HomePage_Banner
HomePage_Banner
HomePage_Banner

ಪುತ್ತೂರು ಅರಣ್ಯ ಇಲಾಖೆಯ ಕಾರ್ಯಾಚರಣೆ | ಮುರದಲ್ಲಿ ಅಕ್ರಮ ಮರ ಸಾಗಾಟ ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಅರಣ್ಯ ಇಲಾಖೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪತ್ತೆ ಮಾಡಿದ್ದಾರೆ.


ನ.1ರಂದು ಘಟನೆ ನಡೆದಿದ್ದು, ಪುತ್ತೂರಿನಿಂದ ಕಬಕ ಕಡೆ ಹೋಗುತ್ತಿದ್ದ ಲಾರಿ(ಕೆ.ಎ.13 -9279)ರಲ್ಲಿ ಅಕ್ರಮವಾಗಿ ಕಿರಾಲ್ಬೋಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪುತ್ತೂರು ಉಪವಲಯರ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮ ಮರ ಸಾಗಾಟದ ಲಾರಿಯನ್ನು ನಿಲ್ಲಿಸಿದ ಚಾಲಕ ಪರಾರಿಯಾಗಿದ್ದ. ತಪಾಸಣೆ ನಡೆಸಿದಾಗ ಲಾರಿಯಲ್ಲಿ ಕೀರಾಲ್‌ಬೋಗಿಯ ೨೩ ಮರದ ದಿಮ್ಮಿಗಳು ಬೆಳಕಿಗೆ ಬಂದಿದೆ. ಲಾರಿ ಮತ್ತು ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಪುತ್ತೂರು ಗಸ್ತಿನ ರಾಜುಚಂದ್ರ ಅರಣ್ಯ ರಕ್ಷಕ ಹಾಗೂ ರಾತ್ರಿ ಕಾಳ ಭೈರವ ಗಸ್ತಿನ ಉಪ ವಲಯ ಅರಣ್ಯಾಧಿಕಾರಿಗಳಾದ ಮಹಬೂಬಸಾಬ, ಪ್ರಸಾದ್, ಕೆ. ಜೆ, ಅರಣ್ಯ ರಕ್ಷಕರುಗಳಾದ. ಉಮೇಶ್, ಕೆ. ಜಿ ಮತ್ತು ನವೀನ್ ಕುಮಾರ್, ಎ, ಪಿ.ಸಿ.ಪಿ. ವಾಚರ್ ವಿನೋದ್ ಹಾಗೂ ಜೀಪು ಚಾಲಕ ಜಗದೀಶ್ ಭಾಗವಹಿಸಿದ್ದರು. ವಶಪಡಿಸಿಕೊಂಡ ಮರದ ದಿಮ್ಮಗಳು ಮತ್ತು ಲಾರಿಯ ಒಟ್ಟು ಮೌಲ್ಯ ರೂ. ೭ ಲಕ್ಷ ಆಗಿದ್ದು, ಮುಂದಿನ ತನಿಖೆಗಾಗಿ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ. ಡಾ: ಕರಿಕಾಲನ್.ರವರ ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರ್ಯಪ್ಪ ರವರ ನಿರ್ದೇಶನದಂತೆ ಪುತ್ತೂರು ವಲಯ ಅರಣ್ಯಾಧಿಕಾರಿ, ಸುಬ್ಬಯ್ಯ ರವರು ತನಿಖೆ ಮುಂದುವರೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.