HomePage_Banner
HomePage_Banner
HomePage_Banner

ಜನಪ್ರತಿನಿಧಿಗಳೇ ಧರ್ಮ ರಾಜಕೀಯ ಬೇಡ ರಾಜಕೀಯ ಧರ್ಮ ಪಾಲಿಸಿ: ಅನಿತಾಹೇಮನಾಥ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಧರ್ಮ ಧರ್ಮಗಳ ಮಧ್ಯೆ ಧ್ವೇಷ ಹರಡಿ ಶಾಂತಿ ಸಾಮರಸ್ಯ ಕ್ಕೆ ದಕ್ಕೆ ತರುವ ಪಕ್ಷವನ್ನು ಬೆಂಬಲಿಸಬೇಡಿ, ವಿವಿಧ ಜಾತಿ ಧರ್ಮ ಮತಗಳನ್ನು ಏಕತೆಯಲ್ಲಿ ಕಾಣುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರುವ ಮಹತ್ತರ ಜವಾಬ್ದಾರಿ ನಮ್ಮದಾಗಬೇಕು ಎಂದು ನೆಟ್ಟಣಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀ ಮತಿ ಅನಿತಾ ಹೇಮನಾಥ್ ಶೆಟ್ಟಿ ಹೇಳಿದರು.

ಅವರು ಅರಿಯಡ್ಕದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರೆ ಮಹಾತ್ಮಾ ಗಾಂಧೀಜಿಯವರ ಗ್ರಾಮಾಭಿವೃದಿಯ ಮೂಲಕ ರಾಮರಾಜ್ಯದ ಕನಸು ನನಸಾಗಲಿದೆ. ಧರ್ಮ ಧರ್ಮ ಗಳ ಮಧ್ಯೆ ವಿಷಬೀಜ ಬಿತ್ತಿ ಸಾಮಾಜಿಕ ಸಾಮರಸ್ಯ ಕೆಡಿಸುವ ಬದಲು ರಾಜಕೀಯ ಧರ್ಮವನ್ನು ಪಾಲಿಸೋಣ. ಮತದಾರರ ಆಶಯದಂತೆ ಕ್ಷೇತ್ರದ ಅಭಿವೃದ್ಧಿ ಗೆ ಜಿಲ್ಲಾ ನನ್ನಿಂದ ಸಾಧ್ಯವಾದರಷ್ಟರ ಮಟ್ಟಿಗೆ ಕೋಟ್ಯಾಂತರ ಅನುದಾನ ಇರಿಸಿ ಗ್ರಾಮದ ಅಭಿವೃದ್ಧಿ ಗೆ ಸಹಕರಿಸಿದ್ದೇನೆ. ಈ ಬಾರಿ ಅರಿಯಡ್ಕ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿಗೆ ಎಡೆಮಾಡಿ ಕೊಡದೇ ಗ್ರಾಮಾಭಿವೃದ್ಧಿಯ ಉದ್ದೇಶದಿಂದ ಪ್ರತಿ ಮತದಾರರ ಬಳಿ ತೆರಳಿ ಅವರ ಮನ ಪರಿವರ್ತನೆ ಮಾಡಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ದುಡಿಯೋಣ ಎಂದು ಹೇಳಿದರು.ಕಾವು ಹೇಮನಾಥ್ ನೇತೃತ್ವದಲ್ಲಿ ಈ ಬಾರಿ ಅರಿಯಡ್ಕ ಗ್ರಾಮ ಪಂಚಾಯತ್ ನ ೨೪ರಲ್ಲಿ ೨೦ಸದಸ್ಯರು ಗೆದ್ದು ಬಹುಮತದಿಂದ ಆಡಳಿತ ನಡೆಸಲಿದ್ದೇವೆ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ ನ ವ್ಯಾಪ್ತಿಯ ಜನತೆಗೆ ಕಾವು ಹೇಮನಾಥ್ ಶೆಟ್ಟಿ ಕುಟುಂಬ ದ ಕೊಡುಗೆ ಅಪಾರವಾದುದು, ನಾವೆಲ್ಲ ಒಟ್ಟು ಸೇರಿ ಅವರ ಕೈ ಬಲಪಡಿಸೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಇಕ್ಬಾಲ್ ಹುಸೇನ್ ಅಯ್ಕೆ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ರನ್ನು ಅಧ್ಯಕ್ಷ ರನ್ನಾಗಿ ಮತ್ತು ಪ್ರಧಾನ ಕಾರ್ಯದರ್ಶಿ ಯನ್ನಾಗಿ ಸಾರ್ಥಕ್ ರೈ ಅವರುಗಳನ್ನು ಕಾರ್ಯಕರ್ತರ ಸರ್ವಾನುಮತದ ತಿರ್ಮಾನದಂತೆ ಅಯ್ಕೆ ಮಾಡಲಾಯಿತು.ಕೋಶಾಧಿಕಾರಿಯಾಗಿ ಶಿವಕುಮಾರ್ ಕೌಡಿಚ್ಚಾರ್ ,ಉಪಾಧ್ಯಕ್ಷ ರುಗಳಾಗಿ ಬಾಬು ದರ್ಭೆತ್ತಡ್ಕ, ನಿರ್ಮಲ , ಶೇಖರ್ ,ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಮಣಿಯಾಣಿ ,ಗೌರವ ಸಲಹೆಗಾರಾಗಿ ಅಮಣ್ಣರೈ ,ಶಿವರಾಮ ಮಣಿಯಾಣಿ, ಸತೀಶ್ಚಂದ್ರ ರೈ , ಸಂಘಟನಾ ಕಾರ್ಯದರ್ಶಿ ಯಾಗಿ ರಫೀಕ್ ಅವರುಗಳನ್ನು ಸಮಿತಿಯ ಪದಾಧಿಕಾರಿಗಳಾಗಿ ಅಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕಾಂಗ್ರೆಸಿಗ ನಿವೃತ್ತ ಯೋಧ ಅಮಣ್ಣರೈ ರವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಂಡ ಈ ದೇಶದಲ್ಲಿ ಜಾತ್ಯಾತೀತ ತತ್ವದ ಅಧಾರದಲ್ಲಿ ಸಾಮಾಜಿಕ ನ್ಯಾಯ ನೀಡಿದ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷ ಈ ದೇಶದ ಜನರ ಅಧಾರ ಸ್ತಂಭ ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಬೇಕಾಗಿ ದೇಶದ ಜನರ ರಕ್ಷಣೆಗಾಗಿ ಮಹಿಳೆಯರು ಮತ್ತು ಮಕ್ಕಳು ನ್ಯಾಯಯುತವಾಗಿ, ನಿರ್ಭಯವಾಗಿ ಬದುಕಲು ಕಾಂಗ್ರೆಸ್ ಪಕ್ಷದ ಆಡಳಿತ ಅಗತ್ಯವಿದೆ. ಅರಿಯಡ್ಕ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ.ನಮ್ಮ ಗ್ರಾಮದ ಅಭಿವೃದ್ಧಿ ಗೆ ನಮ್ಮ ಗ್ರಾಮದ ಜನರ ರಕ್ಷಣೆ ಗೆ ಬೇಕಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಭೂ ಅಭಿವೃದ್ಧಿ ಬ್ಯಾಂಕ್ ನ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿರ್ದೇಶಕ ರಾಗಿ ಅಯ್ಕಯಾಗಿರುವ ಸೋಮಪ್ಪ ನ್ಯಾಕ್ ಅವರನ್ನು ಗೌರವಿಸಲಾಯಿತು.

ಅರಿಯಡ್ಕ ಪಂಚಾಯತ್ ನ ಮಾಜಿ ಅಧ್ಯಕ್ಷ ರಾದ ಶಿವರಾಮ ಮಣಿಯಾಣಿ ಸ್ವಾಗತಿಸಿ , ಕಾರ್ಮಿಕ ಘಟಕದ ಶಿವಕುಮಾರ್ ಕೌಡಿಚ್ಚಾರ್ ವಂದಿಸಿದರು. 

ಮಾಜಿ ಉಪಾಧ್ಯಕ್ಷ ರಾದ ಇಕ್ಬಾಲ್ ಹುಸೇನ್ ರವರು ಕಾರ್ಯಕ್ರಮ ನಿರೂಪಿಸಿ ದರು.ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರುಗಳಾದ ಧಿವ್ಯನಾಥ್ ಶೆಟ್ಟಿ ,ನಿರ್ಮಲ , ನವೀನ ಹಾಗೂ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.