HomePage_Banner
HomePage_Banner
HomePage_Banner

ಭವಿಷ್ಯದ ಪುತ್ತೂರಿಗೆ ಸ್ವಚ್ಛ ಬಲ್ನಾಡಿನ ಸಂಕಲ್ಪ: ರಸ್ತೆ ಬದಿಗಳ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1

ಶರತ್ ಆಳ್ವ ಚನಿಲ

ಪುತ್ತೂರು: ಸ್ವಚ್ಛತೆ ಎಂಬುದು ನಮ್ಮ ಜೀವನದ ಭಾಗವಾಗಿರಬೇಕು. ಮನೆ, ಸುತ್ತಲಿನ ಪರಿಸರ, ಬೀದಿ ಹೀಗೆ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಇಡೀ ಸಮಾಜವೇ ಸ್ವಚ್ಛವಾಗಿರುತ್ತದೆ. ಎಲ್ಲಿ ಸ್ವಚ್ಛತೆಯಿದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬುದು ಸತ್ಯ. ಸ್ವಚ್ಛ ಪುತ್ತೂರು ಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯ ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರತಿ ಗ್ರಾಮವೂ ಇಂತಹದೊಂದು ಸಂಕಲ್ಪವನ್ನು ದೃಢವಾಗಿ ತೆಗೆದುಕೊಂಡರೆ ಸ್ವಚ್ಛ ಭಾರತ್ ಕಾರ್ಯ ಯಶಸ್ವಿಯಾಗುತ್ತದೆ. ಈ ಉದ್ದೇಶವನ್ನು ಇಟ್ಟುಕೊಂಡು ಬಲ್ನಾಡು ಗ್ರಾಮದಲ್ಲಿಯೂ ಸ್ವಚ್ಛತಾ ಅಭಿಯಾನ ಆರಂಭವಾಗಿತ್ತು.

ಭಾರತೀಯ ಜನತಾ ಪಾರ್ಟಿ ಬಲ್ನಾಡು ಶಕ್ತಿ ಕೇಂದ್ರ, ಶ್ರೀ ರಾಮ ಪ್ರೆಂಡ್ಸ್ ಕಬ್ಬಿನಹಿತ್ತಿಲು, ಅಯೋಧ್ಯ ಫ್ರೆಂಡ್ಸ್ ಚಣಿಲ, ಹನುಮಾನ್ ಫ್ರೆಂಡ್ಸ್ ಕೋಡಿಯಡ್ಕ ಇದರ ಸಂಯೋಜಕತ್ವದಲ್ಲಿ ಬಲ್ನಾಡಿನ ಉಜ್ರುಪಾದೆ-ಬಬ್ಬಿಲಿ-ಚನಿಲ-ದೇರಾಜೆಯವರೆಗಿನ ಸುಮಾರು ಐದು ಕಿ.ಮೀ ವ್ಯಾಪ್ತಿಯ ರಸ್ತೆಯ ಎರಡೂ ಬದಿಯನ್ನು ಸ್ವಚ್ಛ ಮಾಡುವ ಕಾರ್ಯಕ್ರಮವು ನ.೧ರಂದು ನಡೆಯಿತು.

ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚಣಿಲ ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಲ್ನಾಡು ಶಕ್ತಿಕೇಂದ್ರದ ಸಂಚಾಲಕ ಅಕ್ಷಯ್ ಶೆಟ್ಟಿ, ಪುತ್ತೂರು ಕ್ಷೇತ್ರ ಸಮಿತಿಯ ಸದಸ್ಯೆ ಪರಮೇಶ್ವರಿ ಭಟ್ ಬಬ್ಬಿಲಿ, ಪ್ರಗತಿಪರ ಕೃಷಿಕ ಮಾಧವ ಗೌಡ ಕಾಂತಿಲ, ಬಾಲಸುಬ್ರಹ್ಮಣ್ಯ ಕೋಟ್ಯಾನ್, ನಗರಸಭೆ ಸದಸ್ಯೆ ಪೂರ್ಣಿಮ ಕೋಡಿಯಡ್ಕ, ಎಸ್.ಟಿ ಮೋರ್ಛ ಸದಸ್ಯ ನಾರಾಯಣ ನಾಯ್ಕ ಕೆರೆಮೂಲೆ, ಶ್ಯಾಮಣ್ಣ ನಾಯಕ್ ಅಂಬಟೆಮೂಲೆ, ಕಿರಣ್ ಕುಮಾರ್ ರೈ ಕಬ್ಬಿನಹಿತ್ತಿಲು, ಜಗನ್ನಾಥ ರೈ ಚನಿಲ,ಶೇಷಪ್ಪ ನಾಯ್ಕ ಕಬ್ಬಿಣಹಿತ್ತಿಲು, ಶಿವರಾಮ ನಾಯ್ಕ ಚನಿಲ, ಪ್ರಕಾಶ್ ಕೆಲ್ಲಾಡಿ, ಸೃಜನ್ ನೆಕ್ಕರೆ, ಜೀವನ್ ರೈ ಚನಿಲ, ಭರತ್ ಚನಿಲ, ಕೃಷ್ಣ ನಾಯ್ಕ ಅಂಬಟೆಮೂಲೆ, ಸಂದೀಪ್ ಮುದಲಾಜೆ, ಚರಣ್ ನಾಯಕ್ ಚನಿಲ, ಶೇಷಪ್ಪ ನಾಯ್ಕ, ಗಂಗಾಧರ ನಾಯ್ಕ, ಸತೀಸ್ ನಾಯ್ಕ, ಮಧುಕರ ಗೌಡ, ಕೃಷ್ಣಪ್ಪ ನಾಯ್ಕ, ಧನಂಜಯ, ಕೌಶಿಕ್ ಬೆಳಿಯೂರುಗುತ್ತು, ಹೀಗೆ ಅನೇಕ ಬಿ.ಜೆ.ಪಿ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು.

ಸ್ವಚ್ಛ ಪುತ್ತೂರಿಗೆ ಗ್ರಾಮಗಳೇ ಮಾದರಿಯಾಗಲಿ
ಸ್ವಚ್ಛತೆಗೆ ಗ್ರಾಮಗಳು ಮುಂದಾಗಿ, ಪ್ರತಿ ಮನೆ-ಮನಗಳು ಸ್ವಚ್ಛತಾ ಸಾಕಾರಕ್ಕೆ ಕೈಜೋಡಿಸಬೇಕು. ಭವಿಷ್ಯದ ಪುತ್ತೂರಿಗೆ ಸ್ವಚ್ಛತೆಯೆಂಬುದು ಅಡಿಗಲ್ಲಾಗಿ ನಿಂತರೆ. ಮೋದಿಯ ಕನಸಿನ ಸ್ವಚ್ಛ ಭಾರತ ನಿರ್ಮಾಣವಾಗಲು ನಾವೆಲ್ಲರೂ ಗ್ರಾಮಮಟ್ಟದಿಂದಲೇ ಸ್ವಚ್ಛಮನಸ್ಸಿನಿಂದ, ಸ್ವಚ್ಛ ಪರಿಸರದ ಕಡೆಗೆ ಮುಖ ಮಾಡಬೇಕು. ನಮ್ಮ ಗ್ರಾಮ, ಸ್ವಚ್ಛ ಗ್ರಾಮವಾದರೆ ಸ್ವಚ್ಛ ಭಾರತ್ ಕಲ್ಪನೆ ಸಾಕಾರವಾಗುತ್ತದೆ – ಚಣಿಲ ತಿಮ್ಮಪ್ಪ ಶೆಟ್ಟಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.