HomePage_Banner
HomePage_Banner
HomePage_Banner

ಕಡಬ ಪೇಟೆಯಲ್ಲಿ ಕೊರೋನಾ ಜಾಗೃತಿ ಜಾಥಾ

Puttur_Advt_NewsUnder_1
Puttur_Advt_NewsUnder_1

ಕಡಬ ಪೇಟೆಯಲ್ಲಿ ಕೊರೋನಾ ಜಾಗೃತಿ ಜಾಥಾ

ಕಡಬ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕಡಬ ಇದರ ವತಿಯಿಂದ ಕಡಬ ಪೇಟೆಯಾದ್ಯಂತ ಕೊರೋನಾ ಜಾಗೃತಿ ಜಾಥಾ ನ.3ರಂದು ನಡೆಯಿತು.
ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್  ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಕೊರೋನಾ ರೋಗವನ್ನು ಬೇರು ಸಮೇತ ಕಿತ್ತೊಗೆಯಲು ಪ್ರತಿಯೊಬ್ಬರು ಪ್ರಯತ್ನ ಪಟ್ಟರೆ ಮಾತ್ರ ಸಾಧ್ಯ ಈ ನಿಟ್ಟಿನಲ್ಲಿ ಕೊರೋನಾ ವೈರಸ್ ಬಗ್ಗೆ ಮಾಹಿತಿ ನೀಡಿ ಜಾಗೃತಿ ನೀಡಬೇಕಾಗಿದೆ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಜತೆ ನಾವೇಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್, ಕಡಬ ತಾಲೂಕು ಉಪತಹಸೀಲ್ದಾರ್ ಗಳಾದ ಕೆ.ಟಿ.ಮನೋಹರ್,ನವ್ಯ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್.ಕೆ, ಸಿಬ್ಬಂದಿ ವಾರಿಜಾ, ಪ್ರಮುಖರಾದ ಕಡಬ ಸಿಎ ಬ್ಯಾಂಕ್  ನಿರ್ದೇಶಕ ಸತೀಶ್ ಮೇಲಿನ ಮನೆ, ಗ್ರಾ.ಪಂ. ಮಾಜಿ ಸದಸ್ಯ ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್. ಕೆ.ಪಿ.ತೋಮಸ್, ಶಿಕ್ಷಕ ದಿಲೀಪ್, ಗ್ರಾಮ ಸಹಾಯಕ ವಿಜಯ ಕುಮಾರ್ ಸೇರಿದಂತೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೋಂಡಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.