HomePage_Banner
HomePage_Banner
HomePage_Banner

ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದಿಂದ ‘ಅದೃಷ್ಟಲಕ್ಷ್ಮಿ’ ಕೂಪನ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಯಶಸ್ವಿ 30ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘವು ತನ್ನ ಗ್ರಾಹಕರಿಗೆ ಜಾರಿಗೆ ತಂದಿರುವ ‘ಅದೃಷ್ಟ ಲಕ್ಷ್ಮಿ’ ಕೂಪನ್‌ನನ್ನು ನ.೨ರಂದು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ನ.1ರಿಂದ 30ರ ತನಕ ಬ್ಯಾಂಕ್‌ನಲ್ಲಿ ನಿರಖು ಠೇವಣಿ ಇಡುವ ಗ್ರಾಹಕರಿಗೆ ಚಿನ್ನ, ಬೆಳ್ಳಿ ನಾಣ್ಯ ಹಾಗೂ ಆಕರ್ಷಕ ಬಹುಮಾನ ಘೋಷಿಸಲಾಗಿದೆ. ಇದರ ಉದ್ಘಾಟನೆಯನ್ನು ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯ ಸರ್ವೀಸ್ ಮೇನೇಜರ್, ಯುವವಾಹಿನಿ ಉಪ್ಪಿನಂಗಡಿ ಇದರ ಅಧ್ಯಕ್ಷ ಚಂದ್ರಶೇಖರ್‌ರವರು ಉದ್ಘಾಟಿಸಿದರು. ಸಂಘದ ಸ್ಥಾಪಕಾಧ್ಯಕ್ಷ ವರದ್ರಾಜ್‌ರವರು ಠೇವಣಿ ಪತ್ರ ಹಸ್ತಾಂತರಿಸಿದರು. ಡಾ.ರಾಜಾರಾಮ್ ಕೆ.ಬಿ.,ಯವರು ಸಹಾಯಧನದ ಚೆಕ್ ಹಸ್ತಾಂತರಿಸಿದರು. ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಯೋಜನೆಯ ಕುರಿತು ಮಾಹಿತಿ ನೀಡಿದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಗೌಂಡತ್ತಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನಿರ್ದೇಶಕ ವೆಂಕಪ್ಪ ಪೂಜಾರಿ ಮರುವೇಳು ವಂದಿಸಿದರು. ನಿರ್ದೇಶಕರಾದ ಬಾಳಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ಶಶಿಧರ ಪಟ್ಟೇರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.