HomePage_Banner
HomePage_Banner

ನೂಜಿಬಾಳ್ತಿಲ ಗ್ರಾ ಪಂ ನಲ್ಲಿ ಜಮಾಬಂದಿ


ಕಡಬ: ನೂಜಿಬಾಳ್ತಿಲ ಗ್ರಾ ಪಂ ನಲ್ಲಿ 2019- 20ನೇ ಸಾಲಿನ ಜಮಾಬಂದಿ ಸಭೆಯು ನ. 03ರಂದು ನೂಜಿಬಾಳ್ತಿಲ ರಾಜೀವ ಗಾಂಧಿ ಸೇವಾಕೇಂದ್ರ ದಲ್ಲಿ ನಡೆಯಿತು. ಕಡಬ ತಾಲೂಕು ಪಂ ವ್ಯವಸ್ಥಾಪಕ ರೂ ಸಹಾಯಕ ಅಧಿಕಾರಿ ಶಿವಪ್ರಕಾಶ್ ರವರ ಅದ್ಯಕ್ಷ ತೆಯಲ್ಲಿ ನಡೆದ ಜಮಾಬಂದಿಯಲ್ಲಿ ನೋಡಲ್ ಅಧಿಕಾರಿ ಯಾಗಿ ಭಾಗವಹಿಸಿ ನೂಜಿಬಾಳ್ತಿಲ ಗ್ರಾ ಪಂ ನಲ್ಲಿ , 2019_20ನೇ ಸಾಲಿನಲ್ಲಿ ನಡೆದ ಜಮಾ ಖರ್ಚಿ ನ ಲೆಕ್ಕಾಚಾರ ಗಳನ್ನು ಪರಿಶೀಲಿಸಿದ್ದು ಗ್ರಾ. ಪಂ. ನಲ್ಲಿ ಅತ್ಯುತ್ತಮ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮಾಡಲಾಗಿದ್ದು ಸಂಪೂರ್ಣ ದಾಖಲೆಗಳನ್ನು ಸುಸೂತ್ರವಾಗಿ ನಿರ್ವಹಿಸಿದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು.

ಜಿ ಪಂ ಸದಸ್ಯ ಪಿಪಿ ವರ್ಗೀಸ್ ಮಾತನಾಡಿ ನಮ್ಮ ಕಡಬ ಜಿ ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ನೂಜಿಬಾಳ್ತಿಲ ಗ್ರಾ ಪಂ ಅತೀ ಹೆಚ್ಚಿನ. ಅಭಿವೃದ್ಧಿ ಹಾಗುವ ಮೂಲಕ ಈಗಾಗಲೇ ಜಮಾ ಖರ್ಚಿನ. ಲೆಕ್ಕಪತ್ರ ಗಳಲ್ಲೂ ಅಧಿಕಾರಿ ಗಳಿಂದ. ಶ್ಲಾಘನೆ ಗೊಳಗಾಗಿದ್ದು ನನ್ನ ವತಿಯಿಂದಲ್ಲೂ ಗ್ರಾ ಪಂ ಗೆ ಅಭಿನಂದನೆಗಳನ್ನು ಸಲ್ಲಿಸು್ತಿದ್ದೇನೆ ಎಂದರು. ಗ್ರಾ ಪಂ ಮಾಜಿ ಸದಸ್ಯ ರಾಮಚಂದ್ರ ಗೌಡ, ರೆಂಜಿಲಾಡಿ ಶಾಲಾ ಮುಖ್ಯ ಶಿಕ್ಷಕ ಮೇದ ಪ್ಪ ಗೌಡ, ನೂಜಿಬಾಳ್ತಿಲ ಗ್ರಾ. ಪಂ ಮಾಜಿ ಅದ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಮಾಜಿ ಸದಸ್ಯ ಕೆ ಜೆ ತೋಮಸ್ ನೂಜಿಬಾಳ್ತಿಲ, ಉ ಹಿ ಪ್ರಾ ಶಾಲಾ ಮುಖ್ಯಶಿಕ್ಷಕಿ ಸುಂದರಿ ಸೇರಿದಂತೆ ಗ್ರಾಮ ಸ್ಥರು ಉಪಸ್ಥಿತರಿದ್ದರು. ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಆನಂದ ರವರು ಸ್ವಾಗತಿಸಿ, ಕಾರ್ಯದರ್ಶಿ ಗುರುವ ಎಸ್ ಕಾರ್ಯಕ್ರಮ ನಿರೂಪಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.