HomePage_Banner
HomePage_Banner
HomePage_Banner

ಬೆಳಂದೂರು ಅಜಿರಂಗಳ ಎಂಬಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯದ ಕುರುಹು ಹಿನ್ನಲೆ | ಸಮಾಲೋಚನಾ ಸಭೆ- ಅಷ್ಠಮಂಗಲ ಪ್ರಶ್ನಾ ಚಿಂತನೆಗೆ ನಿರ್ಧಾರ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೆಳಂದೂರು ಗ್ರಾಮದ ಅಜಿರಂಗಳ ಎಂಬಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯ ಇರುವ ಕುರುಹುಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಅಷ್ಠಮಂಗಲ ಪ್ರಶ್ನಾ ಚಿಂತನೆ ನಡೆಸುವ ಕುರಿತು ಸಮಾಲೋಚನಾ ಸಭೆಯು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅ.31ರಂದು ನಡೆಯಿತು.

ಬೆಳಂದೂರು, ಕಾಣಿಯೂರು, ಕಾಮಣ ಹಾಗೂ ಕೊಡಿಯಾಲ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇವಸ್ಥಾನದ ಕುರುಹು ಇರುವ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಲು ನಾವೆಲ್ಲಾ ಸೇರಿದ್ದೇವೆ. ಮುಂದಿನ ಎಲ್ಲಾ ಕಾರ್ಯಗಳು ಅಷ್ಠಮಂಗಲ ಪ್ರಶ್ನಾ ಚಿಂತನೆಯ ಮೂಲಕವೇ ನಡೆಯಬೇಕಾಗಿದ್ದು, ದೇವಸ್ಥಾನ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗವನ್ನು ಬಿಟ್ಟು ಕೊಡಲು ನಾನು ಬದ್ಧನಿದ್ದೇನೆ. ಸುಂದರ ದೇವಸ್ಥಾನವನ್ನು ನಿರ್ಮಿಸುವ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ನಮ್ಮ ಜಾಗದಲ್ಲಿ ಅನೇಕ ಧಾರ್ಮಿಕ ಚಿಂತನೆಗಳು ನಡೆದು, ಧಾರ್ಮಿಕ ತಳಹದಿಯ ಮೇಲೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ನಮಗೆ ಇತ್ತೀಚಿನ ದಿನಗಳಲ್ಲಿ ಪ್ರಶ್ನಾ ಚಿಂತನೆ ನಡೆಸಿದಾಗ ನಮ್ಮ ಜಾಗ ಪಕ್ಕದಲ್ಲಿಯೇ ಸುಬ್ರಹ್ಮಣ್ಯ ದೇವಸ್ಥಾನ ಇರುವ ಬಗ್ಗೆ ಕಂಡು ಬಂದ ಕಾರಣ ಪ್ರಾರಂಭಿಕ ಹೆಜ್ಜೆಯನ್ನು ಇಟ್ಟಿದ್ದೇವೆ. ಮುಂದೆ ನಡೆಯುವ ತಮ್ಮೆಲ್ಲರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಒಂದು ಊರಿನ ದೇವಸ್ಥಾನ ನಿರ್ಮಾಣವಾದರೆ ಅ ಊರೇ ಅಭಿವೃದ್ಧಿಗೊಂಡಂತೆ. ಎಲ್ಲಾ ಜನತೆಯ ಸಹಕಾರದಿಂದ ದೇವಸ್ಥಾನವು ಅತೀ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿ ಎಂದರು. ಪ್ರಶಾಂತ್ ಭಟ್ ಕಟ್ಟತ್ತಾರು ಮಾತನಾಡಿ, ನನ್ನ ಹಿರಿಯರಿಂದ ತಿಳಿದುಕೊಂಡ ಹಾಗೆ ಹಿಂದೆ ಇಲ್ಲಿ ಇದ್ದ ದೇವಸ್ಥಾನಕ್ಕೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಒಂದಕ್ಕೊಂದು ಸಂಬಂಧವಿದೆ. ಅಲ್ಲದೇ ಕಾಣಿಯೂರು ಜಾತ್ರೆ ನಡೆಯುವ ಸಂದರ್ಭದಲ್ಲಿ ಧ್ವಜರೋಹಣದ ಮೂಲಕ ನಡೆಯುತ್ತದೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮ ಹಿರಿಯರ ಮಾತುಗಳು ನಿಜವಿರಬಹುದು. ಮುಂದೆ ಪ್ರಶ್ನಾ ಚಿಂತನೆಯಲ್ಲಿ ಎಲ್ಲಾವು ವಿಷಯಗಳು ಗೊತ್ತಾಗಲಿದೆ ಎಂದರು.

 

ಉದಯ ರೈ ಮಾದೋಡಿ, ಜನಾರ್ದನ ಆಚಾರ್ಯ ಕಾಣಿಯೂರು, ಸಂಪತ್ ಕುಮಾರ್ ರೈ ಪಾತಾಜೆ, ಪದ್ಮಯ್ಯ ಗೌಡ ಅನಿಲ, ಮನ್ಮಥ ಅಜಿರಂಗಳ, ಧರ್ಮೇಂದ್ರ ಗೌಡ ಕಟ್ಟತ್ತಾರುರವರು ಅಭಿಪ್ರಾಯಗಳನ್ನು ಹಂಚಿಕೊಂಡರು. ಹರಿಪ್ರಸಾದ್ ರೈ ಕಾಣಿಯೂರು, ಕೃಷ್ಣಪ್ಪ ಗೌಡ ಕಂಡೂರು, ಪುಟ್ಟಣ್ಣ ಗೌಡ ಮುಗರಂಜ, ಮಾಧವ ಕಟ್ಟತ್ತಾರು, ಜನಾರ್ದನ ಗೌಡ, ಬಾಲಕೃಷ್ಣ ಕಾಣಿಯೂರು, ಶಿವಪ್ರಸಾದ್ ಆಳ್ವ, ಹರೀಶ್ ರೈ, ಶೇಖರ ಅಬೀರ, ಮಾಧವ ಮಿತ್ತಮೂಲೆ, ಶೇಷಪ್ಪ ಕರೆಮನೆ, ಕುಶಾಲಪ್ಪ ತೋಟ, ಕುಶಾಲಪ್ಪ ಗೌಡ ತಾರಿತ್ತಡಿ, ವಸಂತ ಗೌಡ ಕಂಪ, ಸುಕುಮಾರ ಅಜ್ರಂಗಳ, ನಾರಾಯಣ ಪೂಜಾರಿ ಅಬೀರ, ಜಗನ್ನಾಥ ಪೂಜಾರಿ ಅಬೀರ, ದಿನೇಶ್ ಕುಮಾರ್ ಅಬೀರ, ಬಾಲಚಂದ್ರ ಅಬೀರ, ನಾರಾಯಣ ಕಂಡೂರು, ಪರಮೇಶ್ವರ ಗೌಡ ಅನಿಲ, ರಾಜೇಶ್ ಮೀಜೆ, ಮೋಹನ್ ಹೊಸೊಳಿಗೆ, ಬೆಳಿಯಪ್ಪ ಪೆರ್ಲೋಡಿ, ವಾಸುದೇವ ನಾಕ್ ತೋಟ, ಸುಧಾಕರ ಆಚಾರ್ಯ ಅಬೀರ, ಶ್ರೀಧರ ಪೂಜಾರಿ ಅಬೀರ, ರಾಧಕೃಷ್ಣ ಪೆರ್ಲೋಡಿ, ಶೇಖರ ಗೌಡ ಮೇಗಿನಮನೆ, ಚಂದ್ರಯ್ಯ ಆಚಾರ್ಯ ಅಬೀರ, ಜಯಂತ ಅಬೀರ, ರುಕ್ಮಯ್ಯ ಗೌಡ ಅಜಿರಂಗಳ, ವಿಶ್ವನಾಥ ಓಡಬಾಯಿ, ಲಿಂಗಪ್ಪ ಗೌಡ ಅಗಳಿ, ಉದಯಕುಮಾರ್ ಅಗಳಿ, ವಿಷ್ಣು ಗೌಡ ಅಬೀರ, ಚಂದಪ್ಪ ಗೌಡ ಹೊಸೊಕ್ಲು, ಸುಂದರ ಅಜಿರಂಗಳ, ಕುಶಾಲಪ್ಪ ಅಬೀರ, ವಸಂತ ಕಂಡೂರು, ರಮೇಶ ಮಾದೋಡಿ, ಮೋಹನ ಅಗಳಿ, ಸೀತಾರಾಮ ಅನಿಲ, ವಿನಯ್ ಅಳುವೆ, ಸುರೇಶ್ ಓಡಬಾಯಿ, ರಾಧಕೃಷ್ಣ ಗೌಡ ಕಂಪ, ಸದಾನಂದ ಆಚಾರ್ಯ ಅಬೀರ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ವಸಂತ ರೈ ಕಾರ್ಕಳ ಸ್ವಾಗತಿಸಿ, ವಂದಿಸಿದರು.

[ಬೆಳಂದೂರು ಗ್ರಾಮದ ಅಜಿರಂಗಳ ಎಂಬಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯ ಇರುವ ಕುರುಹುಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ದೇವಸ್ಥಾನ ನಿರ್ಮಾಣದ ಮೊದಲ ಹೆಜ್ಜೆಯಾಗಿ ಅಷ್ಠಮಂಗಲ ಪ್ರಶ್ನಾ ಚಿಂತನೆ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಅಷ್ಠಮಂಗಲ ಪ್ರಶ್ನಾ ಚಿಂತನೆಗೆ ದಿನ ನಿಗದಿಗೊಳಿಸಲು ದೈವಜ್ಞರ ಭೇಟಿಗಾಗಿ ಬೆಳಂದೂರು, ಕಾಣಿಯೂರು ಹಾಗೂ ಕಾಮಣ ಗ್ರಾಮದಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಲಾಯಿತು. ಶೀಘ್ರದಲ್ಲಿ ದೈವಜ್ಞರ ಭೇಟಿ ಮಾಡಿ ಅಷ್ಠಮಂಗಲ ಪ್ರಶ್ನಾ ಚಂತನೆ ನಡೆಸುವಂತೆ ಸಭೆ ನಿರ್ಧರಿಸಿತು. ಅಲ್ಲದೇ ಗ್ರಾಮದಿಂದ ಒಬ್ಬೊಬ್ಬರನ್ನು ಸಂಚಾಲಕರನ್ನಾಗಿಯೂ ಆಯ್ಕೆ ಮಾಡಲಾಯಿತು. ]

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.