HomePage_Banner
HomePage_Banner
HomePage_Banner

ರಾಮನಗರ-ಕೋಡ್ಯಡ್ಕ ದಲಿತ ಕಾಲೋನಿ ಸಂಪರ್ಕ ರಸ್ತೆ ದುರವಸ್ಥೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಗರದಿಂದ ಕೋಡ್ಯಡ್ಕ ದಲಿತ ಕಾಲೋನಿಗೆ ಸಂಪರ್ಕ ಕಲ್ಪಿಸುವ ಗ್ರಾಮ ಪಂಚಾಯತ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯ ದುರವಸ್ಥೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ನೆಲ್ಯಾಡಿ-ಬಲ್ಯ ಜಿ.ಪಂ.ರಸ್ತೆಯಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ರಾಮನಗರದಿಂದ ಕೋಡ್ಯಡ್ಕ ದಲಿತ ಕಾಲೋನಿಗೆ ಸಂಪರ್ಕ ಕಲ್ಪಿಸುವ ಅಂದಾಜು 2 ಕಿ.ಮೀ. ಉದ್ದದ ಈ ರಸ್ತೆಯು ನೆಲ್ಯಾಡಿ ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಸದ್ರಿ ರಸ್ತೆಯು ಈಗ ಸಂಪೂರ್ಣ ಹದಗೆಟ್ಟಿದ್ದು ಕಳೆದ ಮಳೆಗಾಲದ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಸಾಧ್ಯವಾಗದೇ ಈ ಭಾಗದ ಗ್ರಾಮಸ್ಥರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಸದ್ರಿ ರಸ್ತೆಯಲ್ಲಿ ಬರುವ ಹುಣ್ಸೆಬೆಟ್ಟು ಎಂಬಲ್ಲಿ ೫ ವರ್ಷಕ್ಕೆ ಮೊದಲು ತೋಡಿಗೆ ಸೇತುವೆ ನಿರ್ಮಾಣ ಆಗಿದೆ. ಅಲ್ಲದೇ ಇಲ್ಲಿ ೧೦೦ ಮೀ.ನಷ್ಟು ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆದಿದೆ. ಉಳಿದಂತೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಂದಾಜು ೧೦೦ ಮೀ.ಉದ್ದಕ್ಕೆ ರಸ್ತೆ ತೋಡಿನ ಬದಿಯಲ್ಲಿಯೇ ಹಾದುಹೋಗಿದ್ದು ಜರಿದು ಬೀಳುವ ಸ್ಥಿತಿಯಲ್ಲಿ ಇದೆ.

ಕುಂತೂರಿಗೆ ಸಂಪರ್ಕ:
ರಾಮನಗರದಿಂದ ಕೋಡ್ಯಡ್ಕ ದಲಿತ ಕಾಲೋನಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರಿಗೂ ಸಂಪರ್ಕ ಸಾಧ್ಯವಿದೆ. ಹುಣ್ಸೆಬೆಟ್ಟು, ಪುಳಿತ್ತಡಿ, ಪಾತ್ರಾಜೆ,ಕೋಡ್ಯಡ್ಕ, ಹೊಸಮನೆ, ನಡುಗುಡ್ಡೆ, ಬನಾರಿ, ಮತ್ರಾಡಿ ಪ್ರದೇಶದ ಜನರಿಗೆ ಈ ರಸ್ತೆ ಅನಿವಾರ್ಯವಾಗಿದೆ. ೧೫ಕ್ಕೂ ಹೆಚ್ಚು ದಲಿತರ ಮನೆಗಳೂ ಸೇರಿದಂತೆ ೬೦ಕ್ಕೂ ಹೆಚ್ಚು ಮನೆಗಳು ಈ ಭಾಗದಲ್ಲಿವೆ. ಈ ಭಾಗದ ಶಾಲಾ ಮಕ್ಕಳು, ನೆಲ್ಯಾಡಿ, ಕಡಬ ಭಾಗಕ್ಕೆ ದಿನಂಪ್ರತಿ ಉದ್ಯೋಗಕ್ಕೆ ಹೋಗುವವರೆಲ್ಲರಿಗೂ ಈ ರಸ್ತೆ ಅನಿವಾರ್ಯವಾಗಿದೆ. ದ್ವಿಚಕ್ರ ವಾಹನ ಓಡಾಟಕ್ಕೂ ಸಾಧ್ಯವಾಗದ ರೀತಿಯಲ್ಲಿ ಈಗ ರಸ್ತೆ ಕೆಟ್ಟು ಹೋಗಿರುವುದರಿಂದ ಗ್ರಾಮಸ್ಥರು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಭಾಗದ ಜನರಿಗೆ ಇದೊಂದೇ ಸಂಪರ್ಕ ರಸ್ತೆಯಾಗಿರುವುದರಿಂದ ರಸ್ತೆಯ ದುರವಸ್ಥೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸದ್ರಿ ರಸ್ತೆಯನ್ನು ಸಂಚಾರ ಯೋಗ್ಯ ರಸ್ತೆಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚುನಾವಣೆ ಬಹಿಷ್ಕಾರವೊಂದೇ ಮಾರ್ಗ..!
ಚುನಾವಣೆ ಸಂದರ್ಭದಲ್ಲಿ ರಸ್ತೆ, ನೀರಿನ ಸೌಲಭ್ಯ ಕಲ್ಪಿಸುವ ಭರವಸೆ ನೀಡುವ ಜನಪ್ರತಿನಿಧಿಗಳಿಗೆ ಬಳಿಕ ಸಮಸ್ಯೆಯ ಬಗ್ಗೆ ಅರಿವೇ ಇರುವುದಿಲ್ಲ. ರಾಮನಗರ-ಕೋಡ್ಯಡ್ಕ ದಲಿತ ಕಾಲೋನಿ ಸಂಪರ್ಕ ರಸ್ತೆ ದುರವಸ್ಥೆ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಮೂಲಭೂತ ಸೌಲಭ್ಯವಾಗಿರುವ ರಸ್ತೆ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಮತದಾನ ಮಾಡಿ ಏನೂ ಪ್ರಯೋಜನ. ಆದ್ದರಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ರಸ್ತೆ ಬಳಕೆದಾರರಾದ ಧರ್ಣಪ್ಪ ಗೌಡ ಪುಳಿತ್ತಡಿ, ನಿತಿನ್ ಮಾರ್ಲ, ಮುದರ ಕೋಡಿಯಡ್ಕ, ನಕ್ಕುರ ಕೋಡಿಯಡ್ಕ, ಜನಾರ್ದನ ಹೊಸಮನೆ ಮತ್ತಿತರರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.