HomePage_Banner
HomePage_Banner
HomePage_Banner

ಮಂಗಳೂರು ವಿಮಾನ ನಿಲ್ದಾಣವನ್ನು ಬಂಡವಾಳ ಶಾಹಿಗಳಿಗೆ ನೀಡುವ ಮೂಲಕ ಕೇಂದ್ರ ಸರಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ – ಹೇಮನಾಥ ಶೆಟ್ಟಿ ಕಾವು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬ್ರಿಟೀಷರು ದೇಶ ಆಳುತ್ತಿರುವ ದೇಶಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ ಗಳಿಸಿದ ಬಳಿಕ ಇದೀಗ ಕೇಂದ್ರ ಸರಕಾರ ಬಂಡವಾಳ ಶಾಹಿಗಳಿಗೆ ಪೂರಕವಾಗಿ ನಡೆದು ಕೊಂಡು ಮಂಗಳೂರು ವಿಮಾನ ನಿಲ್ದಾಣವನ್ನು ಬಂಡವಾಳಶಾಹಿಗಳಿಗೆ ನೀಡುವ ಮೂಲಕ ಮತ್ತೊಮ್ಮೆ ದೇಶವನ್ನು ವಿದೇಶಗಳಿಗೆ ಮಾರಾಟ ಮಾಡಲು ಹೊರಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.

ದೇಶದ ಪ್ರಮುಖ ಲಾಭ. ಅಭಿವೃದ್ಧಿಗೆ ಸಂಬಂಧಿಸಿ ವಿಮಾನ ನಿಲ್ದಾಣ, ಬಂದರುಗಳನ್ನು ಬಂಡವಾಳಶಾಹಿಗಳಿಗೆ ನೀಡಲಾಗುತ್ತಿದೆ. ಬಿ.ಎಸ್.ಎನ್.ಎಲ್ ಕಂಪೆನಿಗಳನ್ನು ಮುಳುಗಿಸಿ ಜಿಯೋ ಕಂಪೆನಿಗೆ ನೀಡಿ ಆಗಿದೆ. ಕೃಷಿ ಭೂ ಮಸೂದೆಯ ಮೂಲಕ ರೈತರ ಉತ್ಪನ್ನಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿಸಿ ಎಪಿಎಂಸಿಯನ್ನು ಸರ್ವನಾಶ ಮಾಡಿ ಆಗಿದೆ. ಒಟ್ಟಾರೆಯಾಗಿ ಲಾಭದ ಉದ್ದೇಶದಿಂದ ಮತ್ತು ಆರ್ಥಿಕ ಬಲಾಡ್ಯಕ್ಕಾಗಿ ಎಲ್ಲವನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವುದರಿಂದ ದೇಶದ ಜನರು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈಗಾಗಲೇ ದೇಶದಲ್ಲಿ ೮ ವಿಮಾನ ನಿಲ್ದಾಣಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿ ಆಗಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ೫೦ ವರ್ಷಕ್ಕೆ ಮಾರಾಟ ಮಾಡುವ ಮೂಲಕ ದೇಶದಲ್ಲಿ ದುಡ್ಡ ಮಾಡುವವರಿಗೆ ಏನು ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗಳಿಗೆ ಲೀಸ್‌ಗೆ ಕೊಡಲಾಗಿದೆ. ಅದಾನಿ ಕಂಪೆನಿಯವರು ಜರ್ಮನಿ ಕಂಪೆನಿಗೆ ಅಂಡರ್ ಲೀಸ್‌ಗೆ ಕೊಟ್ಟಿದ್ದಾರೆ. ಇದರಿಂದ ವಿದೇಶಿಯರಿಗೆ ನೇರವಾಗಿ ಇಲ್ಲಿ ಯಾವುದೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಅಲ್ಲದೆ ವಿದೇಶಿಯರಿಗೆ ಈ ದೇಶದ ಭದ್ರತೆಯನ್ನು ನಡೆಸುವ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಳ್ಳಸಾಗಣಿಕೆ ಜೊತೆಗೆ ದೇಶದ ಭದ್ರತೆಗೂ ತೊಂದರೆ ಆಗಲಿದೆ ಎಂದರು.

ಲೋಕಸಭಾ ಸದಸ್ಯತನವೂ ಮಾರಾಟ:
ದೇಶದ ಎಲ್ಲಾ ವ್ಯವಸ್ಥೆಯನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಮೂಲಕ ಮುಂದೆ ಲೋಕಸಭಾ ಸದಸ್ಯತನವನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಹಿಂದೆ ಮುಂದೆ ನೋಡುವುದಿಲ್ಲ. ಸಂಸದೀಯ ವ್ಯವಸ್ಥೆ, ಪ್ರಜಾತಂತ್ರ ವ್ಯವಸ್ಥೆ ಸೇರಿದಂತೆ ಒಂದೊಂದೆ ಮಾರಾಟ ಮಾಡುವ ಮೂಲಕ ದೇಶವನ್ನು ಬಿಜೆಪಿ ಸರ್ವನಾಶ ಮಾಡಲಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಮಾಡಿ:
ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ ನಾಮಕರಣ ಮಾಡುವ ಒತ್ತಾಯದ ಜೊತೆಗೆ ಪುತ್ತೂರಿಗೆ ಬಹಳಷ್ಟು ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕೋಟಿ ಚೆನ್ನಯ ಹೆಸರನ್ನು ನಾಮಕರಣ ಮಾಡುವಂತೆ ಕಾವು ಹೇಮನಾಥ ಶೆಟ್ಟಿಯವರು ಒತ್ತಾಯಿಸಿದ್ದಾರೆ. ಕೋಟಿ ಚೆನ್ನಯ ಹೆಸರಿನ ಮೂಲಕ ಪಡುಮಲೆಯ ಇತಿಹಾಸವನ್ನು ಪರಿಚಯಿಸುವ ಕೆಲಸ ಆಗಲಿದೆ ಎಂದರು.

ರೂ. ೨ಸಾವಿರ ಮರಳು ಬರುತ್ತಿಲ್ಲ:
ನ.೧ ರಿಂದ ರೂ. ೨ಸಾವಿರಕ್ಕೆ ಮರಳು ಸಿಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಕುರಿತು ಮಾದ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದೀಗ ಆ ಪ್ರಕ್ರಿಯೆ ಯಾವುದು ಕೂಡಾ ನಡೆಯುತ್ತಿಲ್ಲ. ಹಾಗಾಗಿ ಸಂಸದರು ತನ್ನ ಮಾತಿನಂತೆ ನಡೆದು ಕೊಳ್ಳಬೇಕು. ಮರಳು ಬೇಕಾದವರು ಸಂಸದರ ಮೊಬೈಲ್ ನಂಬರ್: 9448549445  ಅನ್ನು ಸಂಪರ್ಕಿಸುವಂತೆ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಸದಸ್ಯ ಪರಮೇಶ್ವರ ಭಂಡಾರಿ, ಕಾಂಗ್ರೆಸ್ ಮುಖಂಡ ನೇಮಕ್ಷಾ ಸುವರ್ಣ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.