HomePage_Banner
HomePage_Banner
HomePage_Banner

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1
  • ಚಿನ್ನ ಆಭರಣ, ವಾಹನ ಸಾಲಗಳಿಗೆ ಶೇ. 1ರಷ್ಟು ಬಡ್ಡಿದರ ಕಡಿತಕ್ಕೆ ನಿರ್ಧಾರ

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆಯು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದಲ್ಲಿ ಠೇವಣಿದಾರರಿಗೆ ಆಕರ್ಷಕ ಬಡ್ಡಿನೀಡಲು ನಿರ್ಧರಿಸಲಾಯಿತು.

ಸದಸ್ಯರ ಅನುಕೂಲತೆಗಾಗಿ ಚಿನ್ನ ಆಭರಣ ಹಾಗೂ ವಾಹನ ಸಾಲಗಳಿಗೆ ಈಗ ಇರುವ ಬಡ್ಡಿ ದರಕ್ಕಿಂತ ಶೇ. ೧ರಷ್ಟು ಬಡ್ಡಿದರವನ್ನು ಕಡಿತ ಮಾಡಲಾಗುದೆಂದು ತೀರ್ಮಾನಿಸಲಾಯಿತು. ಸಂಘದ ಅಭಿವೃದ್ಧಿಯ ಬಗ್ಗೆ ಸದಸ್ಯರುಗಳು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಸಂಘಕ್ಕೆ ವಿವಿಧ ಇಲಾಖೆಯಿಂದ ಬಂದ ಸುತ್ತೂಲೆಯನ್ನು ಓದಿ ರೆಕಾಡ್ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ರಾಜಶೇಖರ್ ಜೈನ್, ನಿರ್ದೇಶಕರುಗಳಾದ ಸುಭಾಷ್ ನಾಯಕ್, ಕೆ. ದೇವಾನಂದ, ವಿಜಯಲಕ್ಷ್ಮೀ ಸುರೇಶ್, ಸುಬ್ರಹ್ಮಣ್ಯ ಗೌಡ ಹನಿಯೂರು, ಸುಂದರ ಪೂಜಾರಿ ಬಡಾವು, ಶ್ರೀ ನಿವಾಸ ನಾಯಕ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವ್ಯವಸ್ಥಾಪಕರಾದ ರಾಧಾ ಬಿ. ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.