HomePage_Banner
HomePage_Banner
HomePage_Banner

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಆಯೋಜಿಸಿದ ಕವನ ರಚನೆ ಮತ್ತು ಕವನ ವಾಚನ ಸ್ಪರ್ಧೆ ಫಲಿತಾಂಶ | 120ಕ್ಕೂ ಮಿಕ್ಕಿ ಕವಿಗಳು ಭಾಗಿ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನ ಅಬ್ದುಲ್ ಸಮದ್ ಬಾವಾ  ದ್ವಿತೀಯ
  • ಕೇ.ಕ.ಸಾ.ವೇ ಕೇಂದ್ರ ಸಮಿತಿ ಬೆಂಗಳೂರು, ಜಿಲ್ಲಾ ಘಟಕ ದ.ಕ. ವತಿಯಿಂದ ಸ್ಪರ್ಧೆ ಆಯೋಜನೆ
  • ಪುತ್ತೂರು ತಾಲೂಕು ಘಟಕ ಪ್ರಾಯೋಜಕತ್ವ

ಪುತ್ತೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಮತ್ತು ಜಿಲ್ಲಾ ಘಟಕ ದಕ್ಷಿಣ ಕನ್ನಡ ವತಿಯಿಂದ ಪುತ್ತೂರು ತಾಲೂಕು ಘಟಕ ಪ್ರಾಯೋಜಕತ್ವದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತಂತೆ ಅಂತಾರ್ರಾಜ್ಯಮಟ್ಟದ ಅಂತರ್ಜಾಲ ಆಧಾರಿತ ಕವನ ರಚನೆ ಮತ್ತು ಕವನ ವಾಚನ ಸ್ಪರ್ಧೆ 33ನೇ ಸಾಪ್ತಾಹಿಕ ಸಾಹಿತ್ಯ ಸ್ಪರ್ಧೆ ಅ.24,25,26ರಂದು ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಾ.ಸೌಮ್ಯ ಕೆ.ವಿ.ಯಲ್ಲಾಪುರ, ದ್ವಿತೀಯ ಸ್ಥಾನವನ್ನು ಅಬ್ದುಲ್ ಸಮದ್ ಬಾವಾ ಪುತ್ತೂರು, ತೃತೀಯ ಸ್ಥಾನವನ್ನು ಕಮಲಾಕ್ಷಿ ಕೌಜಲಗಿ ಬೆಳಗಾವಿ ಪಡೆದುಕೊಂಡರು.
ಟಾಪ್ 10ರ ಸ್ಪರ್ಧಾರ್ಥಿಗಳಾಗಿ ಸಮ್ಯಕ್ತ್.ಎಚ್ .ಜೈನ್ ಕಡಬ, ಎಸ್.ಎಲ್.ವರಲಕ್ಷ್ಮಿ ಮಂಜುನಾಥ್ ಮೈಸೂರು, ಪಂಕಜಾ.ಕೆ.ಮುಡಿಪು, ಆರ್.ಫಣಿಶ್ರೀ ಮೇರಿಲ್ಯಾಂಡ್, ಕೊಂಡಮ್ಮ ಪ್ರಭಾಕರ್ ಬೆಂಗಳೂರು, ಲತೀಶ್ ಎಂ.ಸಂಕೋಳಿಗೆ ಮಂಗಳೂರು, ಹೇಮಚಂದ್ರ ದಾಳಗೌಡನಹಳ್ಳಿ, ಹೆಚ್.ಜಿ.ಸಂಗೀತ ಮಠಪತಿ, ಹೆಚ್.ಆರ್.ಶ್ರೀಧರೇಶ್ ಭಾರದ್ವಾಜ್ ಭದ್ರಾವತಿ, ದೀಪಾಲಿ ಸಾಮಂತ ದಾಂಡೇಲಿ ಆಯ್ಕೆಯಾಗಿದ್ದಾರೆ.

ಕೆ.ಆರ್ ಗಿರೀಶ್ ಕೊಣನೂರು, ಚರಣ್ ರಾಜ್ ಯಡಾಡಿ, ಸುಶೀಲಾ ಕೆ.ಪದ್ಯಾಣ, ಪಿ.ಕಾತ್ಯಾಯಿನಿ ಕೊಳ್ಳೇಗಾಲ, ಭವಾನಿಗೌಡ ವಿಜಯಪುರ, ಉಷಾ ದಿನೇಶ್ ಶಿವಮೊಗ್ಗ, ಲೀಲಾಕುಮಾರಿ ತೊಡಿಕ್ಯಾನ, ಮಹಾದೇವನಾಯಕ್ ಮೈಸೂರು, ಯು.ಸಿರಾಜ್ ಅಹಮದ್ ಸೊರಬ, ವಿದ್ಯಾಶ್ರೀ ಅಡೂರು ಉಜಿರೆ ರವರು ತೀರ್ಪುಗಾರರ ಮೆಚ್ಚುಗೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಪ್ರಶಂಸಾ ಪತ್ರ ನೀಡಲಾಗುತ್ತದೆ. ಮುಖ್ಯ ತೀರ್ಪುಗಾರರಾಗಿ ಮಧುರಕಾನನ ಗಣಪತಿ ಭಟ್ಟ ರವರು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನದ ಪ್ರಾಯೋಜಕತ್ವವನ್ನು ಮಾಣಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ. ಬಾಲಕೃಷ್ಣ ಶೆಟ್ಟಿ ವಹಿಸಿಕೊಂಡಿದ್ದಾರೆ ಎಂದು ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಶಾಂತಾ ಪುತ್ತೂರು, ಗೌರವ ಸಲಹೆಗಾರರಾದ ಜಯಾನಂದ ಪೆರಾಜೆ  ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.