HomePage_Banner
HomePage_Banner
HomePage_Banner
Breaking News

ಲೇಖಕ ನಾರಾಯಣ ಭಟ್ ಟಿ.,ಇವರಿಂದ ‘ಮೋದಿಗೆ ಮೋದಿಜಿಯೇ ಸಾಟಿ’ ಕೃತಿ ರಚನೆ

Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ‘ಮೋದಿಗೆ ಮೋದಿಯೇ ಸಾಟಿ’ ಕೃತಿ ರಚನೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಪ್ರಕಟಗೊಳ್ಳಲಿದೆ. ಕರಾವಳಿ ಕರ್ನಾಟಕದಿಂದ ದೇಶದ ಪ್ರಧಾನಿಯವರ ಬಗ್ಗೆ ಪ್ರಕಟಗೊಳ್ಳುತ್ತಿರುವ ಮೊತ್ತ ಮೊದಲ ಕೃತಿ ಇದಾಗಿದೆ ಎಂದು ಕೃತಿ ಲೇಖಕ, ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ.,ರಾಮಕುಂಜ ಇವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಭಾರತ ಕಂಡ ಒಬ್ಬ ಧೀಮಂತ ನಾಯಕ. ಅವರು ದೇಶಕ್ಕಾಗಿ ಹಲವು ದೃಢ ನಿಲುವುಗಳನ್ನು ತೆಗೆದುಕೊಂಡು ಇತಿಹಾಸ ಸೃಷ್ಟಿಸಿದ್ದಾರೆ. ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಅಗ್ರಗಣ್ಯ ನಾಯಕನೆಂಬ ಖ್ಯಾತಿ ಪಡೆದಿರುತ್ತಾರೆ. ತನ್ನ ಕೆಚ್ಚೆದೆಯ ನಿಲುವುಗಳಿಂದ ವಿಶ್ವ ನಾಯಕನೆಂಬ ಹೆಸರು ಪಡೆದಿದ್ದಾರೆ. ವಿರೋಧ ಪಕ್ಷಗಳಿಂದ ಸಾವಿನ ವ್ಯಾಪಾರಿ ಎಂದು ಟೀಕಿಸಲ್ಪಟ್ಟರು. ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿ ಪಡೆದ ಅಮೇರಿಕಾ ಮೋದಿಯವರಿಗೆ ವೀಸಾ ನಿರಾಕರಿಸಿದ್ದು ಹಳೆಯ ಸಂಗತಿ. ಮತ್ತದೇ ದೇಶ ಕೆಂಪು ಹಾಸಿನ ಗೌರವದಿಂದ ಸ್ವಾಗತಿಸಿದ ಪರಿ ಮೋದಿಯವರ ಸಾಧನೆಗೆ, ಕರ್ತೃತ್ವ ಶಕ್ತಿಗೆ ಸಿಕ್ಕ ಗೌರವ. ಭಾರತದಲ್ಲಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದ ವಿರೋಧ ಪಕ್ಷಗಳು ಮನಸೋ ಇಚ್ಛೆ ಟೀಕಿಸಿದವು. ಹಾಗೆಂತ ವಿಶ್ವದ ಅಗ್ರ ಮುಸ್ಲಿಂ ರಾಷ್ಟ್ರಗಳು ಸಾಲು-ಸಾಲಾಗಿ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ್ದು ಈಗ ಇತಿಹಾಸ.

ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತು ನಮ್ಮ ದೇಶದಲ್ಲಿ ಸುಮಾರು ೨೦ ಭಾಷೆಗಳಲ್ಲಿ ಕೃತಿ ಬಿಡುಗಡೆಗೊಂಡಿದೆ. ಇದು ಮೋದಿಯವರ ಸಾಧನೆಗೆ ಸಿಕ್ಕ ಗೌರವ. ಕನ್ನಡ ಭಾಷೆಯಲ್ಲೂ ಈಗಾಗಲೇ ಸುಮಾರು ಮೂರು ಕೃತಿಗಳು ಮೋದಿಯವರ ಸಾಧನೆಗಳನ್ನು ಚಿತ್ರಿಸಿವೆ. ಅವುಗಳೆಲ್ಲವೂ ಕೆಲವು ವರ್ಷಗಳ ಹಿಂದಿನವರೆಗಿನ ಸಾಧನೆಗಳಿಗೆ ಕೈಗನ್ನಡಿಯಾಗಿದೆ. ನರೇಂದ್ರ ಮೋದಿಯವರ ಹಲವಾರು ಅಭಿಮಾನಿಗಳ ಕೋರಿಕೆಯಂತೆ ಈ ಕೃತಿ ಸಿದ್ಧಗೊಳ್ಳುತ್ತಿದೆ. ಇದರ ಪ್ರಾಯೋಜಕತ್ವವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೀಡಲು ಮುಂದೆ ಬಂದಿದ್ದಾರೆ. ಇದು ಕರಾವಳಿ ಕರ್ನಾಟಕದ ಮೋದಿ ಅಭಿಮಾನಿಗಳಿಗೆ ಸ್ಪೂರ್ತಿಯ ಸೆಲೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಿವೃತ್ತ ಮುಖ್ಯಶಿಕ್ಷಕರೂ, ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಆಗಿರುವ ನಾರಾಯಣ ಭಟ್ ಟಿ.,ರಾಮಕುಂಜ ಇವರ ಸುಮಾರು ೪೦ ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟಗೊಳ್ಳುತ್ತಿವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.