HomePage_Banner
HomePage_Banner
HomePage_Banner

ಸವಣೂರು ನಡುಬೈಲು ಅಭಿಷೇಕ್‌ ಎನ್‌ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಸವಣೂರು: ಕಡಬ ತಾಲೂಕಿನ ಸವಣೂರು ನಡುಬೈಲು ನಿವಾಸಿ, ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ಹಳೆ ವಿದ್ಯಾರ್ಥಿ, ರೈಲ್ವೇ ಇಲಾಖೆ ಉದ್ಯೋಗಿ ಅಭಿಷೇಕ್‌ ಎನ್‌ ಶೆಟ್ಟಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2019 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಡುಬೈಲು ಜಗನ್ನಾಥ ಶೆಟ್ಟಿ ಮತ್ತು ತುಳಸಿನಿ ಶೆಟ್ಟಿ ಅವರ ಪುತ್ರ ಅಭಿಷೇಕ್‌, ಡೆಕತ್ಲಾನ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ನೆಲ್ಯಾಡಿ ಹಿ.ಪ್ರಾ.ಶಾಲೆ, ನೆಲ್ಯಾಡಿ ಸಂತ ಜಾರ್ಜ್‌ ಪ್ರೌಢಶಾಲೆ, ಮೂಡಬಿದಿರೆ ಆಳ್ವಾಸ್‌ ಪ.ಪೂ. ಹಾಗೂ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ.

2011 ರಲ್ಲಿ 16 ವರ್ಷದ ಹಳೆಯ ಕಿರಿಯರ ರಾಷ್ಟ್ರೀಯ ದಾಖಲೆ, 56 ನೇ ಓಪನ್‌ ನ್ಯಾಷನಲ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 25 ವರ್ಷದ ಹಳೆಯ ರಾಜ್ಯ ದಾಖಲೆ, 29 ವರ್ಷದ ಕರ್ನಾಟಕ ರಾಜ್ಯ ಹಿರಿಯ ದಾಖಲೆ, 18 ವರ್ಷದ ಹಳೆಯ ಭಾರತೀಯ ರೈಲ್ವೆ ದಾಖಲೆ ಮುರಿದು ನೂತನ ದಾಖಲೆ ಸ್ಥಾಪಿಸಿದ್ದಾರೆ.

2015 ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕೂಟ, ಮಂಗಳೂರಿನಲ್ಲಿ ನಡೆದ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, 2017 ರಲ್ಲಿ ಚೆನ್ನೈ ನಲ್ಲಿ ನಡೆದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ಪಟಿಯಾಲದಲ್ಲಿ ಹಿರಿಯ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

2014 ರಿಂದ 2019 ತನಕದ ಆರು ಮುಕ್ತ ರಾಷ್ಟ್ರೀಯ ಚಾಂಪಿಯನ್‌ನಲ್ಲಿ ಪ್ರಥಮ ಸ್ಥಾನ, 2015 ರಲ್ಲಿ ಮಾರಿಷಸ್‌ನಲ್ಲಿ 6 ನೇ ಸ್ಥಾನ, 2017 ರಲ್ಲಿ ಭುವನೇಶ್ವರದಲ್ಲಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 5 ನೇ ಸ್ಥಾನ, 2017 ರಲ್ಲಿ ತುರ್ಕಿಮಿನಿಸ್ಟಾನ್‌ನಲ್ಲಿ ಏಷ್ಯಾದ ಒಳಾಂಗಣ ಆಟಗಳಲ್ಲಿ 4 ನೇ ಸ್ಥಾನ ಪಡೆದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.