HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಪಾದರಕ್ಷೆ ಮಳಿಗೆ ʼಐಕೋನ್‌ ಫೂಟ್‌ ವೇರ್‌ʼ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅತ್ಯುತ್ತಮ ವಿನ್ಯಾಸದ ನವ ನವೀನ ಮಾದರಿಯ ಅತ್ಯಾಕರ್ಷಕ ಬಣ್ಣಗಳ ಪಾದರಕ್ಷೆ ಮಳಿಗೆ, ಕಳೆದ 16 ವರುಷಗಳಿಂದ ಉತ್ತಮ ಸೇವೆ ಹಾಗೂ ಉತ್ಕೃಷ್ಟ ಗುಣಮಟ್ಟದ ಪಾದರಕ್ಷೆಗಳಿಗೆ ಹೆಸರುವಾಸಿಯಾಗಿ ಕಳೆದ ಮೂರು ವರುಷಗಳಿಂದ ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್‌ ನಲ್ಲಿ ವ್ಯವಹರಿಸುತ್ತಿದ್ದ ಐಕೋನ್‌ ಫೂಟ್‌ ವೇರ್‌ ಇದೀಗ ಸ್ಥಳಾಂತರಗೊಂಡು ಹಳೆ ಬಸ್‌ ನಿಲ್ದಾಣದ ಹಸನ್‌ ಟವರ್ಸ್‌ ನಲ್ಲಿ ನ.2ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಧರ್ಮಗುರುಗಳಾದ ಪೆರ್ನೆ ಉಸ್ತಾದ್‌ ರವರು ನೆರವೇರಸಿ ಮಾತನಾಡಿ ಒಳ್ಳೆಯ ಉದ್ದೇಶ ಹಾಗೂ ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯು ಖಂಡಿತವಾಗಿ ಅಭಿವೃದ್ಧಿ ಪಥದಲ್ಲಿ ಸಾಗುವುದು ನಿಶ್ಚಿತ. ಇನ್ನೂ ಅತ್ಯುತ್ತಮ ಸೇವೆಯಿಂದ ಇಲ್ಲಿನ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದು ಅಭಿನಂದಿಸಿ ಹಾರೈಸಿದರು. 

ಕರಾಯ ಮಸೀದಿಯ ಗುರುಗಳಾದ ಹೈದರ್‌ ಮದನಿ, ಹಸನ್‌ ಟವರ್ಸ್‌ ನ ಮಾಲಕ ಕೆ ಮಹಮದ್ ಇಕ್ಬಲ್‌, ಶಕೂರ್‌ ಮೈನಾ, ಡಾ. ಯತೀಶ್‌ ಕುಮಾರ್‌ ಶೆಟ್ಟಿ, ನಝೀರ್‌ ಮಠ, ಇಸ್ಮಾಯಿಲ್‌ ಹಾಜಿ ಸೂಪರ್‌ ಕಲೆಕ್ಷನ್‌, ಸುಲೈಮಾನ್‌, ಸಹೋದರರಾದ ಅಹಮದ್‌ ಕಬೀರ್‌, ಅಬ್ದುಲ್‌ ಖಾದರ್‌, ಮನ್ಸೂರ್‌ ಅಲಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಲಕ ಬಿ ಎಮ್‌ ಶಾಫಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಸಿಬಂದಿಗಳಾದ ನಝೀರ್‌ ತುರ್ಕಳಿಕೆ, ಜುನ್ನಿ ಕೊಪ್ಪಳ ಮಠ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.