಯ್ಯ ಅವರು ಡಿಸಿಯವರಲ್ಲಿ ಮನವಿ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.