HomePage_Banner
HomePage_Banner
HomePage_Banner

ನರಿಮೊಗರು ಮರಾಠಿ ಸಮಾಜ ಸೇವಾ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು, ಮುಂಡೂರು, ಶಾಂತಿಗೋಡು ಗ್ರಾಮ ವ್ಯಾಪ್ತಿಯ ಮರಾಠಿ ಸಮಾಜ ಸೇವಾ ಸಂಘ, ನರಿಮೊಗರು ಇಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯು ಅ.30 ರಂದು ನರಿಮೊಗರು ಮರಾಠಿ ಸಮಾಜ ಸೇವಾದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯು ನಡೆಯಿತು.

ಬಳಿಕ ನಡೆದ ಸಭೆಯಲ್ಲಿ ನರಿಮೊಗರು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪರಮೇಶ್ವರ ನಾಯ್ಕ ಬಾವಿಪಟ್ಟೆರವರು ಅಧ್ಯಕ್ಷತೆ ವಹಿಸಿದ್ದರು. ಮುಂಡೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್ ನಾಯ್ಕರವರು ಮಾತನಾಡಿ, ಸರಕಾರದಲ್ಲಿ ಹಲವಾರು ಸೌಲಭ್ಯ ಮತ್ತು ಸಹಕಾರ ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಮತ್ತು ಸಂಘದ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಸಂಘದ ಸ್ಥಾಪಕಾಧ್ಯಕ್ಷರಾದ. ಮಹಾಲಿಂಗ ನಾಯ್ಕ ರವರು ಮಾತನಾಡಿ, ಸಂಘದ ವ್ಯಾಪ್ತಿಯಲ್ಲಿ ಬರುವ ನಮ್ಮ ಜನಾಂಗದ ಯಾವುದೇ ಸಮಸ್ಯೆಗಳನ್ನು ಸಂಘದಲ್ಲಿ ಚರ್ಚಿಸಿ ಸಂಘದ ಮೂಲಕ ಪ್ರಯತ್ನಪಟ್ಟರೆ ಶೇಕಡಾ ನೂರರಷ್ಟು ಸಫಲತೆ ಪಡೆಯಬಹುದಾಗಿದೆ ಎಂದರು.
ಸಂಘದ ಅಧ್ಯಕ್ಷರಾದ. ರವರು ಮಾತನಾಡಿ, ಮೂರು ಗ್ರಾಮದ ಜನತೆಯ ಅಭಿವೃದ್ಧಿ ಮಾಡುವಲ್ಲಿ ಪ್ರಯತ್ನ ಪಡುತ್ತಿದ್ದು ಸ್ವಜಾತಿಯ ಸಹಕಾರ ಕೋರಿದರು. ಹಾಗೂ ಒಗ್ಗಟ್ಟುನಿಂದ ಹೋರಾಟ ನಡೆಸಿ, ಸೌಲಭ್ಯ ಪಡೆದು  ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ನಾಯ್ಕರವರು ವಾರ್ಷಿಕ ವರದಿ ಮಂಡಿಸಿದರು‌ ಯೋಗೀಶ್ ಪಿ.ನಾಯ್ಕ ಶಾಂತಿಗೋಡು ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಈಶ್ವರ ನಾಯ್ಕ ಅಜಲಾಡಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.