HomePage_Banner
HomePage_Banner
HomePage_Banner

ದರ್ಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತ- ಗಂಭೀರ ಗಾಯಗೊಂಡಿದ್ದ ಒಂಭತ್ತು ವರ್ಷ ಪ್ರಾಯದ ಬಾಲಕಿ ದಾರುಣ ಸಾವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಬೈಪಾಸ್ ನಲ್ಲಿ ಭೀಕರ ರಸ್ತೆ ಅಪಘಾತ ನ.2ರಂದು ಮಧ್ಯಾಹ್ನ ಸಂಭವಿಸಿದ್ದು ಘಟನೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಈರ್ವರು ಮಕ್ಕಳು, ಮತ್ತು ಓರ್ವ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಒಂಭತ್ತು ವರ್ಷ ಪ್ರಾಯದ ಒಂದು ಮಗು ಸಾವನ್ನಪ್ಪಿದೆ. ಇನ್ನೋರ್ವ ಬಾಲಕಿ ಅನನ್ಯ ಮತ್ತು‌ ಮಹಿಳೆಯನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೆ ಬಲಿಯಾದ ಮಗುವನ್ನು ಗೋಪಿ ಮತ್ತು ಕವಿತಾ ದಂಪತಿಯ ಪುತ್ರಿ  ಸ್ವಾತಿ (9ವ‌.) ಎಂದು ಗುರುತಿಸಲಾಗಿದೆ.   

ಮಂಗಳೂರಿನಿಂದ ಜಾಲ್ಸೂರಿಗೆ ಚಲಿಸುತ್ತಿದ್ದ ಚಾಲಕ ತೋಮಸ್ ರವರ ಸ್ವಿಫ್ಟ್‌ ಕಾರು  (ಕೆಎಲ್‌ 14ಆರ್‌ 5717) ದರ್ಬೆ ಬೈಪಾಸಿನ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ  ಈರ್ವರು ಮಕ್ಕಳು ಹಾಗೂ ಓರ್ವ ಮಹಿಳೆಗೆ ಡಿಕ್ಕಿ ಹೊಡೆದಿರುವ ಸ್ವಿಫ್ಟ್ ಕಾರು ಮುಂಭಾಗದಲ್ಲಿ ನಿಂತಿದ್ದ  ಸವಣೂರಿನ ಅಲೆಕಾಡಿ ನಿವಾಸಿ ಉಬೈದ್ ಎಂಬವರ ಎಕ್ಸ್‌ ಕ್ರಾಸ್‌  (ಕೆಎ3ಎನ್‌ ಎಕ್ಸ್‌ 5100) ಕಾರಿಗೆ ಡಿಕ್ಕಿ ಹೊಡೆದಿದೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ತೋಮಸ್ ರವರ ಅಜಾಗೃಕತೆಯ ಚಾಲನೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.