HomePage_Banner
HomePage_Banner
HomePage_Banner

ನೌಕರರಿಗೆ ಅನ್ಯಾಯವಾದಲ್ಲಿ ಹೋರಾಟ, ಅಭಿವೃದ್ಧಿ ಪರ ಶ್ರಮಿಸುವೆ – ಕೆ ಎಸ್ ಆರ್ ಟಿ ಸಿ ಎಸ್ಸಿ, ಎಸ್ಟಿ ಘಟಕದ ಗೌರವಾಧ್ಯಕ್ಷ ಸೇಸಪ್ಪ ಬೆದ್ರಕಾಡು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗಕ್ಕೆ ಸಂಬಂಧಿಸಿ ಘಟಕಗಳ ಯಾವುದೇ ನೌಕರರಿಗೆ ಅನ್ಯಾಯ ಆದಲ್ಲಿ ಅವರ ಪರವಾಗಿ ಘಟಕಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಭಾಗ ಸಂಘಟನೆ ಕೆಲಸ ಮಾಡಲಿದೆ ಎಂದು ಸಂಘಟನೆ ಗೌರವಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಂಘ ಇದರ ಪುತ್ತೂರು, ಬಿ.ಸಿ.ರೋಡ್, ಬೆಳ್ತಂಗಡಿ, ಸುಳ್ಯ, ಧರ್ಮಸ್ಥಳ, ಮಡಿಕೇರಿ ಘಟಕಗಳಿಗೆ ಗೌರವಾಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಮುಂದೆ ಘಟಕಗಳಲ್ಲಿ ದುಡಿಯುವ ನೌಕರರ ಹಿತಾಶಕ್ತಿಗಾಗಿ ಕೆಲಸ ನಿರ್ವಹಿಸಲಿದ್ದೇನೆ. ಅದೇ ರೀತಿ ಘಟಕಗಳ ಅಭಿವ್ರದ್ಧಿಗೆ ನಮ್ಮ ಸಂಘಟನೆ ಶ್ರಮಿಸಲಿದೆ ಎಂದು ಅವರು ಹೇಳಿದರು. ಸಂಘದಲ್ಲಿ 9 ಮಂದಿ ಸದಸ್ಯರಿದ್ದಾರೆ. ಅಧ್ಯಕ್ಷರಾಗಿ ಕೆ.ಎಸ್.ಆರ್.ಟಿ.ಸಿ ಮಡಿಕೇರಿ ಘಟಕದ ಕುಮಾರ ಸ್ವಾಮಿ, ಉಪಾಧ್ಯಕ್ಷರಾಗಿ ಪುತ್ತೂರು ಘಟಕದ ಬಾಬು, ಪ್ರಧಾನಕಾರ್ಯದರ್ಶಿ ಆಗಿ ಧರ್ಮಸ್ಥಳ ಘಟಕದ ಶೀನಪ್ಪ ಕೆ, ಖಜಾಂಜಿಯಾಗಿ ಪುತ್ತೂರು ವಿಭಾಗದ ನಿತೀಶ್ ನಾಯ್ಕ ಅವರು ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬಾಬು, ಶೀನಪ್ಪ ಕೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.