HomePage_Banner
HomePage_Banner
HomePage_Banner

ಬನ್ನೂರು ಚರ್ಚ್ ನಲ್ಲಿ ವಾಹನಗಳ ಮೇಲೆ ಆಶೀರ್ವಚನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ನಲ್ಲಿ ವಾಹನಗಳ ಮೇಲೆ ಆಶೀರ್ವಚನ ಕಾರ್ಯಕ್ರಮ ನ.1 ರಂದು ಚರ್ಚ್ ನಲ್ಲಿ ಜರಗಿತು.

ಚರ್ಚ್ ನ ಪ್ರಧಾನ ಧರ್ಮಗುರು ವಂ/ಪ್ರಶಾಂತ್ ಫೆರ್ನಾಂಡೀಸ್ ಹಾಗೂ ಸಹಾಯಕ ಧರ್ಮಗುರು ವಂ/ಪ್ರೇಮ್ ಡಿ’ಸೋಜರವರು ವಾಹನಗಳಿಗೆ ಪವಿತ್ರ ಜಲ ಸಂಪ್ರೋಕ್ಷಿಸಿ, ಆಶೀರ್ವಚನ ನೆರವೇರಿಸಿದರು. ಬಳಿಕ ಸಂದೇಶ ನೀಡಿದ ವಂ/ಪ್ರಶಾಂತ್ ಫೆರ್ನಾಂಡೀಸ್ ರವರು, ನಮ್ಮ ದೈನಂದಿನ ಚಟುವಟಿಕೆಯಲ್ಲಿ ವಾಹನಗಳು ಪ್ರಮುಖ ಪಾತ್ರ ವಹಿಸಿದೆ. ವಾಹನಗಳಲ್ಲಿ ಪ್ರಯಾಣಿಸುವಾಗ ಅತಿಯಾದ ಜಾಗರೂಕತೆ, ವೇಗದಲ್ಲಿ ಇತಿಮಿತಿ ಇರಬೇಕು. ವಾಹನಗಳಲ್ಲಿ ನಿರ್ಲಕ್ಷ್ಯತನ ವಹಿಸಿದರೆ ಅಪಘಾತಕ್ಕೆ ಎಡೆ ಮಾಡಿವಂತಾಗುತ್ತದೆ ಎಂದರು.

ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ಚರ್ಚ್ ಆರ್ಥಿಕ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.