HomePage_Banner
HomePage_Banner
HomePage_Banner

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪೊಲೀಸರ ದೌರ್ಜನ್ಯ- ನ್ಯಾಯಕೊಡಿ

Puttur_Advt_NewsUnder_1
Puttur_Advt_NewsUnder_1
  • ಬೆಳ್ತಂಗಡಿಯ ಪಿ. ಮಹಮ್ಮದ್ ಅವರ ಹೋರಾಟಕ್ಕೆ ನಿಂತ ಸಾಮಾಜಿಕ ಕಾರ್ಯಕರ್ತರು

ಪುತ್ತೂರು: ಬೆಳ್ತಂಗಡಿಯ ಜಾರಿಬೈಲು ಎಂ.ಎ ಕಾಂಪ್ಲೆಕ್ಸ್ ಕಟ್ಟಡದ ಮಾಲಕಿಯಿಂದ ವಿಶ್ವಾಸದ ಹಿನ್ನೆಲೆಯಲ್ಲಿ ಪಿ ಮಹಮ್ಮದ್ ಎಂಬವರು ಪಡೆದು ಕೊಂಡ ಅಂಗಡಿ ಕೋಣೆಯನ್ನು ದೀಡಿರ್ ತೆರವು ಮಾಡಲು ಸೂಚಿಸಿದಕ್ಕೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದರೂ ಪೊಲೀಸರು ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಪಿ. ಮಹಮ್ಮದ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದೀಗ ಅವರಿಗೆ ನ್ಯಾಯ ಕೊಡಿಸುವಂತೆ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಬೆಳ್ತಂಗಡಿಯ ಸಾಮಾಜಿಕ ಕಾರ್ಯಕರ್ತರ ಅಬ್ದುಲ್ ಹಕೀಂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿ. ಮಹಮ್ಮದ್ ಎಂಬವರು ಕಳೆದ 6 ತಿಂಗಳಿನಿಂದ ಜಾರಿಗೆಬೈಲು ಎಂ.ಎಂ.ಕಾಂಪ್ಲೆಕ್ಸ್ ಕಟ್ಟಡದ ವಸತಿ ಸಮುಚ್ಚಯದಲ್ಲಿ ವಸತಿ ಕೂಡಾ ಮಾಡಿಕೊಂಡಿದ್ದಾರೆ. ಈ ಎಲ್ಲಾ ವಿಚಾರದಿಂದ ಅಂಗಡಿ ಕಟ್ಟಡದ ಮಾಲಕಿ ಹಾಜಿರಾ ಯಾನೆ ಶಾಯಿನ ಆವರೊಂದಿಗೆ ವಿಶ್ವಾಸದ ಹಿನ್ನೆಲೆಯಲ್ಲಿ ಯಾವುದೇ ಕರಾರು ಪತ್ರ ಹೊಂದದೇ ಮನೆ ಮತ್ತು ಅಂಗಡಿ ಬಾಡಿಗೆ ಮಾಡಿಕೊಂಡು ಇದೀಗ ದಿಡೀರ್ ಅಂಗಡಿ ತೆರವಿಗೆ ಸೂಚಿಸಿರುವುದಲ್ಲದೆ ಬೆಳ್ತಂಗಡಿ ಠಾಣೆಯಲ್ಲಿ ಪಿ ಮಹಮ್ಮದ್ ಅವರ ವಿರುದ್ಧ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿ.ಮಹಮ್ಮದ್ ಆವರಿಗೆ ಆದ ಅನ್ಯಾಯಕ್ಕೆ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದಾಗ ನ್ಯಾಯಾಲಯ ಅಂಗಡಿ ಕಟ್ಟಡ ತೆರವಿಗೆ ತಡೆಯಾಜ್ಞೆ ನೀಡಿದೆ. ಆದರೆ ಬೆಳ್ತಂಗಡಿಯ ಎ.ಎಸ್.ಐ ರಾಮಯ್ಯ ಮತ್ತು ಇಬ್ಬರು ಪೇದೆಗಳು ಜಾರಿಗೆ ಬೈಲು ಎಮ್.ಎಮ್. ಕಾಂಪ್ಲೆಕ್ಸ್ ಬಳಿ ಅಕ್ರಮ ಪ್ರವೇಶ ಮಾಡಿ ಅಂಗಡಿ ಮಾಲಕ ಮಹಮ್ಮದ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಪಿ.ಮಹಮ್ಮದ್ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪೊಲೀಸರು ಬಂದು ಹೇಳಿಕೆ ಪಡೆದುಕೊಂಡಿದ್ದಾರೆ ವಿನಃ ಯಾವುದೇ ದೂರು ದಾಖಲಿಸಿಲ್ಲ. ಹಾಗಾಗಿ ಪೊಲೀಸ್ ದೌರ್ಜನ್ಯ ನಡೆಸಿದ ಎ.ಎಸ್.ಐ ರಾಮಯ್ಯ ಎಂಬವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ಈಗಾಗಲೇ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಅವರು ತಿಳಿಸಿದ್ದರೆ. ಪತ್ರಿಕಾಗೋಷ್ಠಿಯಲ್ಲಿ ಪಿ.ಮಹಮ್ಮದ್ ಮತ್ತು ಅವರ ಭಾವ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.