HomePage_Banner
HomePage_Banner
HomePage_Banner

ದಲಿತ್ ಸೇವಾ ಸಮಿತಿ ತಾಲೂಕು ಶಾಖಾ ಮಾಸಿಕ ಸಭೆಯಲ್ಲಿ ದಲಿತ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಲಿತ್ ಸೇವಾ ಸಮಿತಿ ಮಾಸಿಕ ಸಭೆ ಕೇವಲ ಸಮಸ್ಯೆಗಳ ಆಲಿಸುವ ಸಭೆ ಆಗಬಾರದು ಸಮಸ್ಯೆಗಳ ಪರಿಹಾರಕ್ಕೆ ಸ್ಪಂಧಿಸುವ ಕಾರ್ಯಕ್ರಮವಾಗಬೇಕ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬ ಮತ್ತು ಆಯ್ದ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡುವ ಮೂಲಕ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಶಾಖೆಯ ಮಾಸಿಕ ಸಭೆ ನಡೆಯಿತು.

ನ.1ರಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ ಕೆ ಅಣ್ಣಪ್ಪ ಕಾರೆಕ್ಕಾಡು ಇವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆಯು ದಿನೇಶ್ ಭವನದ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಕೃಷ್ಣಪ್ಪ, ಸ್ಥಾಪಿತ ಪುತ್ತೂರು ತಾಲೂಕು ಸಂಚಾಲಕರಾದ ಗಣೇಶ ಗುರಿಯಾನ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಿ ಮತ್ತು ದ.ಕ. ಜಿಲ್ಲಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಬಿ ಕೆ ಸೇಸಪ್ಪ ಬೆದ್ರಕಾಡು, ಬಂಟ್ವಾಳ ತಾಲೂಕು ಅಧ್ಯಕ್ಷ ಸಂಜೀವ ಹೆಗಡೆಕೋಡಿ ಮತ್ತು ಬಂಟ್ವಾಳ ತಾಲೂಕು ಅಧ್ಯಕ್ಷೆ ಲಲಿತಾ ಸಾಲೆತ್ತೂರು ಮತ್ತು ಪುತ್ತೂರು ತಾಲೂಕು ಅಧ್ಯಕ್ಷೆ ಸುನಂದಾ ತೆಂಕಿಲ ಉಪಸ್ಥಿತರಿದ್ದರು. ಉರ್ಲಾಂಡಿ ನಾಯರಡ್ಕ ರಮೇಶ ಎಂಬುವವರ ಏಳು ವರ್ಷದ ಮಗನಿಗೆ ಅಸ್ಥಿ ಮಜ್ಜೆಯಲ್ಲಿ ರಕ್ತ ಉತ್ಪತ್ತಿಯಾಗದ ಕಾರಣ ಕೆಎಂಸಿ ಆಸ್ಪತ್ರೆಯಲ್ಲಿ ಐ.ಸಿ.ಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ೨೫ ಕೆ ಜಿ ಅಕ್ಕಿಯನ್ನು ವಿತರಿಸಲಾಯಿತು. ಅದೇ ರೀತಿ ದಲಿತ್ ಸೇವಾ ಸಮಿತಿಯ ೪ ಬಡ ಕುಟುಂಬಗಳಿಗೆ ತಲಾ ೨೫ ಕೆಜಿ ಅಕ್ಕಿಯಂತೆ ರೇಣುಕಾ ಮೊಟ್ಟೆತಡ್ಕ, ನಾಗಮ್ಮ ಕುಕ್ಕಾಡಿ, ದೀಪ್ತಿ ಸಂಪ್ಯ ಹಾಗೂ ರಮೇಶ ಉರ್ಲಾಂಡಿ ನಾಯರಡ್ಕ ಇವರಿಗೆ ತಲಾ ೨೫ ಕೆಜಿ ಯಂತೆ ಅಕ್ಕಿಯನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ಈ ಸಂದರ್ಭದಲ್ಲಿ ಚಂದ್ರಶೇಖರ್ ಯು ಪ್ರಧಾನ ಕಾರ್ಯದರ್ಶಿ ದಲಿತ್ ಸೇವಾ ಸಮಿತಿ ಇವರ ನೇತೃತ್ವದಲ್ಲಿ ಆರೋಗ್ಯ ಉತ್ಪನ್ನ ಬಳಕೆಗಳ ಮಾಹಿತಿ ಕಾರ್ಯಗಾರ ನಡೆಯಿತು. ಕುಮಾರಿ ಶಾರಿಕಾ, ಅಂಕಿತ, ಅಖಿಲಾ ಪ್ರಾರ್ಥಿಸಿದರು. ಸುಂದರ ನರಿಮೊಗರು, ಮನೋಹರ್ ಕೋಡಿಜಾಲ್ ಹಾಗೂ ಅಖಿಲೇಶ್ ತೆಂಕಿಲ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.