HomePage_Banner
HomePage_Banner
HomePage_Banner

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಮತ್ತು ಹಿತರಕ್ಷಣಾ ವೇದಿಕೆ ಜಂಟಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು;ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಶಿಕ್ಷಣ ಪಡೆದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳಿದ್ದು ಆಸಕ್ತರಿಗೆ ನೇಮಕಾತಿಗೆ ಸಂಬಂದಿಸಿದ ಮಾರ್ಗದರ್ಶನ ನೀಡಲಾಗುವುದು‌. ನೇಮಕಾತಿಯ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಒದಗಿಸಿಕೊಡಲಾಗುವುದು ಎಂದು ನಗರ ಠಾಣಾ ಉಪನಿರೀಕ್ಷಕ ಜಂಬುರಾಜ್‌ ಮಹಾಜನ್ ಹೇಳಿದರು.

ದ.ಕ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನ.1ರಂದು ಬಸ್ ನಿಲ್ದಾಣದ ಬಳಿಯ ಅಮರ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಾಸಿಕ ಸಭೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಹಿಳಾ ಘಟಕಗಳ ಆಯ್ಕೆಯ ಸಭೆಯನ್ನು ಉದ್ಘಾಟಿಸಿ, ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ನೇಮಕಾತಿಗಳು ನಡೆಯುತ್ತಿದೆ. ಇತರ ಇಲಾಖೆಗಳಿಗೆ ಹೋಳಿಕೆ ಮಾಡಿದರೆ ಪೊಲೀಸ್ ಇಲಾಖೆಯಲ್ಲಿ ವೇತನವೂ ಅಧಿಕ.
ಎಸ್ಎಸ್ಎಲ್.ಸಿ ಉತ್ತೀರ್ಣರಾದವರಿಗೆ ಪೊಲೀಸ್ ಕಾನ್ ಸ್ಟೇಬಲ್ ಹಾಗೂ ಪಿಯುಸಿ ಉತ್ತೀರ್ಣರಾದವರಿಗೆ ಸಿವಿಲ್‌ ಕಾನ್ ಸ್ಟೇಬಲ್ ಹುದ್ದೆಗೆ ಅವಕಾಶವಿದೆ. ನೇಮಕಾತಿಗೆ ಪ್ರಾರಂಭದಲ್ಲಿ 100 ಅಂಕಗಳ ಪರೀಕ್ಷೆ ಹಾಗೂ ದೇಹದಾಡ್ಯ ಸ್ಪರ್ಧೆಗಳಿದ್ದು ಅತೀ ಹೆಚ್ಚು ಅಂಕಗಳಿಸಿದವರಿಗೆ ಅವಕಾಶವಿದೆ ಎಂದು ಹೇಳಿದ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ಐಎಎಸ್,‌ಕೆಎಎಸ್, ಐಪಿಎಸ್, ಬ್ಯಾಂಕಿಂಗ್ ಮೊದಲಾದ‌‌ ವಿಷಯಗಳಿಗೆ ಸ್ಟೈಫಂಡ್ ಸಹಿತ ಉಚಿತ ತರಬೇತಿ, ಹಾಗೂ ತರಬೇತಿಗೆ ಸಂಬಂದಿಸಿದ‌ ಪುಸ್ತಕಗಳನ್ನು ಇಲಾಖೆ‌ ಉಚಿತವಾಗಿ ನೀಡುತ್ತಿದ್ದು ಇವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.

  

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಾತನಾಡಿ, ಶಿಕ್ಷಣದಿಂದ ಸಂಘಟಿತರಾಗಿ, ಸಂಘಟನೆಯ ಮೂಲಕ ಸಮಾಜದಲ್ಲಿ ಮುಂದುವರಿಯಬೇಕು. ಪ್ರತಿಯೊಬ್ಬರು ಸುಶಿಕ್ಷತರಾದಾಗ ಸಾಮಾಜಿಕ ಪಿಡುಗುಗಳಿಂದ ಹೊರಬರಲು ಸಾಧ್ಯ. ಸಮಸ್ಯೆಗಳು ಉಂಟಾದಾಗ ಇಲಾಖೆಯ ಗಮನಕ್ಕೆ ತರಬೇಕು.‌ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮಾಹಿತಿ ನೀಡುವಂತೆ ಅವರು ಹೇಳಿದರು.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಶೈಕ್ಷಣಿಕವಾಗಿ ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳ ಮಾಹಿತಿ ನೀಡಿದರು.

ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕಳೆದ ಅನೇಕ ವರ್ಷಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು ಸಂಘಟನೆಗಳನ್ನು ಬಲೀಷ್ಠಗೊಳಿಸುವ ಮೂಲಕ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ. ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಸಂಘಟನೆಗಳ ಮೂಲಕ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿರುವುದಲ್ಲದೆ‌ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ನ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಕ, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನಂದಕುಮಾರ್ ಹಾಗೂ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ನ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಗುರುತಿನ‌ಚೀಟಿಯನ್ನು ವಿತರಿಸಲಾಯಿತು. ಜಿಲ್ಲೆ‌ ಹಾಗೂ ತಾಲೂಕು ಮಹಿಳಾ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಪವಿತ್ರ ಬೆಟ್ಟಂಪಾಡಿ ಸ್ವಾಗತಿಸಿದರು. ಧನ್ಯ ಬೆಟ್ಟಂಪಾಡಿ ವರದಿ ವಾಚಿಸಿದರು. ಹರೀಶ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

‘ಸುದ್ದಿ’ಗೆ ಅಭಿನಂದನೆ
ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯು ಪರಿಶಿಷ್ಟ ಜಾತಿ,‌ಪಂಗಡದ ಸಮಸ್ಯೆಗಳನ್ನು ಪತ್ರಿಕೆ ಮೂಲಕ ಇಲಾಖೆಯ ಗಮನ ತಂದು ಪರಿಹರಿಸುವಲ್ಲಿ ಪ್ರಯತ್ನಿಸುತ್ತಿರುವ ಸುದ್ದಿ ಪತ್ರಿಕೆಗೆ ಅಭಿನಂದನೆ ಸಲ್ಲಿಸುವುದಾಗಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ‌ ಹೇಳಿದರು.

ನಗರ ಸಭೆ ವಿರುದ್ಧ ಪ್ರತಿಭಟನೆ
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ‌ ಗಿರಿಧರ ನಾಯ್ಕ ನಗರ ಸಭಾ ವ್ಯಾಪ್ತಿಯಲ್ಲಿ ಕಳೆದ ಏಳು ವರ್ಷ ಗಳಿಂದ ಶೌಚಾಲಯ ಇಲ್ಲದಿರುವ ಮನೆಗಳಿವೆ. ಇದರ ಬಗ್ಗೆ‌ ನಗರ ಸಭೆಯ ಗಮನಕ್ಕೆ ತಂದರೂ ಇನ್ನೂ ಪರಿಹಾರವಾಗಿಲ್ಲ. ಸ್ವಚ್ಚತೆಯಲ್ಲಿ ಮುಂದಿದ್ದೇವೆ ಎಂದು ಹೇಳುತ್ತಿದ್ದರೂ ಶೌಚಾಲಯವನ್ನು ಇನ್ನೂ ಒದಗಿಸಿಲ್ಲ. ಶೌಚಾಲಯ ಒದಗಿಸದಿದ್ದರೆ ನಗರ ಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.